ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರ: ಬಾಲಮಂದಿರ ಪ್ರೌಢಶಾಲೆಯಲ್ಲಿ ನಡೆದ “ವನಮಹೋತ್ಸವ” ಕಾರ್ಯಕ್ರಮ

ಕಾರವಾರ: ಬಾಲಮಂದಿರ ಪ್ರೌಢಶಾಲೆಯಲ್ಲಿ ನಡೆದ “ವನಮಹೋತ್ಸವ” ಕಾರ್ಯಕ್ರಮ

Tue, 05 Jul 2022 18:22:52  Office Staff   Press Release

ಕಾರವಾರ:  ಕಾರವಾರದ ಬಾಲಮಂದಿರ ಪ್ರೌಢಶಾಲೆಯಲ್ಲಿ “ಆರ್ಕಿಡ್ ಇಕೋ ಕ್ಲಬ್” ಸಹಯೋಗದಲ್ಲಿ ನಡೆದ “ವನಮಹೋತ್ಸವ ಕಾರ್ಯಕ್ರಮವನ್ನು” ವಿಭಿನ್ನವಾಗಿ ಆಚರಿಸಲಾಯಿತು. 

ಆರಂಭದಲ್ಲಿ ತುಳಸಿ ಗಿಡಕ್ಕೆ ನೀರನ್ನು ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಬಾಲಮಂದಿರ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಶ್ರೀಮತಿ ಅಂಜಲಿ ಮಾನೆ ಯವರು ಮಾತನಾಡಿ, “ನಮ್ಮ ಸುತ್ತಮುತ್ತಲಿನ ಪರಿಸರವು ನಿರ್ಮಲವಾಗಿರಬೇಕಾದರೆ ಪ್ರತಿಯೊಬ್ಬರು ಸ್ವಚ್ಛತೆಯ ನಿಯಮವನ್ನು ಪಾಲಿಸಬೇಕು. ಸಸ್ಯಗಳನ್ನು ನೆಡಬೇಕು ಹಾಗೂ ಬೆಳೆಸಬೇಕು. ಮಾಲಿನ್ಯಯುಕ್ತ ಪರಿಸರ ನಿರ್ಮಾಣಕ್ಕೆ ನಾವೆಲ್ಲರೂ ಫಣ ತೊಡಬೇಕು. ಅಂದಾಗ ಮಾತ್ರ ವನಮಹೋತ್ಸವದ ಆಚರಣೆ ಅರ್ಥಪೂರ್ಣವಾಗುವುದು” ಎಂದರು.

ಈ ಸಂದರ್ಭದಲ್ಲಿ ಪರಿಸರ ಕುರಿತಾದ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. ವಿದ್ಯಾರ್ಥಿಗಳಾದ ಕು. ಆದಿತ್ಯಾ ಎ. ನಾಯ್ಕ ಮತ್ತು ಕು. ಪವನ್ ಆರ್. ಗಾಳಿ ಪರಸರ ಕುರಿತಾದ ಕವಿತೆಯನ್ನು ಹೇಳಿದರು. ಕು. ಅರ್ನವ ಎ. ಕದಂ ವನಮಹೋತ್ಸವದ ಕುರಿತು ಮಾತನಾಡಿದರು.

ಕು. ದಿಶಾ ಭಟ್‍ಕುರ್ಸೆ ಹಾಗೂ ಕು. ಧನ್ಯಶ್ರೀ ಕುರ್ಸೆ ತಂಡದವರು ಪರಿಸರ ಸಂರಕ್ಷಣೆಯ ಕುರಿತು ಮನಮೋಹಕ ಗೀತನೃತ್ಯ ರೂಪಕ ಪ್ರದರ್ಶಿಸಿದರು. 

ವೇದಿಕೆಯಲ್ಲಿ ಶಿಕ್ಷಕರಾದ ಶ್ರೀ ನಜೀರುದ್ದೀನ್ ಸೈಯದ್, ಶ್ರೀಮತಿ ಭಾರತಿ ಐಸಾಕ್ ಉಪಸ್ಥಿತರಿದ್ದರು. ಆರಂಭದಲ್ಲಿ ಶ್ರೀಮತಿ ಹನಿಫಾಬೀ ಖಾನ್ ಸ್ವಾಗತ ಕೋರಿದರು, ಶ್ರೀಮತಿ ಶೇಫಾಲಿ ಕಿಂದಳಕರ ವಂದನಾರ್ಪಣೆ ಸಲ್ಲಿಸಿದರು ಹಾಗೂ ಕು. ವಿಜೇತಾ ಹೆರ್ಲೇಕರ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಕು. ದೀಕ್ಷಾ ಎಮ್. ಗೋವೆಕರ ತಾಂತ್ರಿಕ ಸಹಕಾರ ನೀಡಿದರು. ಶಿಕ್ಷಕರಾದ ಶ್ರೀ ರತ್ನಾಕರ ಮಡಿವಾಳ, ಶ್ರೀಮತಿ ಕಾಂಚನಾ ನಾಯ್ಕ, ಕು. ದೀಪಿಕಾ ರಾಯ್ಕರ್ ಮೊದಲಾದ ಶಿಕ್ಷಕರು, ಶ್ರೀ ಸತೀಶ ನಾಯ್ಕ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Share: