ಬಂಟ್ವಾಳ, ಏಪ್ರಿಲ್ ೧೩:ಕಾರಂತರು ನಾಡಿಗೆ ಮಹಾನ್ ಕೊಡುಗೆ ನೀಡಿದವರು. ಅದರ ಋಣ ತೀರಿಸಲು ಹುಟ್ಟೂರಿನ ರಂಗಾಸಕ್ತರು ಸಂಕಲ್ಪ ತೊಡಬೇಕಾಗಿದೆ ಎಂದು ಸಾಹಿತಿ ವೈದೇಹಿ ಹೇಳಿದ್ದಾರೆ.
ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ಮತ್ತು ಬಾಬುಕೋಡಿ ರಂಗ ಪ್ರತಿಷ್ಠಾನ ಆಶ್ರಯದಲ್ಲಿ ಮಂಚಿ ಕುಕ್ಕಾಜೆಯಲ್ಲಿ ಮೂರು ದಿನ ನಡೆದ ಬಿ.ವಿ.ಕಾರಂತ ನೆನಪಿನ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಹುಟ್ಟೂರಾದ ಮಂಚಿಯಲ್ಲಿ ರಂಗ ಶಾಲೆ ರ್ಮಾಣ, ರಂಗ ಅಧ್ಯಯನ ಕೇಂದ್ರದ ಸ್ಥಾಪನೆ ಸಹಿತ ರಂತರ ರಂಗ ಚಟುವಟಿಕೆಗಳು ನಡೆಯಬೇಕಾಗಿದೆ. ಇವೆಲ್ಲವೂ ಕಾರಂತರ ಹೆಸರಿನಲ್ಲಿ ನಾಡಿಗೆ ಮತ್ತೊಂದು ಕೊಡುಗೆಯಾಗಬೇಕಾಗಿದೆ. ಈ ಮೂಲಕ ರಂಗ ದಿಗ್ಗಜರ ರಂತರ ನೆನಪು-ಋಣ ತೀರಿಸುವ ಕಾಯಕ ನಡೆಯಬೇಕಾಗಿದೆ ಎಂದ ವೈದೇಹಿ ಆಧುಕ ಬದುಕಿನ ಜಂಜಾಟದಲ್ಲಿ ಎಲ್ಲವೂ ನಾಶವಾಗುತ್ತಿದ್ದು ಮಾನವೀಯ ಸಂಬಂಧವುಳ್ಳ, ಸಂಸ್ಕಾರಯುತ, ಪ್ರೀತಿಯುತ ಬದುಕು ನಮ್ಮದಾಗಲು ಕಲೆ, ಸಾಹಿತ್ಯ, ಸಾಂಸ್ಕೃತಿಕ ಕಾರ್‍ಯಗಳು ನಡೆಯುವುದು ಅಗತ್ಯವಾಗಿದೆ ಎಂದರು.
ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅಧ್ಯಕ್ಷತೆ ವಹಿಸಿ ವೈದೇಹಿಯವರನ್ನು ಸನ್ಮಾಸಿದರು.
ಸೌಂದರ್ಯ ಪ್ರಜ್ಞೆಯುಳ್ಳ ರಸಿಕ ವರ್ಗದ ನಿರ್ಮಾಣ ಇಂದಿನ ಅಗತ್ಯ. ಇದಕ್ಕಾಗಿ ಇಂತಹ ಉತ್ತಮ ಅಭಿರುಚಿಯ ಚಟುವಟಿಕೆಗಳೆ ಪ್ರೇರಣೆ. ಉತ್ತಮ ಮನಸ್ಸುಗಳನ್ನು ಕಟ್ಟುವ ಕಾಯಕ ನಡೆಯಬೇಕಾಗಿದೆ ಎಂದ ಆಳ್ವರು ರಂಗಭೂಮಿಯ ಸಾರ್ವಬೌಮ, ಸವ್ಯಸಾಚಿಯಾಗಿದ್ದ ಕಾರಂತರಿಗೆ ಗೌರವ ತರುವ ಕಾರ್‍ಯ ನಿರಂತರ ಎಲ್ಲೆಡೆ ನಡೆಯಬೇಕಾಗಿದೆ ಎಂದರು.
ಬೆಂಗಳೂರು ಬಾಬುಕೋಡಿ ರಂಗ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಜಯರಾಮ ಪಾಟೀಲ ಮುಖ್ಯ ಅತಿಥಿಗಳಾಗಿದ್ದರು.
ಉಪನ್ಯಾಸಕ ಡಾ. ಗಿರೀಶ್ ಭಟ್ ಅಭಿನಂದನಾ ಭಾಷಣ ಮಾಡಿದರು. ನಾಟಕೋತ್ಸವದ ಅಂಗವಾಗಿ ಪ್ರತಿಭಾವಂತರನ್ನು ಪುರಸ್ಕರಿಸಲಾಯಿತು. ಟ್ರಸ್ಟ್ ಅಧ್ಯಕ್ಷ ಕಜೆ ರಾಮಚಂದ್ರ ಭಟ್ ಸ್ವಾಗತಿಸಿದರು. ಕಾರ್‍ಯದರ್ಶಿ ಚಂದ್ರಶೇಖರ ರಾವ್ ವಂದಿಸಿದರು. ಉಮಾನಾಥ ರೈ ಮತ್ತು ರಮಾನಂದ ಎನ್ ಕಾರ್‍ಯಕ್ರಮ ರೂಪಿಸಿದರು.