ಕಾರ್ಕಳ, ನವೆಂಬರ್ ೩೦: ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ೧೦೮ ಆಂಬ್ಯುಲೇನ್ಸ್ ಆರೋಗ್ಯ ಕವಚ ಸೇವೆಗೆ ಶಾಸಕ ಎಚ್.ಗೋಪಾಲ ಭಂಡಾರಿ ಶುಕ್ರವಾರ ಚಾಲನೆ ನೀಡಿದರು. ತಾಲೂಕಿಗೆ ಇದು ಎರಡನೇ ಆಂಬ್ಯುಲೇನ್ಸ್ ಸೇವೆಯಾಗಿದ್ದು. ಇನ್ನೊಂದು ಅಜೆಕಾರಿನಿಂದ ಕಾರ್ಯನಿರ್ವಹಿಸುತ್ತಿದೆ.
ಈ ಸಂದರ್ಭ ಕಾರ್ಕಳ ಪುರಸಭೆ ಅಧ್ಯಕ್ಷ ಸುಭಿತ್.ಎನ್.ಆರ್, ಆಡಳಿತ ವೈದ್ಯಾಧಿಕಾರಿ ಡಾ.ಆನಂದ ನಾಯ್ಕ್, ಡಾ.ಜ್ಞಾನೇಶ್ ಕಾಮತ್, ಡಾ.ಜೋಷಿಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಶುಭದ್ ರಾವ್ ಮತ್ತಿತರರು ಉಪಸ್ಥಿತರಿದ್ದರು.