ಕಾರವಾರ : ನಗರದ ಹಣ್ಣು ಹಂಪಲ, ತರಕಾರಿ ಮಾರಾಟ ಮಾಡುತ್ತಿದ್ದ ವ್ಯಾಪಾರಸ್ಥರ ಮೇಲೆ ನಗರಸಭೆ ಸಿಬ್ಬಂದಿಗಳು ತೊಂದರೆ ನೀಡಿದ್ದಾರೆಂಬ ಆರೋಪ ಕೇಳಿಬಂದಿದೆ.
ಗುರುವಾರ ವ್ಯಾಪಾರ ಮಾಡುತ್ತಿದ್ದಾಗ ಏಕಾಏಕಿಯಾಗಿ ಬಂದ ಸಿಬ್ಬಂದಿಗಳು ವಸ್ತುಗಳನ್ನ ಹೊತ್ತೊಯ್ದರಲ್ಲದೇ ರಸ್ತೆಗೆ ಚೆಲ್ಲಿದ್ದಾರೆ. ಇದು ವ್ಯಾಪಾರಸ್ಥರ ಆಕ್ರೋಶಕ್ಕೆ ಕಾರಣವಾಯಿತು.
ನಾವೆಲ್ಲರೂ ಬಡ ವ್ಯಾಪಾರಸ್ಥರಾಗಿದ್ದು ನಮಗೆ ಬೀದಿಬದಿಯಲ್ಲಿಯೇ ಮಾರಾಟಕ್ಕೆ ಅವಕಾಶ ನೀಡಬೇಕು ಎಂದು ವ್ಯಾಪಾರಸ್ಥರು ಆಗ್ರಹಿಸಿದ್ದಾರೆ.