ಬೆಂಗಳೂರು, ಮಾ.೬: ಚಿತ್ರನಟಿಯರೊಂದಿಗೆ ರಾಸಲೀಲೆಯಲ್ಲಿ ತೊಡಗಿ ವಿವಾದಕ್ಕೇಡೆಯಾಗಿರುವ ಧ್ಯಾನಪೀಠದ ನಿತ್ಯಾನಂದ ಸ್ವಾಮಿಜಿ ತಾನೇನು ತಪ್ಪು ಮಾಡಿಲ್ಲ. ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ದೃಶ್ಯಗಳು ಕುತಂತ್ರ, ಗ್ರಾಫಿಕ್ಸ್ ಹಾಗೂ ಗಾಳಿಸಮಾಚಾರಗಳ ಮಿಶ್ರಣವಾಗಿವೆ ಎಂದು ಹೇಳಿದ್ದಾರೆ.
ಧ್ಯಾನಪೀಠ ಆಶ್ರಮದ ಅಧಿಕೃತ ವೆಬ್ಸೈಟ್ನಲ್ಲಿ ಇಂಗ್ಲಿಷ್, ತಮಿಳು, ಕನ್ನಡ, ಹಿಂದಿ ಭಾಷೆಯಲ್ಲಿ ಹೇಳಿಕೆಯನ್ನು ನೀಡಿರುವ ನಿತ್ಯಾನಂದ ತನ್ನ ಹೇಳಿಕೆಯ ವಿಡಿಯೋ ಚಿತ್ರಣವನ್ನು ಪ್ರಕಟಿಸಿದ್ದಾರೆ. ಅಜ್ಞಾತ ಸ್ಥಳದಿಂದ ಪ್ರಕಟವಾಗಿರುವ ಈ ಸ್ಪಷ್ಟನೆಯಲ್ಲಿ ತನ್ನನ್ನು ತಾನು ನಿರಾಪರಾಧಿ ಎಂದು ಕರೆದುಕೊಂಡಿದ್ದಾನೆ. ಈ ಮಧ್ಯೆ ಸ್ವಾಮೀಜಿ ನಡೆಸಿದ್ದಾನೆ ಎನ್ನಲಾದ ರಾಸಲೀಲೆಯ ಸಂಪೂರ್ಣ ಚಿತ್ರಿಕರಣದ ಸಿಡಿ ಮತ್ತು ಡಿವಿಡಿಗಳು ಬೆಂಗಳೂರಿನ ನೀಲಿಚಿತ್ರಗಳ ಮಾರಾಟದ ಅಡ್ಡೆಗಳಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿವೆ.
ಇನ್ನೊಂದೆಡೆ ಸ್ವಾಮಿಜಿಯ ಬಂಧನಕ್ಕೆ ತಮಿಳುನಾಡು ಪೊಲೀಸರು ವ್ಯಾಪಕ ಬಲೆ ಬೀಸಿದ್ದು, ಶೀಘ್ರದಲ್ಲೆ ಬೆಂಗಳೂರು ಪೊಲೀಸರನ್ನು ಸಂಪರ್ಕಿಸಲಿದ್ದಾರೆ ಎಂದು ಹೇಳಲಾಗಿದೆ. ಸ್ವಾಮಿಜಿ ಮೈಸೂರಿನಲ್ಲಿ ಅಡಗಿದ್ದಾನೆ ಎಂಬ ವದಂತಿಗಳಿದ್ದು, ಕೇರಳಕ್ಕೆ ಪರಾರಿಯಾಗಿದ್ದಾನೆ ಎಂಬ ಗಾಳಿಸುದ್ದಿಗಳು ರೆಕ್ಕೆಪುಕ್ಕ ಪಡೆದುಕೊಳ್ಳುತ್ತಿವೆ.
ಮಾರ್ಚ್ ೨ರಂದು ಸನ್ ಟಿವಿ ಮತ್ತು ಇತರ ಚಾನೆಲ್ಗಳಲ್ಲಿ ಪ್ರಸಾರವಾಗಿರುವ ವಿಡಿಯೋ ದೃಶ್ಯಗಳ ಹಿಂದೆ ವ್ಯವಸ್ಥಿತ ಸಂಚಿದೆ. ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿರುವುದಾಗಿ ಮಠದ ವೆಬ್ಸೈಟ್ನಲ್ಲಿ ತಿಳಿಸಲಾಗಿದೆ.
ಸ್ವಾಮಿಜಿ ವಿಡಿಯೋ ರೂಪದಲ್ಲಿ ನೀಡಿರುವ ಹೇಳಿಕೆಯಲ್ಲಿ, ‘ತಾನಾಗಲಿ ತನ್ನ ಸಂಸ್ಥೆಯಾಗಲಿ ಯಾವುದೇ ಅನೈತಿಕ ಚಟುವಟಿಕೆಯಲ್ಲಿ ತೊಡಗಿಲ್ಲ. ಇದೇಲ್ಲಾ ಅಪಪ್ರಚಾರ. ನಾನು ಅಪರಾಧ ಮಾಡಿಲ್ಲ. ಅಪರಾಧಿಯೂ ಅಲ್ಲ. ಎಲ್ಲದರ ಹಿಂದೆ ಪಿತೂರಿಯಿದೆ. ಸಂಪೂರ್ಣ ಸತ್ಯಾಂಶ ಹೊರಬರುವವರೆಗೂ ಭಕ್ತರು ಯಾವುದೇ ತೀರ್ಮಾನಕ್ಕೆ ಬರಬೇಡಿ. ಸ್ವಲ್ಪದಿನ ನಿರೀಕ್ಷೆಯಲ್ಲಿರಿ. ಎಲ್ಲವನ್ನೂ ಶೀಘ್ರವೇ ಹೊರಗೆಡವುತ್ತೇನೆ ಎಂದಿದ್ದಾರೆ’ ಎಂದು ಮನವಿ ಮಾಡಲಾಗಿದೆ.
ಧ್ಯಾನಪೀಠ ಆಶ್ರಮ ದೇಶ ವಿದೇಶಗಳಲ್ಲಿ ತನ್ನದೇ ಆದ ಅಸ್ತಿತ್ವ ಕಂಡುಕೊಂಡಿದೆ. ತಮ್ಮ ಪ್ರವಚನಗಳಿಂದ ಬಹಳಷ್ಟು ಭಕ್ತರು ಪ್ರಭಾವಿತರಾಗಿದ್ದಾರೆ. ಅವರಿಗೆಲ್ಲಾ ಈ ಅಪಪ್ರಚಾರದಿಂದ ನೋವಾಗಿದೆ ಎಂದು ಸ್ವಾಮಿಜಿ ವಿಷಾದಿಸಿದಾರೆ.
ಕಳೆದ ೭ ವರ್ಷಗಳಿಂದ ತಮ್ಮ ಸಾರ್ವಜನಿಕ ಜೀವನದಲ್ಲಿ ವಿಶ್ವದ ಅನೇಕ ದೇಶಗಳಲ್ಲಿ ೨೦ ಲಕ್ಷಕ್ಕೂ ಹೆಚ್ಚಿನ ಜನರಿಗೆ ಒಳಿತನ್ನು ತಂದು ಪರಿವರ್ತನಾಶಕ್ತಿಯಾಗಿದ್ದಾರೆ. ತಾವು ನುಡಿಯುವ ಹಾಗೂ ಬಾಳುವ ಪರಮ ಸತ್ಯಗಳು ಎಲ್ಲ ಜಾತಿ, ಮತ ಹಾಗೂ ಸಂಸ್ಕೃತಿಗಳಿಗೂ ಅನ್ವಯಿಸುತ್ತವೆ. ವೈದಿಕ ಸಂಪ್ರದಾಯವನ್ನು ಪಾಲಿಸುತ್ತಾ. ಬ್ರಹ್ಮಚರ್ಯೆ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸ ಸೇರಿ ನಿತ್ಯಾನಂದ ಪಂಥವು ನಾಲ್ಕು ಆಶ್ರಮವರ್ಗಗಳ ಜನರನ್ನು ಹೊಂದಿದೆ. ಇವರಲ್ಲಿ ಹೆಚ್ಚಿನವರು ಸಾಂಪ್ರದಾಯಿಕ, ವಿದ್ಯಾವಂತ ಹಾಗೂ ಗೌರವಾನ್ವಿತ ಮನೆತನದಿಂದ ಬಂದವರಾಗಿದ್ದಾರೆ ಎಂದು ವೈಬ್ಸೈಟ್ನಲ್ಲಿ ಹೇಳಲಾಗಿದೆ.
ನಿತ್ಯಾನಂದ ೨೦ ಲಕ್ಷಕ್ಕೂ ಹೆಚ್ಚಿನ ಜನರಿಗೆ ನೆರವಾಗುವ ಧ್ಯಾನ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಆಶ್ರಮಗಳಲ್ಲಿ ಶಾಳೆಗಳಲ್ಲಿ, ವೈದ್ಯಕೀಯ ಆರೋಗ್ಯ ಶಿಬಿರಗಳಲ್ಲಿ ಹಾಗೂ ಬಡಜನರಿಗೆ ಅನ್ನದಾನ, ಪ್ರತಿವಾರ ವಿಶೇಷ ವೈದ್ಯಕೀಯ ಶಿಬಿರಗಳನ್ನು ಏರ್ಪಡಿಸಿ ನೆರವಾಗಲಾಗಿದೆ. ವಿಶ್ವದಾದ್ಯಂತ ವೈದಿಕ ದೇವಸ್ಥಾನಗಳು ಹಾಗೂ ಆಶ್ರಮಗಳನ್ನು ಸ್ಥಾಪಿಸಲಾಗಿದೆ. ೨೦ ಭಾಷೆಗಳಲ್ಲಿ ೨೦೦ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಲಾಗಿದೆ ಎಂದು ಆಶ್ರಮದ ವೈಬ್ಸೈಟ್ ತಿಳಿಸಿದೆ.
ಸ್ವಾಮಿಜಿಯ ರಾಸಲೀಲೆಯನ್ನು ತಾನೇ ಚಿತ್ರಿಕರಿಸಿರುವುದಾಗಿ ಹೇಳಿ ತಮಿಳುನಾಡು ಪೊಲೀಸರ ವಶದಲ್ಲಿರುವ ನಿತ್ಯಾನಂದರ ಕಾರು ಚಾಲಕನನ್ನು ಬೆಂಗಳೂರು ಬಳಿಯ ಬಿಡದಿ ಆಶ್ರಮಕ್ಕೆ ಶೀಘ್ರವೇ ಕರೆತರಲಾಗುವುದು ಎಂದು ಹೇಳಲಾಗಿದೆ. ಸ್ವಾಮಿಜಿ ತಂಗುತ್ತಿದ್ದ ಜಾಗಗಳ ಪರಿಚಯವಿರುವ ಚಾಲಕನನ್ನು ಹೆಚ್ಚಿನ ವಿಚಾರಣೆಗೆ ಚೆನೈ ಪೊಲೀಸರು ಎಲ್ಲೆಡೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಹೇಳಲಾಗಿದೆ.