ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಬೆಳಗಾವಿ: ಕ್ಷುಲ್ಲಕ ಕಾರಣ: ಮುಸ್ಲಿಂ ಗುಂಪುಗಳ ನಡುವೆ ಘರ್ಷಣೆ: ಒಬ್ಬನ ಕೊಲೆ

ಬೆಳಗಾವಿ: ಕ್ಷುಲ್ಲಕ ಕಾರಣ: ಮುಸ್ಲಿಂ ಗುಂಪುಗಳ ನಡುವೆ ಘರ್ಷಣೆ: ಒಬ್ಬನ ಕೊಲೆ

Tue, 16 Mar 2010 03:07:00  Office Staff   S.O. News Service

ಬೆಳಗಾವಿ: ತಾಲೂಕಿನ ಹಿರೇಬಾಗೇವಾಡಿಯಲ್ಲಿ ಸೋಮವಾರ ಮುಸ್ಲಿಂ ಸಮಾಜದ ಎರಡು ಗುಂಪಿನ ನಡುವೆ ಘರ್ಷಣೆ ಸಂಭವಿಸಿದ್ದು, ಒಬ್ಬನನ್ನು ಕೊಲೆ ಮಾಡಲಾಗಿದೆ. ಆಶ್ಪಾಕ ಶೌಕತ‌ಅಲಿ ಹಸನವಾಲೆ (೨೭) ಹತ್ಯೆಗೀಡಾದವ.

ಕ್ಷುಲ್ಲಕ ಕಾರಣಕ್ಕೆ ಸಂಬಂಧಿಸಿದಂತೆ ತಬಲಿಕ ಎ ಜಮಾತ್ ಹಾಗೂ ಸುನ್ನಿ ಪಂಗಡದ ಗುಂಪಿನ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತೆರಳಿತು. ಎರಡೂ ಗುಂಪಿನ ಯುವಕ ರು ಪರಸ್ಪರ ಕೈ ಕೈ ಮಿಲಾಯಿಸಿದ್ದಲ್ಲದೆ, ಬಡಿಗೆಗಳಿಂದ ಹೊಡೆದಾಡಿದರು. ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತೆರಳಿದ್ದರಿಂದ ಪೊಲೀಸರು ಲಾಠಿ ಪ್ರಹಾರ ನಡೆಸಿದರು.

ಘರ್ಷಣೆಯಲ್ಲಿ ಗಂಭೀರ ಗಾಯಗೊಂಡಿದ್ದ ಮುಸ್ತಾಫ್ ಬೆಳಗಾವಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಾವನ್ನಪ್ಪಿದ್ದಾನೆ. ಈ ಘಟನೆಯಿಂದ ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಗುಂಪು ಘರ್ಷಣೆ ಸಂಬಂಧ ೬ ಜನರನ್ನು ಪೊಲೀಸರು ಬಂಧಿಸಿದ್ದಾರೆ.



Share: