ಭಟ್ಕಳ: ಭಾರತವು ಜಾತ್ಯಾತೀತ ರಾಷ್ಟçವಾಗಿದ್ದು ಇಲ್ಲಿನ ಕೋಮುವೈಷಮ್ಯದಿಂದಾಗಿ ಬೇಸತ್ತಿದ್ದಾರೆ ಎಂದು ಉದಯವಾಣಿಯ ಹಿರಿಯ ಪತ್ರಕರ್ತ ಜಿ.ಯು.ಭಟ್ಟ ಹೊನ್ನಾವರ ಹೇಳಿದರು.
ಅವರು ಗುರುವಾರ ಇಲ್ಲಿನ ರಾಯಲ್ ಓಕ್ ಹೊಟೇಲ್ ನಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ದೇಶದಲ್ಲಿ ಶೇ.೯೦% ಮಂದಿ ಶಾಂತಿ ಸೌಹಾರ್ದತೆಯನ್ನು ಬಸಿದರೆ ಶೇ.೯೦% ಮಂದಿ ರಾಜಕಾರಣಿಗಳು ಕೋಮುಸಂಘರ್ಷ ಬಯಸುತ್ತಾರೆ. ಇದಕ್ಕಾಗಿಯೆ ದೇಶದಲ್ಲಿ ಅಶಾಂತಿ ಸೃಷ್ಟಿಯಾಗುತ್ತಿದೆ ಎಂದ ಅವರು, ಕೋಮುಗಲಭೆಗಳಲ್ಲಿ ಬಡವರ ಮಕ್ಕಳು ಸಾಯುತ್ತಾರೆ. ಶ್ರೀಮಂತರ ಮಕ್ಕಳು ಸೇಫಾಗಿರುತ್ತಾರೆ. ದೇಶದಲ್ಲಿ ನಡೆಯುತ್ತಿರುವ ಎಲ್ಲ ಅತಿರೇಕಗಳಿಗೆ ಒಂದು ದಿನ ಕಡಿವಾಣ ಬೀಳಲಿದೆ. ಎಲ್ಲರೂ ಕೂಡ ಸಂಘರ್ಷದಿಂದ ಹೊರಬರಬೇಕು, ಇಂತಹ ಸಂವಾದಗಳು, ಪರಸ್ಪರನ್ನು ಅರಿಯುವ ಕಾರ್ಯಕ್ರಮಗಳು ಇದಕ್ಕೆ ಸಹಕಾರಿಯಾಗಬಲ್ಲವು ಎಂದರು. ಧರ್ಮಗಳಲ್ಲಿನ ಹುಳುಕುಗಳನ್ನು ಹುಡುಕುವುದಕ್ಕಿಂತ ಆಯಾ ಧರ್ಮದ ಒಳ್ಳೆಯ ಅಂಶಗಳನ್ನು ತಿಳಿದುಕೊಳ್ಳಬೇಕು, ಹಿಂದೂ ಧರ್ಮದಲ್ಲಿಯೂ ನಾನಾ ರೀತಿಯ ಕೊರತೆಗಳಿವೆ. ರಾಮಾನುಚಾರ್ಯ, ಮಧ್ವಾಚಾರ್ಯ ಸೇರಿದಮತೆ ವಿವಿಧ ಸಿದ್ದಾಂತಗಳಲ್ಲಿ ವೈರುಧ್ಯಗಳಿವೆ. ಹಾಗೆಯೆ ಬಸವಣ್ಣನವರ ವಚನಗಳು ದೇವರಿಗಿಂತ ನಾಸ್ತಿಕತೆ ಹೆಚ್ಚಿನ ಒತ್ತು ನೀಡಿವೆ ಈ ಎಲ್ಲ ವೈವಿದ್ಯತೆಗಳಲ್ಲಿ ಏಕತೆಯನ್ನು ಕಂಡು ಕೊಳ್ಳುತ್ತ ನಾವು ಬದುಕುತ್ತಿದ್ದೇವೆ ಎಂದರು.
ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞ ಸನ್ಮಾನಿಸಿ ಗೌರವಿಸಿದರು. ಮುಹಮ್ಮದ್ ರಝಾ ಮಾನ್ವಿ ಸನ್ಮಾನ ಪತ್ರವನ್ನು ಓದಿದರು. ಮುಖಂಡರಾದ ತಲ್ಹಾ ಸಿದ್ದಿಬಾಪ, ಮೌಲಾನ ಸೈಯ್ಯದ್ ಝುಬೇರ್ ಉಪಸ್ಥಿತರಿದ್ದರು.