ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರದಲ್ಲಿ ನಕಲಿ ನೋಟು‌ ಚಲಾವಣೆ ಮಾಡುತ್ತಿದ್ದ ನಾಲ್ವರ ಬಂಧನ. ಪ್ರಮುಖ ಆರೋಪಿ ಪರಾರಿ.

ಕಾರವಾರದಲ್ಲಿ ನಕಲಿ ನೋಟು‌ ಚಲಾವಣೆ ಮಾಡುತ್ತಿದ್ದ ನಾಲ್ವರ ಬಂಧನ. ಪ್ರಮುಖ ಆರೋಪಿ ಪರಾರಿ.

Sat, 07 May 2022 03:44:26  Office Staff   SO News

ಕಾರವಾರ :  ಖೋಟಾ ನೋಟು ಚಲಾವಣೆ ನಡೆಸುವ ಸಂದರ್ಭದಲ್ಲಿ ಪೊಲೀಸರು ದಾಳಿ ನಡೆಸಿ ನಾಲ್ವರನ್ನ ಬಂಧಿಸಿದ ಘಟನೆ ನಡೆದಿದೆ.

ಕಾರವಾರದ ಭದ್ರಾ ಹೊಟೇಲ್ ಬಳಿ ಜಿಲ್ಲಾ  ಪೊಲೀಸ್ ವರಿಷ್ಠಾಧಿಕಾರಿ ಡಾ|| ಸುಮನಾ ಡಿ  ಪೆನ್ನೇಕರ ಮಾರ್ಗದರ್ಶನದಲ್ಲಿ ಅಂಕೋಲಾ ಸಿಪಿಐ ಸಂತೋಷ ಶೆಟ್ಟಿ ಮತ್ತು ಪಿಎಸ್ಐ ಪ್ರೇಮನಗೌಡ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

 ಪ್ರವೀಣ ತಂದೆ ರಾಜನ್ ನಾಯರ್ 
(46),  ಗೋವಾ ಮೂಲದ ಲೋಯ್ಡ್ ತಂದೆ ಲಾರೆನ್ಸ್ ಸ್ಟೇವಿಸ್ (29),  ಲಾರ್ಸನ್ ಲೂಯಿಸ್ ಸಿಲ್ವಾ (26),  ಪ್ರನೋಯ ಫರ್ನಾಂಡಿಸ್ ಬಂಧಿತರು. ಬಂಧಿತರಿಂದ 500 ರೂ  ಮುಖಬೆಲೆಯ 26 ನಕಲಿ (ಖೋಟಾ) ನೋಟುಗಳು ಹಾಗೂ 500 ರೂ ಮುಖಬೆಲೆಯ 40 ಅಸಲಿ ನೋಟುಗಳನ್ನು ಮತ್ತು  ಕೃತ್ಯಕ್ಕೆ ಬಳಸಿದ ಒಂದು ಸ್ಕೂಟಿ ಮತ್ತು ಕಾರನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣದ ಮುಖ್ಯ ಆರೋಪಿ ಕಾರವಾರದ  ಮುಸ್ತಾಕ್ ಹಸನ್ ಬೇಗ್, (43)  ತಲೆಮರೆಸಿಕೊಂಡಿದ್ದಾನೆ. ಈತನೇ ಪ್ರಕರಣ ಕಿಂಗ್ ಪಿನ್ ಆಗಿದ್ದು ಪೊಲೀಸರು ಮುಸ್ತಾಕ್ ಬಂಧನಕ್ಕಾಗಿ ಜಾಲ ಬೀಸಿದ್ದಾರೆ‌ 

ಪ್ರಕರಣ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಅಂಕೋಲಾ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಎಸ್ಪಿ ಡಾ. ಸುಮನಾ ಡಿ. ಪೆನ್ನೇಕರ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್. ಬದ್ರಿನಾಥ ರವರು ಅಭಿನಂದಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 


Share: