ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕೈಗಾದಲ್ಲಿ 5 ಮತ್ತು 6ನೇ ಘಟಕಕ್ಕೆ ಶಂಕುಸ್ಥಾಪನೆ

ಕೈಗಾದಲ್ಲಿ 5 ಮತ್ತು 6ನೇ ಘಟಕಕ್ಕೆ ಶಂಕುಸ್ಥಾಪನೆ

Fri, 29 Apr 2022 00:39:11  Office Staff   SO News

ಕಾರವಾರ :   ಕೈಗಾದಲ್ಲಿ ಕೈಗಾ 5 ಮತ್ತು 6 ಯೋಜನೆಯ ಶಂಕುಸ್ಥಾಪನೆ  ಮಾಡಲಾಯಿತು. 

ಕೈಗಾ 5 ಮತ್ತು 6 ರಿಯಾಕ್ಟರ್‍ಗಳನ್ನು ಫ್ಲೀಟ್ ಮೋಡ್‍ನಲ್ಲಿ ಸ್ಥಾಪಿಸಲು ಸರ್ಕಾರದಿಂದ ಮಂಜೂರಾದ ಹತ್ತು ಸ್ಥಳೀಯ 700 ಮೆಗಾ ವ್ಯಾಟ್ ಗಳ ಮೊದಲ ಸೆಟ್ ಇದಾಗಿದೆ. ಸ್ಥಳೀಯ 700 ಮೆಗಾವ್ಯಾಟ್ ಒತ್ತಡದ ಭಾರೀ ನೀರಿನ ರಿಯಾಕ್ಟರ್‍ಗಳಿಗೆ ಉಪಕರಣಗಳನ್ನು  ಮತ್ತು ಘಟಕಗಳನ್ನು ಭಾರತೀಯ ಕೈಗಾರಿಕೆಗಳು, ಗುತ್ತಿಗೆದಾರರಿಂದ ಸರಬರಾಜು ಮಾಡಲಾಗುತ್ತಿದೆ. ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳನ್ನು  ಹೊಂದಿದ ವಿಶ್ವದ ಉತ್ತಮ  ಘಟಕ ಆಗಿದ್ದು, ಆತ್ಮ ನಿರ್ಭರ ಭಾರತದ ಒಂದು ಸಂಕೇತವೆಂದು ಹೇಳಲಾಗಿದೆ‌.

ಕೈಗಾ ಸೈಟ್‍ನಲ್ಲಿ ಈಗಾಗಲೇ  ಒಟ್ಟು  880 ಮೆಗಾವ್ಯಾಟ್ ಸಾಮರ್ಥ್ಯ ಒಳಗೊಂಡಿತ್ತು.  962 ದಿನಗಳ ಸುದೀರ್ಘ ನಿರಂತರ ಕಾರ್ಯಾಚರಣೆ ಹಾಗೂ ಅನೇಕ ಕಾರ್ಯಕ್ಷಮತೆ ಮಾನದಂಡಗಳ ನಂತರ 2018 ರಲ್ಲಿ ಇನ್ನೆರಡು  ರಿಯಾಕ್ಟರ್‍ಗಳನ್ನು  ಸ್ಥಾಪಿಸಲಾಯಿತು. ಕೈಗಾ 5 ಮತ್ತು 6ನೇ ಘಟಕ ಯೋಜನೆ  ಪೂರ್ಣಗೊಂಡ ನಂತರ, ಒಟ್ಟು  2280 ಮೆಗಾ ವ್ಯಾಟ್ ಆದಂತಾಗಿದೆ  ಎಂದು ಎನ್ ಪಿ.ಸಿ ಎಲ್ ಕೈಗಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಎನ್‍ಪಿಸಿಐಎಲ್‍ನ ಹಿರಿಯ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಉಪಸ್ಥಿತರಿದ್ದರು.


Share: