ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರ: ಚದುರಂಗ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ

ಕಾರವಾರ: ಚದುರಂಗ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ

Sun, 20 Aug 2023 00:53:07  Office Staff   S O News

ಕಾರವಾರ: 77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಕಾರವಾರ, ಜಿಲ್ಲಾ ಕ್ರೀಡಾ ಪ್ರತಿಷ್ಠಾನ ಹಾಗೂ ಜಿಲ್ಲಾ ಚದುರಂಗ ಸಂಘ ಕಾರವಾರ ಇವರ ಸಂಯುಕ್ತ ಆಶ್ರಯದಲ್ಲಿ ಸರ್ಕಾರಿ ನೌಕರರ ಭವನ ಕಾರವಾರದಲ್ಲಿ ನಡೆದ ಚದುರಂಗ ಪಂದ್ಯಾವಳಿಯನ್ನು ಇತ್ತೀಚಿಗೆ ಆಯೋಜನೆ ಮಾಡಲಾಗಿತ್ತು.

ಚದುರಂಗ ಪಂದ್ಯಾವಳಿಯಲ್ಲಿ ಎರಡು ವಿಭಾಗದಿಂದ ಒಟ್ಟೂ 170 ಮಕ್ಕಳು ಭಾಗವಹಿಸಿದ್ದರು. ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕಾರವಾರ ಬಾಲಮಂದಿರ ಶಾಲೆಯ ಲಿಖಿತ ವಿ ನಾಯ್ಕ ಪ್ರಥಮ, ಸೆಂಟ್ ಜೋಸೆಫ್ ಶಾಲೆಯ ಅಖೀಲ ಟಿ ನಾಯ್ಕ ದ್ವೀತಿಯ, ಬಾಲಮಂದಿರ ಶಾಲೆಯ ಬಾಲರಾಜ ಜೆ ವೆರ್ಣೆಕರ ತೃತಿಯ, ಸೆಂಟ್ ಜೋಸೆಫ್ ಶಾಲೆಯ ಅಫಾನ ಎಸ್ ಶೇಖ ಚತುರ್ಥ, ಸೆಂಟ್ ಜೋಸೆಫ್ ಶಾಲೆಯ ಅರೋನ್ ಡಿ ಪರ್ನಾಂಡಿಸ್ ಪಂಚಮ ಸ್ಥಾನ ಪಡೆದಿದ್ದಾರೆ.

ಪ್ರೌಢ ಶಾಲಾ ವಿಭಾಗದಲ್ಲಿ ಕಾರವಾರ ಸೆಂಟ್ ಜೋಸೆಫ್ ಶಾಲೆಯ ಪ್ರನೀತ ಪಿ ನಾಯಕ ಪ್ರಥಮ, ಸೆಂಟ್ ಜೋಸೆಫ್ ಶಾಲೆಯ ಆರ್ಯ ಜಿ ಹೆಗಡೆ ದ್ವೀತಿಯ, ಬಾಲಮಂದಿರ ಶಾಲೆಯ ಸಮರ್ಥ ವಿ ನಾಯ್ಕ ತೃತೀಯ, ಅಮದಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಯ ಬಾಲಕೃಷ್ಣ ಎಸ್ ನಾಯ್ಕ ಚತುರ್ಥ, ಅರ್ಗಾದ ಕೇಂದ್ರೀಯ ವಿದ್ಯಾಲಯದ ಓಂಗಣೇಶ ಸಿ ಶೆಟ್ಟಿ ಪಂಚಮ ಸ್ಥಾನ ಪಡೆದಿದ್ದಾರೆ. ವಿಜೇತರಿಗೆ ಆಕರ್ಷಕ ಪ್ರಶಸ್ತಿ ಮತ್ತು ಪ್ರಮಾಣ ಪತ್ರ ಹಾಗೂ ನಗದು ಬಹುಮಾನಗಳನ್ನು ವಿತರಿಸಲಾಯಿತು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಸಂಜೀವ ಕುಮಾರ ಎಸ್ ನಾಯ್ಕ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share: