ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾಣೆಯಾಗಿದ್ದಾರೆ. ಕಂಡವರು ಮಾಹಿತಿ ನೀಡಿ: ಪೊಲೀಸ್ ಪ್ರಕಟಣೆ.

ಕಾಣೆಯಾಗಿದ್ದಾರೆ. ಕಂಡವರು ಮಾಹಿತಿ ನೀಡಿ: ಪೊಲೀಸ್ ಪ್ರಕಟಣೆ.

Tue, 08 Nov 2022 05:31:45  Office Staff   SO News

ಶಿವಮೊಗ್ಗ :  ಭದ್ರಾವತಿ ತಾಲೂಕು ಗುಮಡಘಟ್ಟ ಗ್ರಾಮದ ಪುಟ್ಟೆಗೌಡ ಎಂಬುವವರ ಮನೆಗೆ ಅಡಿಕೆ ಸುಲಿಯುವ ಕೆಲಸಕ್ಕಾಗಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಗ್ರಾಮದ ಶ್ರೀಮತಿ ರೂಪ ಗೋಪಾಲ  ಎಂಬುವವರ ಮಗಳು ಐಶ್ವರ್ಯ  ಎಂಬ ಯುವತಿಯು ದಿನಾಂಕ 20/08/2022 ರಿಂದ ಕಾಣೆಯಾಗಿದ್ದಾರೆ.

ಸದಾಶಿವಪುರ ಗ್ರಾಮದ ಹಕ್ಕಿಪಿಕ್ಕಿ ಕ್ಯಾಂಪ್ ವಾಸಿ ಮಹಮದ್ ಆಲಿ ಎಂಬುವವರ ಪತ್ನಿ ಶಬ್ಬು  (35) ಎಂಬಾಕೆ ಮನೆಯಿಂದ ಹೊರಗೆ ಹೋಗಿದ್ದು, ವಾಪಾಸ್ಸಾಗಿಲ್ಲ.  ಈ ಮಹಿಳೆಯು 5.6 ಅಡಿ ಎತ್ತರ, ಗೋಧಿ ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಉರ್ದು ಮತ್ತು ಕನ್ನಡ ಭಾಷೆ ಮಾತನಾಡುತ್ತಾರೆ. 

ಭದ್ರಾವತಿ ತಾಲೂಕಿನ ಅರಬಿಳಚಿ ವಡ್ಡರಹಟ್ಟಿ ಗ್ರಾಮದ ಈಶ್ವರ ಬಿನ್ ನರಸಿಂಹಪ್ಪ ಎಂಬುವವರ ಅತ್ತೆ ಲಕ್ಷ್ಮೀದೇವಿ ಎಂಬ ಮಹಿಳೆ ಮಗಳನ್ನು ನೋಡಿಕೊಂಡು ತಮ್ಮ ಸ್ವಗ್ರಾಮಕ್ಕೆ ವಾಪಾಸ್ಸು ಹೊರಟವರು, ಊರಿಗೆ ಹೋಗದೇ ಕಾಣೆಯಾಗಿದ್ದಾರೆ.  

ಈ ಮೂವರು ಮಹಿಳೆಯನ್ನು ಕಂಡಲ್ಲಿ ಹೊಳೆಹೊನ್ನೂರು ಪೊಲೀಸ್ ಠಾಣೆಯ ದೂ.ಸಂ.: 08282-235494/ 9480803359 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.


Share: