ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕುಮಟಾ : ಅಘನಾಶಿನಿ ನದಿ ಅಕ್ಕಪಕ್ಕದ ಜಮೀನು ಜಲಾವೃತ

ಕುಮಟಾ : ಅಘನಾಶಿನಿ ನದಿ ಅಕ್ಕಪಕ್ಕದ ಜಮೀನು ಜಲಾವೃತ

Tue, 25 Jul 2023 04:17:55  Office Staff   SO News

ಕುಮಟಾ : ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಅಂಕೋಲಾ, ಕುಮಟಾ, ಹೊನ್ನಾವರ ಭಾಗದಲ್ಲಿ ನೆರೆ ಪರಿಸ್ಥಿತಿ ಉದ್ಭವವಾಗಿದೆ.

ಅಂಕೋಲಾದ ಬಿಳಿಹೊಂಯ್ಗಿ, ಕೂರ್ವೆ, ಶಿರೂರು, ಬೆಳ್ಸೆ ಭಾಗದಲ್ಲಿ ಮನೆ, ಕೃಷಿ ಭೂಮಿಗಳಿಗೆ ನೀರು ನುಗ್ಗಿದೆ. ಕುಮಟಾ ತಾಲೂಕಿನ ಊರಕೇರಿ ಗ್ರಾಮದ ಹಲವೆಡೆ ಮಳೆ ಬಾರೀ ಆವಾಂತರ ಸೃಷ್ಟಿಸಿದೆ. 

ಅಘನಾಶಿನಿ ನದಿ ಸೇರಿದಂತೆ ಅಕ್ಕಪಕ್ಕದ ಕೃಷಿ ಜಮೀನುಗಳು ಜಲಾವೃತವಾಗಿದ್ದು ಜನತೆ ತೊಂದರೆ ಅನುಭವಿಸಿದ್ದಾರೆ. ಶಾಸಕ ದಿನಕರ ಶೆಟ್ಟಿ ವಿವಿಧೆಡೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Share: