ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕುಮಟಾ: ಐಗಳ ಕುರ್ವೆ, ಗಂಗಾವಳಿ, ಹೆಬ್ಬೈಲ್ ಸೇತುವೆ ಪೂರ್ಣ ಗೊಳಿಸುವಂತೆ ಆಗ್ರಹ

ಕುಮಟಾ: ಐಗಳ ಕುರ್ವೆ, ಗಂಗಾವಳಿ, ಹೆಬ್ಬೈಲ್ ಸೇತುವೆ ಪೂರ್ಣ ಗೊಳಿಸುವಂತೆ ಆಗ್ರಹ

Wed, 06 Jul 2022 03:54:58  Office Staff   SO News

ಕುಮಟಾ : ತಾಲೂಕಿನ ಐಗಳ ಕುರ್ವೆ, ಗಂಗಾವಳಿ, ಹೆಬ್ಬೈಲ್ ಸೇತುವೆ ಕಾಮಗಾರಿ ಯನ್ನು ಶೀಘ್ರ ವಾಗಿ ಪೂರ್ಣ ಗೊಳಿಸುವಂತೆ ಕುಮಟಾ ಲೋಕಶಕ್ತಿ ಘಟಕ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದೆ.

 ಇಲ್ಲಿನ ಐಗಳ ಕುರ್ವೆ, ಗಂಗಾವಳಿ, ಹೆಬ್ಬೈಲ್ ಗ್ರಾಮೀಣ ಪ್ರದೇಶಗಳು ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಸರಿಯಾದ ರಸ್ತೆ ಸಂಪರ್ಕ ವ್ಯವಸ್ಥೆ ಇಲ್ಲದೇ ಇನ್ನೂ ಕುಗ್ರಾಮ ಗಳಾಗಿಯೇ ಉಳಿದಿವೆ.  ಈ ಗ್ರಾಮಗಳ ಜನರಿಗೆ  ಸುಲಭ ಸಂಪರ್ಕ ಸೌಲಭ್ಯ ಕ್ಕಾಗಿ ಕಳೆದ ಕೆಲವು ವರ್ಷ ಗಳಿಂದ ಮಂಜೂರಾಗಿ ಶಂಕು ಸ್ಥಾಪನೆ ಕಂಡು ಆರಂಭ ಗೊಂಡ ಮೂರೂ ಸೇತುವೆ ಗಳ ಕಾಮಗಾರಿ  ಅಪೂರ್ಣ ಗೊಂಡು ಇನ್ನೂ ಈ ಭಾಗದ ಜನರ ಆಶೋತ್ತರ ಗಳಿಗೆ ತಣ್ಣೀರೆರೆಚಿವೆ. 

ಪ್ರತಿಯೊಂದು ಗ್ರಾಮಗಳಲ್ಲಿ ಸಾವಿರಾರು ಬಡ ಕುಟುಂಬ ಗಳು ವಾಸವಾಗಿದ್ದು, ಈ ಹಿಂದೆ ಪ್ರತಿ ನಿತ್ಯದ ಜೀವನ ನಿರ್ವಹಣೆಗೆ ದೋಣಿ, ತೆಪ್ಪ ಮೊದಲಾದವುಗಳ ಮೊರೆ ಹೋಗಿ ಪ್ರತಿನಿತ್ಯ ಜೀವದ ಹಂಗು ತೊರೆದು  ಬದುಕು ಕಟ್ಟಿಕೊಳ್ಳುತ್ತಿದ್ದ ಜನರಿಗೆ, ಈ ಸೇತುವೆಗಳ ಮಂಜೂರಾತಿ  ಮರುಭೂಮಿಯಲ್ಲಿ ನೀರು ಸಿಕ್ಕಿದಷ್ಟು ಸಂತೋಷವನ್ನು ತಂದು ಕೊಟ್ಟಿದ್ದವು.  ಆದರೆ ಈ ಸೇತುವೆಗಳ ಕಾಮಗಾರಿಗಳು ಗುತ್ತಿಗೆದಾರ ಕಂಪನಿ ಹಾಗೂ ನಮ್ಮನಾಳುವವರ ಇಚ್ಛಾ ಶಕ್ತಿಯ ಕೊರತೆ ಯಿಂದಾಗಿ ಇನ್ನೂ ಅಪೂರ್ಣ ವಾಗಿಯೇ ಉಳಿದು ಕೊಂಡಿವೆ. ವಯೋವೃದ್ಧ ಮಹಿಳೆಯರು, ಪುರುಷರು, ಮಕ್ಕಳು, ಅನಾರೋಗ್ಯ ಪೀಡಿತರು ಈ ಸೇತುವೆಗಳ ಮೂಲಕ ಹರ ಸಾಹಸ ಮಾಡಿಕೊಂಡು ಸಂಚರಿಸುವ ಪರಿಸ್ಥಿತಿ ಬಂದೊದಗಿದೆ. ಕಾರಣ ಜಿಲ್ಲಾಧಿಕಾರಿಗಳು ತಮ್ಮ ವಿಶೇಷ ಗಮನ ಹಾಗೂ ಆಸಕ್ತಿಯನ್ನು ವಹಿಸಿ ಈ ಅಪೂರ್ಣ ಕಾಮಗಾರಿಗಳನ್ನು ಆದಷ್ಟು ಶೀಘ್ರ ದಲ್ಲಿ ಪೂರ್ಣ ಗೊಳಿಸಿ ಶಾಶ್ವತ ಪರಿಹಾರ ನೀಡಿ  ಜನರ ನೆಮ್ಮದಿಯ ಜೀವನಕ್ಕೆ ಅನುವು  ಮಾಡಿ ಕೊಡುವಂತೆ ಲೋಕ ಶಕ್ತಿ ಪಕ್ಷದ ಕುಮಟಾ ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ದಿನೇಶಚಂದ್ರ ಎನ್. ಅಂಗಡಿಕೇರಿ ಜಿಲ್ಲಾಧಿಕಾರಿಗೆ ಆಗ್ರಹಿಸಿದ್ದಾರೆ.


Share: