ಚಿಕ್ಕಬಳ್ಳಾಪುರ, ಡಿಸೆಂಬರ್ 2 : ಬೈಪಾಸ್ ರಸ್ತೆಗೆ ಸಂಭಂಧಿಸಿದಂತೆ ಜಿಲ್ಲಾಧಿಕಾರಿ ಅನ್ವರ್ ಪಾಷಾ ಇಂದು ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿರುವವರ ಮೇಲೆ ಹರಿಹಾಯ್ದ ಘಟನೆ ನಡೆಯಿತು.
ಇಂದು ಸಂಜೆ ಬೈಪಾಸ್ ರಸ್ತೆಯಿಂದ ನಗರದ ಕಡೆಗೆ ಹಾದು ಬರುವ ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿ ಪರಿವರ್ತಿಸುವ ಕಾರ್ಯಕ್ಕೆ ಚಾಲನೆ ನೀಡಲು ಏರ್ಪಡಿಸಿದ್ದ ಕಾರ್ಯಕ್ರಮವನ್ನು ಉದ್ಗಾಟಿಸಲು ಆಗಮಿಸ ಬೇಕಿದ್ದ ಕ್ಷೇತ್ರದ ಶಾಸಕ ಕೆ.ಪಿ.ಬಚ್ಚೇಗೌಡ ಆಗಮಿಸುವುದು ಸ್ವಲ್ಪ ತಡವಾದ ಹಿನ್ನೆಲೆಯಲ್ಲಿ ಮೊದಲೇ ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ಅನ್ವರ್ ಪಾಷಾ ಕೇವಲ ರಾಷ್ಠ್ರೀಯ ಹೆದ್ದಾರಿಯ ಕಾಮಗಾರಿಯನ್ನು ಮಾತ್ರ ನೀವುಗಳು ನಿರ್ವಹಿಸುತ್ತಿದ್ದು ಬ್ಯಪಾಸ್ ರಸ್ತೆಗಾಗಿ ಜಮೀನು ಬಿಟ್ಟಿಕೊಟ್ಟ ರೈತರು ತಮ್ಮ ಹೊಲ ಹಾಗು ತೋಟಗಳಿಗೆ ಹೋಗಲು ಸರ್ವಿಸ್ ಇಲ್ಲದೆ ಪರೆದಾಡಬೇಕಾಗಿದೆ, ಈಗಾಗಲೇ ಸಂಸದ್ ಸದಸ್ಯರು ಹಾಗು ಸಚಿವರು ರಸ್ತೆ ಪೂರ್ಣಗೊಂಡಿರುವ ಭಾಗಗಳಲ್ಲಿ ಸರ್ವೀಸ್ ರಸ್ತೆಗಳನ್ನು ನಿರ್ಮಿಸಬೇಕೆಂದು ಪತ್ರ ನೀಡಿ ಎರಡು ತಿಂಗಳುಗಳೇ ಕಳೆದರೂ ಸಹ ನೀವು ಚುನಾಯಿತ ಪ್ರತಿನಿಧಿಗಳನ್ನು ಹಾಗು ರೈತರನ್ನು ಅಗೌರವದಿಂದ ಕಾಣುತ್ತಿದ್ದೀರಿ ಹೀಗೆ ಮಾಡುವುದ್ದಿದ್ದರೆ ಜಿಲ್ಲೆಯಿಂದ ಹೊಹೊಗಿ ಎಂದು ಬೈಪಾಸ್ ರಸ್ತೆ ಕಾಮಗಾರಿಯನ್ನು ನಿರ್ವಹಿಸುತ್ತಿದ್ದವರ ವಿರುದ್ದ ಕೆಂಡಾಮಂಡಲವಾದರು.
ಹಿಂದೆ ಇದ್ದ ರಾಷ್ಠ್ರೀಯ ಹೆದ್ದಾರಿ ಬೈಪಾಸ್‌ನಿಂದಾಗಿ ವಿಭಜನೆಗೊಂಡಿದ್ದು, ಇದು ತೀರಾ ಹದಗೆಟ್ಟಿದೆ, ನಗರ ದಿಂದ ಬೈಪಾಸ್‌ಗೆ ಸಂಪರ್ಕ ಕಲ್ಪಿಸುವ ಸ್ಥಳದಲ್ಲಿ ರಸ್ತೆಯನ್ನು ನಿಮ್ಮ ರಸ್ತೆ ಕಾಮಗಾರಿಯಿಂದ ಹಾಳಾಗಿದ್ದು ಅದನ್ನು ಸರಿ ಪಡಿಸಿಕೊಡುವಂತೆ ಹಲವಾರು ಬಾರಿ ತಿಳಿಸಿದ್ದರೂ ಸಹ ನೀವು ತಾತ್ಸಾರ ಧೋರಣೆ ತಾಳಿ ಅಧಿಕಾರಿಗಳ ಚುನಾಯಿತ ಪ್ರತಿನಿಧಿಗಳ ಹಾಗು ರೈತರ ಮಾತುಗಳಿಗೆ ಬೆಲೆ ನೀಡದೆ ತಮಗಿಷ್ಠಬಂದಂತೆ ವರ್ತಿಸುತ್ತಿದ್ದೀರಿ, ದೇಶದ ಅಭಿವೃದ್ದಿಗಾಗಿ ಜಮೀನುಗಳನ್ನು ನೀಡಿದ ನಂದಿ ಕ್ರಾಸ್, ಅಗಲಗುರ್‍ಕಿ ಹಾಗು ಸುತ್ತಮುತ್ತಲ ರೈತರು ಅವರ ಜಮೀನುಗಳಿಗೆ ಪ್ರವೇಶಿಸಲು ರಸ್ತೆಯನ್ನು ಎತ್ತರಗೊಳಿಸಿದ್ದು ಅವರು ಜಮೀನಿನೊಳಕ್ಕೆ ಪ್ರವೇಶಿಸಲು ತೀರಾ ತೊಂದರೆಪಡುತ್ತಿದ್ದಾರೆ, ಈ ಬಗ್ಗೆ ನಿನ್ನೆ ನಡೆದ ಆರ್ಬಿಟ್ರೇರ್ಷನಲ್ಲಿ ಹಲವಾರು ರ್‍ಯತರು ತಮ್ಮ ಅಸಹಾಯಕತೆಯನ್ನು ತೋಡಿಕೊಂಡು ನ್ಯಾಯ ಒದಗಿಸುವಂತೆ ಕೇಕೊಂಡಿದ್ದು, ಈ ಬಗ್ಗೆ ನಾನು ನಿಮ್ಮ ವಕೀಲರಿಗೆ ಶೀಘ್ರವೇ ಕಾಮಗಾರಿಯನ್ನು ನೆವೇರಿಸಿ ರೈತರಿಗೆ ಅನುಕೂಲ ಮಾಡಿಕೊಡುವಂತೆ ತಿಳಿಸಿದ್ದರೂ ಸಹ ನಿಮ್ಮಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿಲ್ಲವಾದರೂ ನನ್ನ ವಿರುದ್ದವೇ ನೀವು ದೂರು ನೀಡಲು ಹೋಗಿದ್ದೀರಿ ನಿಮಗೆ ಜನಪರ ಕಾಳಜಿ ಇಲ್ಲವೇ ಎಂದು ಜಿಲ್ಲಾಧಿಕಾರಿ ತರಾಟೆಗೆ ತೆಗೆದುಕೊಂಡರು.
ಚುನಾಯಿತ ಪ್ರತಿನಿಧಿಗಳು ಹಾಗು ನಾವೆಲ್ಲರೂ ಜನರಿಗಾಗಿ ಜನರ ಒಳಿತಿಗಾಗಿ ಸಕಾರಾತ್ಮಕ ಧೋರಣೆಯನ್ನು ವಹಿಸಿ ಕೆಲಸ ನಿರ್ವಹಿಸಬೇಕಿದ್ದು ಕೇವಲ ನಿಮ್ಮ ಕಾರ್ಯವೈಖರಿಯಿಂದ ರೈತರು ಸಿಟ್ಟಿಗೇಳುವಂತೆ ಪ್ರಚೋಧಿಸುತ್ತಿದ್ದೀರಿ,ಈಗಾಗಲೇ ಪೂರ್ಣಗೊಂಡಿರುವ ಹೆದ್ದಾರಿಯ ಇಕ್ಕೆಲೆಗಳಲ್ಲಿ ಸರ್ವೀಸ್ ರಸ್ತೆಗಳನ್ನು ಹಾಗು ಸುರಕ್ಷತಾ ಫಲಕಗಳನ್ನು ಅಳಡಿಸುವವರೆವಿಗೂ ಮುಂದಿನ ಕೆಲಸ ನಿರ್ವಹಿಸಬಾರದು ಎಂದು ಜಿಲ್ಲಾಧಿಕಾರಿಗಳು ಆದೇಶಿಸಿದರು ಸಹ ಹೆದ್ದಾರಿ ಗುತ್ತಿಗೆಯನ್ನು ಪಡೆದಿರುವ ಗುತ್ತಿಗೆದಾರನ ಪರವಾಗಿ ಆಗಮಿಸಿದ್ದ ಗುಪ್ತ ಎಂಬ ಅಧಿಕಾರಿ ಜಿಲ್ಲಾಧಿಕಾರಿಗಳೊಂದಿಗೆ ಉದ್ದಟತನವನ್ನು ತೋರುವುದೇ ಅಲ್ಲದೆ ಜಿಲ್ಲಾಧಿಕಾರಿಗಳ ಮಾತಿಗೆ ಬೆಲೆಯನ್ನೇ ನೀಡದೆ ತಾತ್ಸಾರದ ನುಡಿಗಳನ್ನು ಆಡಿದ್ದು ಸುತ್ತ ನೆರೆದಿದ್ದ ರೈತರನ್ನು ಕೆರಳಿಸಿತು, ಕಾಂಗ್ರೆಸ್ ಮುಖಂಡ ಶ್ರೀಧರ್ ಪೂರ್ಣ ಕಾಮಗಾರಿಯನ್ನು ಮುಗಿಸದ ಹೊರೆತು ಮುಂದಿನ ಕಾಮಗಾರಿಗೆ ಅಡ್ಡಿಪಡಿಸುವುದಾಗಿ ಪ್ರತಿಭಟಿಸಿದರು.
ಆ ವೇಳೆಗಾಗಲೇ ನಗರ ಸಭಾ ಅಧ್ಯಕ್ಷ ಎಂ.ಪ್ರಕಾಶ್‌ರೊಂದಿಗೆ ಸ್ಥಳಕ್ಕಾಗಮಿಸಿದ ಕ್ಷೇತ್ರದ ಶಾಸಕ ಕೆ.ಪಿ.ಬಚ್ಚೇಗೌಡ ದಿನ ಬೆಳಗಾದರೆ ನೂರಾರು ಮಂದಿ ರೈತರು ಮನೆಬಳಿ ಬಂದು ಬೈಪಾಸ್ ರಸ್ತೆಯಿಂದಾಗುತ್ತಿರುವ ಅನಾನು ಕೂಲಗಲಗಳ ಬಗ್ಗೆ ತಿಳಿಸುತ್ತಿದ್ದು ಈಬಗ್ಗೆ ಜಿಲ್ಲಾಧಿಕಾರಿಗಳಿಗೂ ಸಹ ವಿಷಯವನ್ನು ತಿಳಿಸಿದ್ದೇನೆ ಆದರೆ ನೀವು ಸರ್ವೀಸ್ ರಸ್ತೆಯನ್ನು ಪೂರ್ಣಗೊಳಿಸಿ ರೈತರು ತಮ್ಮ ತೋಟಗಳಿಗೆ ಅನುವು ಮಾಡಿಕೊಡುವವರೆವಿಗೂ ಮುಂದಿನ ಕಾಮಗಾರಿ ಕೈಗೊಳ್ಳಬಾರದು ಎಂದರಾದರೂ ಹೆದ್ದಾರಿ ಗುತ್ತಿಗೆದಾರರು ಮಾತ್ರ ತಮ್ಮ ಪಟ್ಟು ಬಿಟ್ಟಿಕೊಡದೆ ಇನ್ನೊಂದು ವಾರದಲ್ಲಿ ಮಾಡುವ ಭರವಸೆಯನ್ನೇ ನೀಡುವ ಪ್ರಯತ್ನಗಳನ್ನು ಮುಂದುವರೆಸಿದರು, ಇದರಿಂದ ಬೇಸತ್ತ ಶಾಸಕ ಬಚ್ಚೇಗೌಡ ಜಿಲ್ಲಾಪಂಚಾಯತ್ ಸದಸ್ಯ ಜಿ.ಆರ್.ನಾರಾಯಣ ಸ್ವಾಮಿ ಹಾಗು ನಗರ ಸಭಾ ಅಧ್ಯಕ್ಷ ಪ್ರಕಾಶ್ರವರುಗಳೊಂದಿಗೆ ಕೂಡಿ ದ್ವಿಪಥ ರಸ್ತೆ ಕಾಮಗಾರಿಯ ಚಾಲನೆಯನ್ನು ನೆರವೇರಿಸದೆ ಹಿಂತಿರುಗಿ ಹೋಗಲು ನಿರ್ಧರಿ ಕಾರು ಹತ್ತಿದಾಗಲೇ ಗುತ್ತಿಗೆದಾರನಿಗೆ ಮನವರಿಕೆಯಾಗಿ ನಾಳೆಯಿಂದಲೇ ಕಾಮಗಾರಿ ನೆರವೇರಿಸುವ ಭರವಸೆ ನೀಡಿದರು ಆನಂತರ ಶಾಸಕರು ಗುದ್ದಲಿ ಪೂಜೆ ನೆರವೇರಿಸಿದರು.