ಮಣಿಪಾಲ, ಮೇ 2: ಮಣಿಪಾಲ ಬ್ಯಾಡ್ಮಿಂಟನ್ ಸ್ಪೋರ್ಟ್ಸ್ ಕ್ಲಬ್ ಮತ್ತು ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್‌ನ ಜಂಟಿ ಆಶ್ರಯದಲ್ಲಿ ಮಣಿಪಾಲ ಸಿಂಡಿಕೇಟ್ ಬ್ಯಾಕ್ ಬ್ಯಾಡ್ಮಿಂಟನ್ ಹಾಲ್ ಹಾಗೂ ವೆಸ್ಟಿಂಡ್ ಕೌಂಟಿ ಕ್ಲಬ್‌ನಲ್ಲಿ ನಡೆದ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಕೂಟದಲ್ಲಿ ಉಡುಪಿಯ ಅನ್ಸಿಲ್ಲಾ ಅವಳಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
13 ವರ್ಷ ಬಾಲಕಿಯರ ಸಿಂಗಲ್ಸ್ ವಿಭಾಗದಲ್ಲಿ ಮಂಗಳೂರಿನ ಮೈಥಿಲಿ ರಂಜನ್‌ರನ್ನು 22:7, 21:8 ಅಂತರದಲ್ಲಿ ಮತ್ತು 14 ವರ್ಷದ ಬಾಲಕಿಯರ ಸಿಂಗಲ್ಸ್ ವಿಭಾಗದಲ್ಲಿ ಮಂಗಳೂರಿನ ನೇಹಾ ಜಿ.ಯವರನ್ನು 21:15, 19:21, 21:19 ಅಂತರದಲ್ಲಿ ಸೋಲಿಸಿದ ಅನ್ಸಿಲ್ಲಾ ಪ್ರಶಸ್ತಿ ಯನ್ನು ಪಡೆದುಕೊಂಡರು. 16 ವರ್ಷದ ಬಾಲಕಿಯರ ಸಿಂಗಲ್ಸ್ ವಿಭಾಗದಲ್ಲಿ ಉಡುಪಿಯ ಮನಿಷಾ ಉಡುಪಿಯ ಹರ್ಷಿತಾ ಶೆಟ್ಟಿಯವರನ್ನು 21:16, 21:17 ಅಂತರದಲ್ಲಿ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡರು.
ರಾಜ್ಯಮಟ್ಟದ ಬ್ಯಾಡ್ಮಿಂಟನ್ ಕೂಟವನ್ನು ಉದ್ಘಾಟಿಸಿ ಮಾತನಾಡಿದ ಮಣಿಪಾಲ ಪ್ರೆಸ್‌ನ ಆಡಳಿತ ನಿರ್ದೇಶಕ ಟಿ.ಗೌತಮ್ ಎಸ್.ಪೈ ಮಾತನಾಡಿ, ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಪೂರಕವಾಗಿದೆ. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಜವಾಬ್ದಾರಿ ಹೆತ್ತವರು ಹಾಗೂ ಸಮಾಜದ್ದಾಗಿದೆ ಎಂದರು.
ಬ್ಯಾಂಕ್‌ನ ಉಪಮಹಾಪ್ರಬಂಧಕ ಎಚ್.ಎನ್.ವಿಶ್ವೇಶ್ವರ್ ಅಧ್ಯಕ್ಷತೆ ವಹಿಸಿ ದ್ದರು. ಬ್ಯಾಂಕ್‌ನ ಎ.ಜಿ.ಎಂ. ವಸಂತ ನಾಯಕ್, ಚಾರ್ಟೆಡ್ ಅಕೌಂಟೆಂಟ್ ದೇವಾನಂದ, ಸುರೇಶ್ ಪ್ರಭು, ಜಗದೀಶ್ ಪೈ, ಪ್ರಕಾಶ್ ಎಂ.ಕೊಡವೂರು, ಅಶೋಕ್ ಪಣಿಯಾಡಿ, ಶರತ್ ಆಚಾರ್ಯ ಮುಖ್ಯ ಅತಿಥಿಗಳಾಗಿದ್ದರು. ಸುಧೀರ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು.