ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರದಲ್ಲಿ ಗಾಂಜಾ ಮಾರಾಟಕ್ಕೆ ಯತ್ನ. ಇಬ್ಬರ ಬಂಧನ.

ಕಾರವಾರದಲ್ಲಿ ಗಾಂಜಾ ಮಾರಾಟಕ್ಕೆ ಯತ್ನ. ಇಬ್ಬರ ಬಂಧನ.

Sun, 24 Apr 2022 19:35:05  Office Staff   SO News

ಕಾರವಾರ: ನಗರದ ಬೀಚ್ ಸಮೀಪದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು  ಯುವಕರನ್ನ ಪೊಲೀಸರು ‌ ಶನಿವಾರ ಬಂಧಿಸಿದ್ದಾರೆ.

 ತಾಲೂಕಿನ ಶಿರವಾಡ ಬಂಗಾರಪ್ಪ ನಗರದ ರಾಜೇಶ ವಡ್ಡರ್ (27) ಮತ್ತು‌ ಜಾಂಬಾ ಕ್ರಾಸ್ ನ ಮಣಿಕಂಠ ರಾಥೋಡ್ (18) ಬಂಧಿತರೆಂದು ಗುರುತಿಸಲಾಗಿದೆ‌. 

ಬಂಧಿತರಿಂದ ಹತ್ತು ಸಾವಿರ ರೂ. ಮೌಲ್ಯದ ಗಾಂಜಾ ವಶಕ್ಕೆ ಪಡೆಯಲಾಗಿದ್ದು  ಕಾರವಾರ ನಗರ ಠಾಣಾ ಪೊಲೀಸರು  ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


Share: