ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರ: ಜಲಸಾಹಸ ಕ್ರೀಡಾ ಉಪಕರಣಗಳನ್ನು ನೀಡಲು ಅರ್ಹ ಕ್ರೀಡಾಪಟುಗಳಿಂದ ಅರ್ಜಿ ಅಹ್ವಾನ

ಕಾರವಾರ: ಜಲಸಾಹಸ ಕ್ರೀಡಾ ಉಪಕರಣಗಳನ್ನು ನೀಡಲು ಅರ್ಹ ಕ್ರೀಡಾಪಟುಗಳಿಂದ ಅರ್ಜಿ ಅಹ್ವಾನ

Sun, 17 Jul 2022 07:19:26  Office Staff   S O News

ಕಾರವಾರ: ಪರಿಶಿಷ್ಟ ಜಾತಿ ಉಪಯೋಜನೆ ಅಡಿಯಲ್ಲಿ ಜನರಲ್ ತಿಮ್ಮಯ್ಯ  ರಾಷ್ಟ್ರೀಯ ಸಾಹಸ ಅಕಾಡೆಮಿ ಮೂಲಕ ಜಲಸಾಹಸ ಕ್ರೀಡೆಯಲ್ಲಿ ತರಬೇತಿ ಪಡೆದು ವಿಜೇತರಾದ ಯುವಕ ಯುವತಿಯರಿಗೆ ಸ್ವಯಂ ಉದ್ಯೋಗ ಹೊಂದಲು ಸಹಕಾರಿಯಾಗುವಂತೆ ಜಲಸಾಹಸ ಕ್ರೀಡಾ ಉಪಕರಣಗಳನ್ನು ನೀಡಲು ಅರ್ಹ ಕ್ರೀಡಾಪಟುಗಳಿಂದ ಅರ್ಜಿ ಅಹ್ವಾನಿಸಲಾಗಿದೆ.

ಆಸಕ್ತ ಅರ್ಹ ಕ್ರೀಡಾಪಟುಗಳು ಕಚೇರಿಯಿಂದ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ ಸೂಕ್ತ ದಾಖಲೆಗಳೊಂದಿಗೆ ಆಗಸ್ಟ್ 4 ರೊಳಗಾಗಿ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಕಚೇರಿ ಅಥವಾ  ದೂರವಾಣಿ ಸಂಖ್ಯೆ 9480886551, dysskar@gmail.com   ಗೆ ಸಂಪರ್ಕಿಸಬಹುದೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಪ್ರವೀಣಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share: