ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕೊಂಕಣ ರೇಲ್ವೆ ವಿವಿಧ ಬೇಡಿಕೆ ಈಡೇರಿಸುವಂತೆ ಶಾಸಕ ದಿನಕರ ಶೆಟ್ಟಿ ಒತ್ತಾಯ

ಕೊಂಕಣ ರೇಲ್ವೆ ವಿವಿಧ ಬೇಡಿಕೆ ಈಡೇರಿಸುವಂತೆ ಶಾಸಕ ದಿನಕರ ಶೆಟ್ಟಿ ಒತ್ತಾಯ

Sun, 24 Apr 2022 03:27:05  Office Staff   SO News

ಗೋವಾ : ಕುಮಟಾ ರೇಲ್ವೆ ನಿಲ್ದಾಣದಲ್ಲಿ ಪ್ಲಾಟ್ ಪಾರ್ಮ್ ಎತ್ತರಿಸಿ ನಿಲ್ದಾಣದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಕೊಂಕಣ ರೇಲ್ವೆ ಕಾರ್ಪೋರೇಷನ್ ಗೆ ಶಾಸಕ ದಿನಕರ ಶೆಟ್ಟಿ ಶನಿವಾರ ಒತ್ತಾಯಿಸಿದ್ದಾರೆ.  

ಗೋವಾದಲ್ಲಿ ನಡೆದ ಕೊಂಕಣ ರೇಲ್ವೆ ಕಾರ್ಪೋರೇಷನ್ ನ ವತಿಯಿಂದ ನಡೆದ ರೇಲ್ವೆ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

 ಕುಮಟಾ ರೇಲ್ವೆ ನಿಲ್ದಾಣದಲ್ಲಿ ಪ್ಲಾಟ್ಪಾರ್ಮ್ ಕಿರಿದಾಗಿದ್ದು‌ ಏರಿಳಿಯುವಾಗ ಪ್ರಯಾಣಿಕರು ತುಂಬಾ ಸಂಕಷ್ಟ ಅನುಭವಿಸುತ್ತಾರೆ. ಅಲ್ಲದೆ ನಿಲ್ದಾಣದ ಅಶುದ್ಧತೆಯಿಂದ ಕೂಡಿದ್ದು ಮೂಲಭೂತ ಸಮಸ್ಯೆಗಳಿಂದ ನಲುಗುತ್ತಿದೆ. ಅಲ್ಲದೆ ಸಾಕಷ್ಟು ಸಮಸ್ಯೆಗಳು ತಾಂಡವವಾಡುತ್ತಿವೆ. ಕೆಲವೊಮ್ಮೆ ಭಾಷಾ ಸಮಸ್ಯೆ ಎದುರಾಗುತ್ತಿದ್ದು.
ನೇಮಕಾತಿಯಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕೆಂದು ಶಾಸಕರು ಹೇಳಿದ್ದಾರೆ.

 ಕುಮಟಾ ಸಮೀಪದ ಹೆಗಡೆಯಲ್ಲಿ
ರೈಲ್ವೇ ಒವರ್ ಬ್ರಿಡ್ಜ್ ಸಮಸ್ಯೆಯ ಪರಿಹರಿಸಬೇಕು. ಕಾರವಾರ ಸೇರಿದಂತೆ ರಾಜ್ಯದ ಯಾವುದೇ ನಿಲ್ದಾಣದಲ್ಲಿ ರೈಲು ಪಾರ್ಕಿಂಗ್ ಸೌಲಭ್ಯ ಮತ್ತು ನೀರು ತುಂಬುವ ವ್ಯವಸ್ಥೆ ಮಾಡಬೇಕು.ಕಾರವಾರ-ಯಶವಂತಪುರ  ರೈಲಿನ ಉಳಿದ ನಾಲ್ಕು ದಿನ ಯಾವುದಾದರೂ ಹೊಸ ಗಾಡಿ ಓಡಿಸಿ
ಜನರಿಗೆ ಅನುಕೂಲ ಮಾಡುವುದರಿಂದ ಕಾರವಾರ ಸುರತ್ಕಲ್ ಕಾರವಾರ ಭಾಗದ ನಿತ್ಯ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
(ಮಡಗಾಂವ್ ಮಂಗಳೂರು ಡೆಮು ಹೊರತಾಗಿ )ಕುಮಟಾ ನಿಲ್ದಾಣದ ಎರಡನೇ ಪ್ಲಾಟ್ ಫಾರಂ ಎತ್ತರಿಸಬೇಕೆಂದು ತಿಳಿಸಿದರು.

 ಪಂಚಗಂಗಾ ರೈಲು ಕಾರವಾರ ತಲುಪುವ ಸಮಯ ಸರಿಪಡಿಸಿ  ಬೆಳಿಗ್ಗೆ
7.45ಕ್ಕೆ ತಲುಪುವಂತೆ ಮಾಡಬೇಕು.
ಕಾರವಾರ-ಯಶವಂತಪುರ ಹಗಲು ಗಾಡಿ ತೀರಾ ಸುದೀರ್ಘವಾಗಿ ವಿಳಂಭವಾಗಿ ಕಾರವಾರಕ್ಕೆ ರಾತ್ರಿ 10.30 ಕ್ಜೆ ತಲುಪುವಂತಾಗಬೇಕು.
 ಕುಂದಾಪುರ ಕ್ಕೆ ನೇತ್ರಾವತಿ ಎಕ್ಸ್ ಪ್ರೆಸ್ ರೈಲು ನಿಲುಗಡೆ ಮತ್ತೆ ಆರಂಭಿಸಿ
ಹಾಗು ಹೊಸ 22113 ಕೊಚ್ಚುವೆಲಿ ಮುಂಬಯಿ ರೈಲಿಗೆ ನಿಲುಗಡೆ ನೀಡಬೇಕು.
 ಕುಂದಾಪುರ ಯಾತ್ರಿ ನಿಲ್ದಾಣವಾಗಿದ್ದು ಅದರ ಮೆಲ್ಛಾವಣಿಯನ್ನು ವಿಸ್ತರಣೆ ಮಾಡಿ
ಈಡಿ ಪ್ಲಾಟ್ ಪಾರಂ ಹೊಂದುವಂತೆ ಮಾಡಬೇಕು ಇದರಿಂದ ಮಳೆಯ ಸಮಸ್ಯೆಗೆ ಪರಿಹಾರವಾಗುತ್ತದೆ‌ ಎಂದು ರೇಲ್ವೆ ಮಂಡಳಿಗೆ ಒತ್ತಾಯಿಸಿದ್ದಾರೆ. ಕೊಂಕಣ ರೇಲ್ವೆ ಸಭೆಯಲ್ಲಿ ಮಹಾರಾಷ್ಟ್ರ ರಾಜ್ಯದ ಸಂಸದರು, ಶಾಸಕರು ಹಿರಿಯ ರೇಲ್ವೆ ಅಧಿಕಾರಿಗಳು ಹಾಜರಿದ್ದರು.


Share: