ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ರಾಮ ಹೆಸರಿನಲ್ಲಿ ಬಿಜೆಪಿ ಮಾಡಬಾರದನ್ನು ಮಾಡತೊಡಗಿದೆ. ಮಾಜಿ ಪ್ರಧಾನಿ ಎಚ್ ಡಿ ದೇವೆಗೌಡ

ರಾಮ ಹೆಸರಿನಲ್ಲಿ ಬಿಜೆಪಿ ಮಾಡಬಾರದನ್ನು ಮಾಡತೊಡಗಿದೆ. ಮಾಜಿ ಪ್ರಧಾನಿ ಎಚ್ ಡಿ ದೇವೆಗೌಡ

Mon, 03 May 2010 16:19:00  Office Staff   S.O. News Service
ಬೆಂಗಳೂರು : ರಾಮ ಹೆಸರಿನಲ್ಲಿ ಬಿಜೆಪಿಪಕ್ಷ ಮಾಡಬಾರದ ಅನಾಚಾರಗಳನ್ನು ಮಾಡತೊಡಗಿದೆ. ಹಾಲಪ್ಪ ಪ್ರಕರಣದಲ್ಲಿ ನಾನು ಏನನ್ನೂ ಮಾತನಾಡೋಲ್ಲ. ಮುಖ್ಯಮಂತ್ರಿಗೆ ರಾಜ್ಯದ ಮೇಲೆ ಮಹಿಳೆಯರ ಮೇಲೆ ಗೌರವ ಇರುವುದಾದರೆ ಪ್ರಕರಣವನ್ನು ಪಾರದರ್ಶಕವಾಗಿ ತನಿಖೆ ನಡೆಸಬೇಕು ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೆಗೌಡ ಹೇಳಿದ್ದಾರೆ. 

ಹಾಲಪ್ಪ ಪ್ರಕರಣ ಬೆಳಕಿಗೆ ಬಂದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಾಲಪ್ಪ ಅತ್ಯಾಚಾರ ನಡೆಸಿರುವುದು ಸಾಬೀತಾದಲ್ಲಿ ಅವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದರು. ಹಾಲಪ್ಪ ಪ್ರಕರಣ ಪತ್ರಿಕೆಯಲ್ಲಿ ಬಂದಿದೆ. ಅದನ್ನು ಓದಿಲ್ಲ. ಓದುವ ಮನಸ್ಸು ಆಗಲಿಲ್ಲ. ಸಚಿವರೊಬ್ಬರು ಇಂತಹ ಗಂಭೀರ ಆರೋಪಕ್ಕೆ ಸಿಲುಕಿರುವುದು ಖಂಡನೀಯ ಸಂಗತಿ. ಇದಕ್ಕಿಂತ ಹೆಚ್ಚೇನೂ ಹೇಳುವುದಿಲ್ಲ ಎಂದು ಗೌಡ ಹೇಳಿದರು. 

ನಾನು ವಿರೋಧ ಪಕ್ಷದ ನಾಯಕನಾಗಿದ್ದಾಗ ಸಚಿವರಾಗಿದ್ದ ಕಿತ್ತೂರು ಅವರ ಮೇಲೆ ಇದೇ ಆರೋಪ ಬಂದಿತ್ತು. ಅಂದಿನ ಸರಕಾರ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಂಡಿತ್ತು. ಈ ಪ್ರಕರಣದಲ್ಲಿ ಕೂಡಾ ಜನತೆ ಅದನ್ನೇ ಬಯಸುತ್ತಿದೆ ಎಂದು ದೇವೇಗೌಡ ಹೇಳಿದರು. ರಾಮನ ಹೆಸರು ಹೇಳಿಕೊಂಡು ದೇಶ ಹಾಳು ಮಾಡಿದ ಬಿಜೆಪಿ ಹಾಲಪ್ಪ ಪ್ರಕರಣವನ್ನು ಏನು ಮಾಡುತ್ತಿದೆ ನೋಡೋಣ ಎಂದರು.

 

  

Share: