ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರು ಮತ್ತು ಬೈಕ್ ಮುಖಾಮುಖಿ ಡಿಕ್ಕಿ :ಬೈಕ್ ಸವಾರ ಗಂಭೀರ

ಕಾರು ಮತ್ತು ಬೈಕ್ ಮುಖಾಮುಖಿ ಡಿಕ್ಕಿ :ಬೈಕ್ ಸವಾರ ಗಂಭೀರ

Thu, 26 Oct 2023 06:29:04  Office Staff   SO News

ಭಟ್ಕಳ: ಮೂಡಭಟ್ಕಳ ಬೈಪಾಸ್ ಡಾ. ಚಿತ್ತರಂಜನ್ ಸರ್ಕಲ್ ಬಳಿಯಲ್ಲಿ ಸಂಭವಿಸಿದ ಕಾರು ಮತ್ತು ಬೈಕ್ ಅಪಘಾತದಲ್ಲಿ ಬೈಕ್ ಸವಾರನೋರ್ವ ತೀವ್ರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡವನನ್ನು ಇಲ್ಲಿನ ಹೋಟೆಲ್ ಒಂದಲ್ಲಿ ಸಹಾಯಕನಾಗಿ ಕೆಲಸ ಮಾಡುವ ಕೋಣಾರ ನಿವಾಸಿ ದಿವಾಕರ ನಾಗಪ್ಪ ನಾಯ್ಕ (೩೨) ಎಂದು ತಿಳಿದು ಬಂದಿದೆ. 
 ಈತನು ಭಟ್ಕಳದಿಂದ ಕುಂದಾಪುರ ಕಡೆಗೆ ಹೋಗುವಾಗ ಕುಂದಾಪುರ ಕಡೆಯಿಂದ ಬರುತ್ತಿದ್ದ ಕಾರು ಹಾಗೂ ಬೈಕು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಈತ ತೀವ್ರವಾಗಿ ತಲೆ ಹಾಗೂ ಸೊಂಟಕ್ಕೆ ಪೆಟ್ಟು ಬಿದ್ದ ಪರಿಣಾಮ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಕಾರು ಚಾಲಕ ತುಮಕೂರಿನ ಕೆ.ಎನ್. ವೀರೇಸ ಎನ್ನುವವರ ಮೇಲೆ ಇಲ್ಲಿನ ನಗರ ಠಾಣೆಯಲ್ಲಿ ಗಾಯಾಳು ದಿವಾಕರ ಅವರ ತಾಯಿ ಚಿಕ್ಕಮ್ಮ ದೂರು ನೀಡಿದ್ದು ನಗರ ಠಾಣೆಯ ಶಿವಾನಂದ ನಾವಡಗಿ ತನಿಖೆ ನಡೆಸುತ್ತಿದ್ದಾರೆ.


Share: