ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರ: ರಸ್ತೆ ಸಾರಿಗೆ ಸಂಸ್ಥೆಯು ವಾಹನಗಳನ್ನು ಟ್ರ್ಯಾಕಿಂಗ ಮಾಡಲು ಮೊಬೈಲ್ ಅಪ್ಲೀಕೆಶನ್‍ ಸ್ಪರ್ಧೆ

ಕಾರವಾರ: ರಸ್ತೆ ಸಾರಿಗೆ ಸಂಸ್ಥೆಯು ವಾಹನಗಳನ್ನು ಟ್ರ್ಯಾಕಿಂಗ ಮಾಡಲು ಮೊಬೈಲ್ ಅಪ್ಲೀಕೆಶನ್‍ ಸ್ಪರ್ಧೆ

Sun, 07 Aug 2022 00:15:30  Office Staff   S O News

ಕಾರವಾರ : ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಪ್ರತಿಷ್ಠಿತ ವಾಹನಗಳನ್ನು ಟ್ರ್ಯಾಕಿಂಗ (tracking) ಮಾಡಲು ಮೊಬೈಲ್ ಅಪ್ಲೀಕೆಶನ್‍ನ್ನು ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳಿಂದ ತಯಾರಿಸಲು ಹಾಗೂ ತಯಾರಿಸಿದ ಮೊಬೈಲ್ ಅಪ್ಲೀಕೆಶನ್‍ನ್ನು ಸ್ಪರ್ಧೆ ಮೂಲಕ ಆಯ್ಕೆ ಮಾಡಲು ಆಯೋಜಿಸಲಾಗಿದೆ.

 ಸ್ಪರ್ಧೆಯಲ್ಲಿ ವಿಜೇತರಾದ ಅಥವಾ ಉತ್ತಮವಾಗಿ ತಯಾರಿಸಿದ ಮೊಬೈಲ್ ಅಪ್ಲೀಕೆಶನ್‍ಗೆ ರೂ. 50000/- ನಗದು ಬಹುಮಾನ ಹಾಗೂ ಪ್ರಮಾಣ ಪತ್ರವನ್ನು ನೀಡಲಾಗುವುದು. ಮತ್ತು  ಆಯ್ಕೆಯಾಗುವ ವಿದ್ಯಾರ್ಥಿ/ವಿದ್ಯಾರ್ಥಿಗಳ ತಂಡಗಳು ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ತರಬೇತಿ ನೀಡುವುದು. ತಯಾರಿಸಬೇಕಾದ ಮೊಬೈಲ್ ಅಪ್ಲೀಕೆಶನ್ ಕುರಿತು ವಿವರವನ್ನು ಸಂಸ್ಥೆಯ ವೆಬ್‍ಸೈಟ್‍ನಲ್ಲಿhttps://nwkrtc.karnataka.gov.in  ಪ್ರಕಟಿಸಲಾಗಿದೆ. 

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 7760991521 ಗೆ  ಸಂಪರ್ಕಿಸಿ ಎಂದು ವಾ.ಕ.ರ.ಸಾ. ಸಂಸ್ಥೆ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 


Share: