ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಗುಲಬರ್ಗಾ: ಜಿ.ಪಂ.ಉಪಾಧ್ಯಕ್ಷರಾಗಿ ಜಯಶ್ರೀ ಸಜ್ಜನಶೆಟ್ಟಿ ಆಯ್ಕೆ

ಗುಲಬರ್ಗಾ: ಜಿ.ಪಂ.ಉಪಾಧ್ಯಕ್ಷರಾಗಿ ಜಯಶ್ರೀ ಸಜ್ಜನಶೆಟ್ಟಿ ಆಯ್ಕೆ

Sat, 06 Mar 2010 15:40:00  Office Staff   S.O. News Service

ಗುಲಬರ್ಗಾ,ಮಾ.೦೬.(ಕ.ವಾ.)-ಗುಲಬರ್ಗಾ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರ ಸ್ಥಾನಕ್ಕೆ ಜಯಶ್ರೀ ಬಸವರಾಜ ಸಜ್ಜನಶೆಟ್ಟಿ ಅವರು ಶನಿವಾರ ಗುಲಬರ್ಗಾದಲ್ಲಿ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಜಯಶ್ರೀ ಬಸವರಾಜ ಸಜ್ಜನಶೆಟ್ಟಿ ಹಾಗೂ ಸುಷ್ಮಾ ಬಸವಂತರಾವ ಅವರು ನಾಮಪತ್ರ ಸಲ್ಲಿಸಿದ್ದರು. ಗುಲಬರ್ಗಾ ವಿಭಾಗದ ಪ್ರಾದೇಶಕ ಆಯುಕ್ತ ಡಾ|| ರಜನೀಶ್ ಗೋಯಲ್ ಅವರು ನಡೆಸಿಕೊಟ್ಟ ಚುನಾವಣೆಯಲ್ಲಿ ಒಟ್ಟು ೪೧ ಸದಸ್ಯರು ಪಾಲ್ಗೊಂಡಿದ್ದು, ಜಯಶ್ರೀ ಬಸವರಾಜ ಸಜ್ಜನಶೆಟ್ಟಿ ಅವರ ಪರವಾಗಿ ೨೧ ಹಾಗೂ ಸುಷ್ಮಾ ಬಸವಂತರಾವ ಅವರ ಪರವಾಗಿ ೨೦ ಮತಗಳು ಚಲಾಯಿಸಲ್ಪಟ್ಟವು. ಅಂತಿಮವಾಗಿ ಜಯಶ್ರೀ ಬಸವರಾಜ ಸಜ್ಜನಶೆಟ್ಟಿ ಅವರ ಆಯ್ಕೆಯನ್ನು ಡಾ|| ರಜನೀಶ್ ಗೋಯಲ್ ಅವರು ಪ್ರಕಟಿಸಿದರು.

 

ಪಶುಸಂಗೋಪನಾ ಸಚಿವರ ಪ್ರವಾಸ

ಗುಲಬರ್ಗಾ,ಮಾ.೦೬.(ಕ.ವಾ.)-ಪಶುಸಂಗೋಪನಾ ಸಚಿವ ರೇವುನಾಯಕ್ ಬೆಳಮಗಿ ಅವರು ೨೦೧೦ರ ಮಾರ್ಚ್ ೭ ರಂದು ಮಧ್ಯಾಹ್ನ ೩ ಗಂಟೆಗೆ ಹುಮನಾಬಾದ ರಸ್ತೆಯ ಉಪಳಾಂವ ಗ್ರಾಮದಲ್ಲಿ ಮದರ ತೆರೆಸಾ ಚಾರಿಟೇಬಲ್ ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಗುಲಬರ್ಗಾ ವಾಸ್ತವ್ಯ ಮಾಡುವರು. ಮಾರ್ಚ್ ೮ರಂದು ಬೆಳಗಿನ ೧೧ ಗಂಟೆಗೆ ಆಳಂದ ತಾಲೂಕಿನ ಮುರಡಿ ಗ್ರಾಮದಲ್ಲಿ ರಸ್ತೆ ಕಾಮಗಾರಿಯ ಭೂಮಿಪೂಜೆ ನೆರವೇರಿಸುವರು.ಸಂಜೆ ೬-೪೫ ಗಂಟೆಗೆ ಉದ್ಯಾನ್ ಎಕ್ಸ್‌ಪ್ರೆಸ್ ರೈಲು ಮೂಲಕ ಬೆಂಗಳೂರಿಗೆ ಪ್ರಯಾಣ ಮಾಡುವರು.

 


Share: