ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರದಲ್ಲಿ ಕೊಂಕಣಿ ನಾಗರಿಕರ ಪ್ರತಿಭಟನೆ. ದೇವನಾಗರಿ ಲಿಪಿಯಲ್ಲಿ ನಾಮಫಲಕ ‌ ಬರೆಸುವಂತೆ 15 ದಿನಗಳ ಗಡುವು.

ಕಾರವಾರದಲ್ಲಿ ಕೊಂಕಣಿ ನಾಗರಿಕರ ಪ್ರತಿಭಟನೆ. ದೇವನಾಗರಿ ಲಿಪಿಯಲ್ಲಿ ನಾಮಫಲಕ ‌ ಬರೆಸುವಂತೆ 15 ದಿನಗಳ ಗಡುವು.

Fri, 17 Jun 2022 23:01:43  Office Staff   SO News

ಕಾರವಾರ :  ಕೊಂಕಣಿ ಭಾಷೆಗೆ ಅವಮಾನ ಮಾಡಿದ್ದಾರೆಂದು ಆರೋಪಿಸಿದ ಕೊಂಕಣಿ ಭಾಷಿಕರು ಶುಕ್ರವಾರ ಪ್ರತಿಭಟನೆ ನಡೆಸಿದರು.

 ನಗರದ ಮಾಲಾದೇವಿ ಮೈದಾನದಲ್ಲಿ ಸೇರಿದ ಕೊಂಕಣಿ ನಾಗರಿಕರು ಕೊಂಕಣಿ ಭಾಷೆಗೆ ನ್ಯಾಯ ನೀಡಬೇಕೆಂದು ಆಗ್ರಹಿಸಿ ಬೀದಿಬೀದಿಗಳಲ್ಲಿ ಮೆರವಣಿಗೆ  ನಡೆಸಿದರು. 

 ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಕೊಂಕಣಿಗರು ಜಿಲ್ಲಾಧಿಕಾರಿ ಮುಲೈ ಮುಹಿಲನ್ ಗೆ ಮನವಿ ಸಲ್ಲಿಸಿದರು.

ನಂತರ   ನಗರಸಭೆ ಕಚೇರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಕಾರವಾರ ನಗರಸಭೆ ಬರೆಸಿದ ಕೊಂಕಣಿಗರ ದೇವನಾಗರಿ ಲಿಫಿಯನ್ನ ಅಳಿಸಿ ಅವಮಾನ ಮಾಡಲಾಗಿದೆ. ಕಾರವಾರದಲ್ಲಿ 90 ಶೇಕಡ ಜನರು  ಕೊಂಕಣಿ ಮಾತನಾಡುವವರಿದ್ದಾರೆ. ಹೀಗಾಗಿ ದೇವನಾಗರಿ ಲಿಫಿಯಲ್ಲಿ ನಾಮಫಲಕ ಬರೆಸಬೇಕು. ಇನ್ನೂ 15 ದಿನಗಳಲ್ಲಿ ನ್ಯಾಯ ನೀಡದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.


Share: