ಪೊಲೀಸ್ ಕಮಿಷನರ್ ಸೀಮಂತ್‌ಕುಮಾರ್ ಸಿಂಗ್ ನಾಳೆ ಅಧಿಕಾರ ಸ್ವೀಕಾರ
ಮಂಗಳೂರು, ಎ.28: ಮಂಗಳೂರು ಪೊಲೀಸ್ ಆಯುಕ್ತಾಲಯದ ಕಮಿಷನರ್ ಆಗಿ ನೇಮಕಗೊಂಡಿರುವ ಸೀಮಂತ್‌ಕುಮಾರ್ ಸಿಂಗ್ ಎ.30ರಂದು ಅಧಿಕಾರ ಸ್ವೀಕರಿಸಲಿದ್ದಾರೆ.
ಸೀಮಂತ್ ಕುಮಾರ್ 2000ದ ಡಿಸೆಂಬರ್ 22ರಿಂದ 2004ನೆ ಫೆಬ್ರವರಿ 2ರವರೆಗೆ ದ.ಕ.ಜಿಲ್ಲಾ 121ನೆ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಸ್ವಾತಂತ್ರ್ಯದ ಬಳಿಕ ದ.ಕ. ಜಿಲ್ಲೆಯಲ್ಲಿ ದೀರ್ಘ ಕಾಲ ಎಸ್ಪಿಯಾಗಿ ಕಾರ್ಯ ನಿರ್ವಹಿಸಿರುವ ದಾಖಲೆ ಸೀಮಂತ್‌ಕುಮಾರ್ ಸಿಂಗ್‌ದ್ದಾಗಿದೆ.
1948ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿ ಎಂ.ಸಿಂಗಾರ ವೇಲು ಅಧಿಕಾರ ಸ್ವೀಕರಿಸಿದ ಬಳಿಕ 2009ರ ಡಾ.ಸುಬ್ರಹ್ಮಣ್ಯಶ್ವೇರ ರಾವ್‌ವರೆಗೆ ನಾಲ್ಕು ವರ್ಷಗಳ ದೀರ್ಘಕಾಲ ಸೇವೆ ಸಲ್ಲಿಸಿದ ದಾಖಲೆ ಇಲ್ಲ. ಮಂಗಳೂರಿನಲ್ಲಿ ಸ್ವಾತಂತ್ರ ಪೂರ್ವದಲ್ಲಿ 1860ರ ನವೆಂಬರ್ 4ರಂದು ಕರ್ನಲ್ ಹಾಕಿನ್ಸ್ ಪ್ರಥಮ ಪೊಲೀಸ್ ಅಧೀಕ್ಷಕರಾಗಿ ಕಾರ್ಯ ನಿರ್ವಹಿಸಿದ ದಾಖಲೆ ಇದೆ. ಆ ಬಳಿಕ 1947ರವರೆಗೆ 70 ಜನ ಪೊಲೀಸ್ ವರಿಷ್ಠಾಧಿಕಾರಿಗಳು ಕಾರ್ಯನಿರ್ವಹಿಸಿದ್ದಾರೆ. 1867ರಿಂದ 1875ರವರೆಗೆ ಕರ್ನಲ್ ಆರ್.ಸಿ. ಜಾಕಿನ್ಸ್ ದೀರ್ಘಾ ವಧಿಯ ಪೊಲೀಸ್ ಅಧೀಕ್ಷಕರಾಗಿ ಕಾರ್ಯನಿರ್ವಹಿಸಿದ ದಾಖಲೆ ಇದೆ. ಬಹಳ ಅಲ್ಪಾವಧಿಗೆ ಪಂಕಜ್ ಠಾಕೂರ್ ಕಾರ್ಯ ನಿರ್ವಹಿಸಿದ್ದರು.
ಮಂಗಳೂರು ನಗರ ಪೊಲೀಸ್ ಆಯುಕ್ತಾಲಯಕ್ಕೆ ಇನ್ನೂ ಕೆಲವು ಪೊಲೀಸ್ ಅಧಿಕಾರಿಗಳು ಹೊಸ ಹುದ್ದೆಗಳ ನೇಮಕಾತಿ ನಡೆಯಬೇಕಿದೆ.
ಕಳೆದ 2010ರ ಜನವರಿ 26ರಂದು ರಾಜ್ಯ ಗಹ ಸಚಿವ ಡಾ.ವಿ.ಎಸ್. ಆಚಾರ್ಯ ಮಂಗಳೂರು ಪೊಲೀಸ್ ಕಮಿಷನರೇಟನ್ನು ಉದ್ಘಾಟಿಸಿದ್ದು, ಪಶ್ಚಿಮ ವಲಯ ಐಜಿಪಿ ಗೋಪಾಲ ಹೊಸೂರರನ್ನು ಪ್ರಭಾರ ಪೊಲೀಸ್ ಆಯುಕ್ತರಾಗಿ ನೇಮಿಸಲಾಗಿತ್ತು. ಈ ನಡುವೆ ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಡಾ.ಸುಬ್ರಹ್ಮಣ್ಯೇಶ್ವರ ರಾವ್‌ರನ್ನು ಹೈದರಾಬಾದ್‌ಗೆ ತರಬೇತಿಗಾಗಿ ಕಳುಹಿಸಲಾಗಿದೆ. ಅವರ ಅನುಪಸ್ಥಿತಿಯಲ್ಲಿ ಹೊಸ ಆಯುಕ್ತರು ಅಧಿಕಾರ ಸ್ವೀಕರಿಸಲಿದ್ದಾರೆ.