ಗಂಗೊಳ್ಳಿ, ಜನವರಿ14: ಸ್ಥಳೀಯ ಜಾಮಿಯಾ ಮೊಹಲ್ಲಾದ ಜಾಮಿಯಾ ಯೂಥ್ಸ್ ಯಂಗ್ ಮೆನ್ ಕಮಿಟಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ನಾಅತ್ ಸ್ಪರ್ಧೆ ಇಂದು ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಂಗೊಳ್ಳಿ ಜುಮಾ ಮಸೀದಿಯ ಧರ್ಮಗುರುಗಳಾದ ಜನಾಬ್ ಮೌಲಾನಾ ಅಬ್ದುಲ್ಲ್ ಮತೀನ್ ಸಿದ್ದೀಖಿಯವರು ವಹಿಸಿದ್ದರು.
ಮೌಲಾನಾ ಅಬ್ದುಲ್ ವಹಾಬ್ ನದ್ವಿಯವರ ನಾಅತ್ ಪಠಣದ ಬಳಿಕ ಸ್ಪರ್ಧೆ ಆರಂಭವಾಯಿತು. ಮುಖ್ಯ ಅತಿಥಿಗಳಾಗಿ ಅರಿಹೊಳೆ ಅಬ್ದುಲ್ಲಾ ಸಾಹೇಬ್, ಹಿರಿಯರಾದ ಮೌಲಾನಾ ಹುಸೇನ್ ಶಬ್ಬೀರ್ ಸಾಹೇಬ್, ಜಿ. ಮೊಹಮ್ಮದ್ ಸಾಹೇಬ್, ಎಂ.ಹೆಚ್. ಅಕ್ಬರ್ ಅಲಿ ಸಾಹೇಬ್ ಹಾಗೂ ಮೌಲಾನ ಅಬ್ದುಲ್ ಹಮೀದ್ ಸಾಹೇಬ್ ಉಪಸ್ಥಿತರಿದ್ದರು.
ತಾಲ್ಲೂಕಿನಾದ್ಯಂತ ಕುತೂಹಲ ಕೆರಳಿಸಿದ್ದ ಸ್ಪರ್ಧೆಯಲ್ಲಿ ಬಹುತೇಕ ಎಲ್ಲಾ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಗಳು ಆಗಮಿಸಿದ್ದರು. ಎಲ್ಲಾ ಸ್ಪರ್ಧಿಗಳು ತಮ್ಮ ಅತ್ಯುತ್ತಮ ನಾಅತ್ ವಾಚನದಿಂದ ನೆರೆದವರ ಮನಗೆದ್ದರು. ಅಂತಿಮವಾಗಿ ಹೊರಬಿದ್ದ ಫಲಿತಾಂಶದಲ್ಲಿ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಗಂಗೊಳ್ಳಿ ಮದ್ರಸಾ ಮಿಸ್ಬಾಹುಲ್ ಉಲೂಮ್ ವಿದ್ಯಾರ್ಥಿ ಅಬ್ದುಲ್ ವಹೀದ್ ಪಡೆದರೆ ದ್ವೀತೀಯ ಸ್ಥಾನವನ್ನು ಹಳಗೇರಿಯ ಮೊಹಮ್ಮದ್ ಶಾರಿಖ್ ಹಾಗೂ ತೃತೀಯ ಸ್ಥಾನ್ವನ್ನು ಮದ್ರಸಾ ಮಿಸ್ಬಾಹುಲ್ ಉಲೂಮ್ ವಿದ್ಯಾರ್ಥಿಯಾದ ಮೊಹಮ್ಮದ್ ಮುಶ್ತಾಖ್ ಪಡೆದುಕೊಂಡರು.
ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಅಂಜುಮಾನ್ ಉರ್ದು ಘೋಷಾ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಬೀಬೀ ಆಮಿನಾ ಪಡೆದುಕೊಂಡರೆ ದ್ವಿತೀಯ ಸ್ಥಾನವನ್ನು ಗಂಗೊಳ್ಳಿ ಜಾಮಿಯಾ ಮೊಹಲ್ಲಾದ ಬೀಬಿ ರುಖೈಯ್ಯಾ ಮುಲ್ಲಾ ಹಾಗೂ ತೃತೀಯ ಸ್ಥಾನವನ್ನು ಗಂಗೊಳ್ಳಿ ಅಂಜುಮಾನ್ ಉರ್ದು ಘೋಷಾ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಬೀಬಿ ಸಭಾ ಸುಲ್ತಾನಾ ಪಡೆದುಕೊಂಡರು.
ಚಿತ್ರ, ವರದಿ: ಇಬ್ರಾಹಿಂ, ಗಂಗೊಳ್ಳಿ.