ಭಟ್ಕಳ:೧೮, ಶಬರಿಮಲೆ ಯಾತ್ರೆಯನ್ನು ಮುಗಿಸಿ ಹುಬ್ಬಳ್ಳಿಗೆ ತೆರಳುತ್ತಿದ್ದ ಐಯ್ಯಪ್ಪ ಸ್ವಾಮಿ ಭಕ್ತರ ಟಾಟಾ ಸೋಮೊ ವಾಹನವು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಓರ್ವ ಐಯ್ಯಪ್ಪ ಸ್ವಾಮಿ ಭಕ್ತ ಮೃತಪಟ್ಟಿದ್ದು ಇತರ ಆರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತ ವ್ಯಕ್ತಿಯನ್ನು ವಿರುಪಾಕ್ಷಪ್ಪ ಹುಬ್ಬಳ್ಳಿ ಎಂದು ಗುರುತಿಸಲಾಗಿದೆ. ಈ ಘಟನೆಯು ಇಂದು ಬೇಳಗಿನ ಜಾವ ಬೇಂಗ್ರೆಯ ಉಸಿರಾ ಇಂಡಸ್ಟ್ರಿಸ್ ಬಳಿ ರಾ.ಹೆ.೧೭ರಲ್ಲಿ ಜರುಗಿದೆ. ಎರಡು ದಿನಗಳ ಹಿಂದೆ ಅಷ್ಟೆ ಸ್ವಾಮಿ ಐಯ್ಯಪ್ಪ ಭಕ್ತರ ವಾಹನವು ಅಂಕೋಲ ಯಲ್ಲಪೂರ ಹೆದ್ದಾರೆ ೬೩ರಲ್ಲಿ ಅಪಘಾತಕ್ಕೀಡಾಗಿ ೫ ಜನ ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.
ಈ ಅಪಘಾತದಲ್ಲಿ ಗಾಯಗೊಂಡವರೆಲ್ಲ ಹುಬ್ಬಳ್ಳಿಯವರೆ ಅಗಿದ್ದು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಪ್ರಕರಣವು ಮುರುಡೇಶ್ವರ ಠಾಣೆಯಲ್ಲಿ ದಾಖಲಾಗಿದೆ.