ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರ: ಬೇಸಿಗೆ ಶಿಬಿರ ಏ. 30 ರಿಂದ ಮೇ 9 ರವರೆಗೆ

ಕಾರವಾರ: ಬೇಸಿಗೆ ಶಿಬಿರ ಏ. 30 ರಿಂದ ಮೇ 9 ರವರೆಗೆ

Fri, 22 Apr 2022 23:25:47  Office Staff   S O News

ಕಾರವಾರ:   ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಬಾಲಭವನ ಸೊಸೈಟಿಯ ಸಹಯೋಗದಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ  ಸ್ತ್ರೀಶಕ್ತಿ ಭವನ,  2022-23 ಸಾಲಿನ ಬೇಸಿಗೆ ಶಿಬಿರವನ್ನು ಏ. 30ರಿಂದ ಮೇ 9  ಪ್ರತಿ ದಿನ ಬೆಳಿಗ್ಗೆ 9.00 ರಿಂದ ಮಧ್ಯಾಹ್ನ 12.30 ವರೆಗೆ  ನಡೆಸಲಾಗುತ್ತದೆ.  

5 ರಿಂದ 16 ವರ್ಷ ವಯೋಮಾನದ ಮಕ್ಕಳಿಗಾಗಿ ಶಿಬಿರ ನಡೆಸಲಾಗುತ್ತಿದ್ದು, ಶಿಬಿರದಲ್ಲಿ ಸಮೂಹ ನೃತ್ಯ, ಯೋಗ, ಸಮೂಹ ಗೀತೆ, ಕಸದಿಂದ ರಸ, ಚಿತ್ರಕಲೆ, ಕರಾಟೆ, ಕರಕುಶಲೆ ಇತ್ಯಾದಿ ಚಟುವಟಕೆಗಳ ಕುರಿತು ತರಬೇತಿ ನೀಡಲಾಗುವುದು. ಈ ಶಿಬಿರದಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಳ್ಳುತ್ತಿದ್ದಾರೆ.

ಈ ಶಿಬಿರಕ್ಕೆ ಮಕ್ಕಳನ್ನು ಕಳುಹಿಸಲಿಚ್ಛಿಸುವ ಪಾಲಕರು ನಿಗದಿತವಾದ ನಮೂನೆಯನ್ನು ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರವಾರ ಇವರನ್ನು ಹಾಗೂ ಶ್ರೀ ಸೂರ್ಯಪ್ರಕಾಶ ಬ ಶೆಟ್ಟಿ, ಕಾರ್ಯಕ್ರಮ ಸಂಯೋಜಕರು, ಜಿಲ್ಲಾ ಬಾಲಭವನ ಸೊಸೈಟಿ,ಯಲ್ಲಿ ಅರ್ಜಿ ಪಡೆದು ಏ 29 ರೊಳಗೆ   ಕಚೇರಿಗೆ  ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ  ದೂರವಾಣಿ ಸಂಖ್ಯೆ: 9448105291 ಗೆ ಸಂಪರ್ಕಿಸಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಶ್ಯಾಮಲಾ ಸಿ. ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share: