ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರದಲ್ಲಿ ಅಪಘಾತ : ಬ್ಯಾಂಕ್ ಮ್ಯಾನೇಜರ್ ಸಾವು.

ಕಾರವಾರದಲ್ಲಿ ಅಪಘಾತ : ಬ್ಯಾಂಕ್ ಮ್ಯಾನೇಜರ್ ಸಾವು.

Tue, 22 Aug 2023 04:02:05  Office Staff   SO News

ಕಾರವಾರ : ಸ್ಕೂಟರ್ ಮತ್ತು ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ  ಸವಾರ ಸಾವನ್ನಪ್ಪಿದ ಘಟನೆ ನಗರದ ಆರ್‌ಟಿಓ ಕಚೇರಿ ಎದುರು ನಡೆದಿದೆ.
ಗುರುದಾಸ್ ಬಾಂದೇಕರ್ (55) ಮೃತ ಸವಾರ ಎಂದು ಗುರುತಿಸಲಾಗಿದೆ. ಮೃತ  ಕಾರವಾರ ಅರ್ಬನ್ ಬ್ಯಾಂಕ್ ಮ್ಯಾನೇಜರ್  ಎಂದು ತಿಳಿದುಬಂದಿದೆ.

ಕಾರವಾರದಿಂದ ಕಾರು ಅಂಕೋಲಾ ಕಡೆ ತೆರಳುತಿತ್ತು. ಸ್ಕೂಟರ್ ಸವಾರ ಹಿಂಬದಿಯಿಂದ ಕಾರಿಗೆ ಢಿಕ್ಕಿ ಹೊ ಡೆದಿದ್ದರಿಂದ ಈ ಅಪಘಾತ ಸಂಭವಿಸಿದೆ. ಕಾರವಾರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share: