ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರ: 0-6 ವಯೋಮಾನದ ಮಕ್ಕಳ ಸೇವೆಯಲ್ಲಿ ಅನುಭವವುಳ್ಳ ಸಂಘ ಸಂಸ್ಥೆಗಳಿಂದ ಅರ್ಜಿ ಅಹ್ವಾನ

ಕಾರವಾರ: 0-6 ವಯೋಮಾನದ ಮಕ್ಕಳ ಸೇವೆಯಲ್ಲಿ ಅನುಭವವುಳ್ಳ ಸಂಘ ಸಂಸ್ಥೆಗಳಿಂದ ಅರ್ಜಿ ಅಹ್ವಾನ

Thu, 30 Jun 2022 03:07:40  Office Staff   S O News

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಕುಮಟಾ, ಶಿರಸಿ, ಹಾಗೂ ಹಳಿಯಾಳ ತಾಲೂಕುಗಳಲ್ಲಿ ಶಿಶು ಪಾಲನಾ ಕೇಂದ್ರಗಳನ್ನು  ಪ್ರಾರಂಭಿಸಲು ಮೇಲ್ಕಂಡ  ತಾಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 0-6 ವಯೋಮಾನದ ಮಕ್ಕಳ ಸೇವೆಯಲ್ಲಿ ಅನುಭವವುಳ್ಳ  ಸಂಘ ಸಂಸ್ಥೆಗಳಿಂದ ಅರ್ಜಿ ಅಹ್ವಾನಿಸಲಾಗಿದೆ. 

ಆಸಕ್ತ ಸಂಸ್ಥೆಯವರು  ಅರ್ಜಿಯನ್ನು ನೊಂದಣಿ ಪತ್ರ, ಆಡಿಟ್ ರಿಪೋರ್ಟ, ಈ ಹಿಂದೆ ಕಾರ್ಯನಿರ್ವಹಿಸಿದ ಮಾಹಿತಿ ಹಾಗೂ ಇತ್ಯಾದಿ ಎಲ್ಲ ದಾಖಲಾತಿಗಳೊಂದಿಗೆ ಜುಲೈ 7 ರೊಳಗೆ ಕಾರವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಿಗೆ ಸಲ್ಲಿಸಬೇಕು. ಮಹಿಳಾ  ಮಂಡಳ ಮತ್ತು ಸ್ವ ಸಹಾಯ ಸಂಘಗಳಿಂದ ಬರುವಂತಹ ಅರ್ಜಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಬಂದಿರುವ ಅರ್ಜಿಗಳನ್ನು ಜಿಲ್ಲಾ ಮಟ್ಟದ ಸಮಿತಿಯಲ್ಲಿಟ್ಟು ಆಯ್ಕೆ ಮಾಡಲಾಗುವುದು ಹಾಗೂ ಸಮಿತಿಯ ಆಯ್ಕೆಯೇ ಅಂತಿಮವಾಗಿರುತ್ತದೆ  ಎಂದು ಕಾರವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share: