ಗ್ರಾ.ಪಂ. ಚುನಾವಣೆ: ಉಡುಪಿ-2312, ಕಾರ್ಕಳ-1026 ಅಭ್ಯರ್ಥಿಗಳು ಕಣದಲ್ಲಿ
ಉಡುಪಿ: ಉಡುಪಿ ಮತ್ತು ಕಾರ್ಕಳ ತಾಲೂಕಿನ ಮೊದಲನೆ ಹಂತದ ಗ್ರಾ.ಪಂ. ಚುನಾವಣೆಗೆ ಒಟ್ಟು 3,338 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿ ಉಳಿದುಕೊಂಡಿದ್ದಾರೆ.
ಉಡುಪಿ ತಾಲೂಕಿನ 61 ಗ್ರಾ.ಪಂ. ಗಳ ಒಟ್ಟು 1,033 ಸ್ಥಾನಗಳಲ್ಲಿ 51 ಸ್ಥಾನ ಗಳಿಗೆ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಳಿದ 982 ಸ್ಥಾನಗಳಿಗೆ ಮೇ 8ರಂದು ಚುನಾವಣೆ ನಡೆಯಲಿದ್ದು ಅಂತಿಮವಾಗಿ ಒಟ್ಟು 2312 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಕಾರ್ಕಳ ತಾಲೂಕಿನ 29 ಗ್ರಾ.ಪಂ.ಗಳ 465 ಸ್ಥಾನಗಳಿಗೆ 1026 ಮಂದಿ ಸ್ಪರ್ಧೆಯಲ್ಲಿದ್ದಾರೆ ಎಂದು ಉಡುಪಿ ಚುನಾವಣಾಧಿಕಾರಿ ತಿಳಿಸಿದ್ದಾರೆ.
ಉಡುಪಿ: ಒಟ್ಟು ಸ್ಥಾನ 1033- ಅವಿರೋಧ ಆಯ್ಕೆ 51- ಚುನಾವಣೆ ನಡೆಯಲಿರುವ ಸ್ಥಾನ 982. ಪುರುಷರು: 1377 (ಒಟ್ಟು ಸ್ಥಾನ 574). ಮಹಿಳೆ ಯರು: 935(459).
ಪರಿಶಿಷ್ಟ ಜಾತಿ ಸಾಮಾನ್ಯ: ಒಟ್ಟು ಸ್ಥಾನ 12- ಅಭ್ಯರ್ಥಿಗಳು 27. ಪರಿಶಿಷ್ಟ ಜಾತಿ ಮಹಿಳೆ- ಒಟ್ಟು ಸ್ಥಾನ 61- ಅಭ್ಯರ್ಥಿಗಳು 117.
ಪರಿಶಿಷ್ಟ ಪಂಗಡ ಸಾಮಾನ್ಯ: ಒಟ್ಟು 13(29), ಮಹಿಳೆ 61(98).
ಹಿಂದುಳಿದ ವರ್ಗ ಅ ಸಾಮಾನ್ಯ: 151(339), ಮಹಿಳೆ 122(251).
ಹಿಂದುಳಿದ ವರ್ಗ ಬ ಸಾಮಾನ್ಯ: 55(113), ಮಹಿಳೆ 14(34).
ಸಾಮಾನ್ಯ: ಒಟ್ಟು ಸ್ಥಾನ 343 (869), ಮಹಿಳೆ 201(435).
ಕಾರ್ಕಳ: ಒಟ್ಟು ಸ್ಥಾನ 465- ಅವಿರೋಧ ಆಯ್ಕೆ ಇಲ್ಲ- ಚುನಾವಣೆ ನಡೆಯಲಿರುವ ಸ್ಥಾನ 465. ಪುರುಷರು 594 (ಒಟ್ಟು 261), ಮಹಿಳೆಯರು 432 (ಒಟ್ಟು 204). ಪ.ಜಾತಿ ಸಾಮಾನ್ಯ: ಒಟ್ಟು 14(31), ಮಹಿಳೆ 29(66). ಪ.ಪಂಗಡ ಸಾಮಾನ್ಯ: ಒಟ್ಟು 6(12), ಮಹಿಳೆ 30(62).
ಹಿಂ.ವರ್ಗ ‘ಅ’ ಸಾಮಾನ್ಯ: 68 (145), ಮಹಿಳೆ 55(116).
ಹಿಂದುಳಿದ ವರ್ಗ ‘ಬ’ ಸಾಮಾನ್ಯ: 27(67), ಮಹಿಳೆ 6(12). ಸಾಮಾನ್ಯ: ಒಟ್ಟು ಸ್ಥಾನ 146 (339), ಮಹಿಳೆ 84(176).
ಉಡುಪಿ: 51 ಮಂದಿ ಅವಿರೋಧ ಆಯ್ಕೆ
ಉಡುಪಿ ತಾಲೂಕಿನ 61 ಗ್ರಾ.ಪಂ.ಗಳಲ್ಲಿ ಒಟ್ಟು 1033 ಸ್ಥಾನಗಳಲ್ಲಿ 51 ಸ್ಥಾನಗಳಿಗೆ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವುಗಳಲ್ಲಿ ಬೆಳಪು ಗ್ರಾಪಂನ ಎಲ್ಲಾ 10ಸ್ಥಾನಗಳಿಗೆ ಅವಿರೋಧ ಆಯ್ಕೆಯೂ ಸೇರಿದೆ.
ತಾಲೂಕಿನಲ್ಲಿ ಅವಿರೋಧ ಆಯ್ಕೆಯಾದ ಗ್ರಾಪಂಗಳ ವಿವರ ಹೀಗಿದೆ. ಕೋಟತಟ್ಟು-1, ಕೋಡಿ-1, ಐರೋಡಿ-1, ವಡ್ಡರ್ಸೆ-1, ಶಿರಿಯಾರ-1, ಬಿಲ್ಲಾಡಿ -ಒಟ್ಟು 3, ಆವರ್ಸೆ-1, ಕುಕ್ಕೆಹಳ್ಳಿ-1, ಬೈರಂಪಳ್ಳಿ-1, ವಾರಂಬಳ್ಳಿ-1, ಚಾಂತಾರು-1, ಕೆಮ್ಮಣ್ಣು- ಒಟ್ಟು 4, ಬಡಾನಿಡಿಯೂರು-1, ಕಡೆಕಾರು-1, 80ಬಡಗುಬೆಟ್ಟು-2, ಆತ್ರಾಡಿ-3, ಅಲೆವೂರು-2, ಕುರ್ಕಾಲು-1, ಶಿರ್ವ-1, ಕಟಪಾಡಿ-1, ಕಾಪು-ಒಟ್ಟು2, ಮಲ್ಲಾರು-1, ಕುತ್ಯಾರು-1, ಮುದರಂಗಡಿ-1, ಬೆಳಪು-ಒಟ್ಟು 10, ತೆಂಕ-1, ಪಡುಬಿದ್ರಿ-ಒಟ್ಟು 5, ಹೆಜಮಾಡಿ-1.
ಕುಂದಾಪುರ: 33 ನಾಮಪತ್ರ ಹಿಂದೆಗೆತ
ಕುಂದಾಪುರ ತಾಲೂಕಿನ 53 ಗ್ರಾ.ಪಂ.ಗಳಿಗಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಲ್ಲಿಸಲಾಗಿರುವ ಒಟ್ಟು 2680 ನಾಮಪತ್ರಗಳಲ್ಲಿ 33 ನಾಮಪತ್ರಗಳನ್ನು ಶುಕ್ರವಾರ ಹಿಂದೆಗೆದುಕೊಳ್ಳಲಾಗಿದೆ.
ನಿನ್ನೆ ನಾಮಪತ್ರಗಳ ಪರಿಶೀಲನೆಯ ವೇಳೆ 7 ನಾಮಪತ್ರಗಳು ತಿರಸ್ಕೃತಗೊಂ ಡಿದ್ದವು. ನಾಮಪತ್ರಗಳ ಪರಿಶೀಲನೆಗೆ ಮೇ 3 ಅಂತಿಮ ದಿನವಾಗಿದ್ದು, ಅದೇ ದಿನ ಸಂಜೆ ವೇಳೆ ಸ್ಪರ್ಧಾಕಣದ ಸ್ಪಷ್ಟ ಚಿತ್ರಣ ಗೊತ್ತಾಗಲಿದೆ.