ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾಂಗ್ರೇಸ್ ಆಡಳಿತದಲ್ಲಿ ನಕಲಿ ಹೆಸರುಗಳಿಂದ ಭ್ರಷ್ಟಚಾರ -ನವಕರ್ನಾಟಕ ಸಂಕಲ್ಪ ಸಮಾವೇಶದಲ್ಲಿ ಮೋದಿ ಆರೊಪ

ಕಾಂಗ್ರೇಸ್ ಆಡಳಿತದಲ್ಲಿ ನಕಲಿ ಹೆಸರುಗಳಿಂದ ಭ್ರಷ್ಟಚಾರ -ನವಕರ್ನಾಟಕ ಸಂಕಲ್ಪ ಸಮಾವೇಶದಲ್ಲಿ ಮೋದಿ ಆರೊಪ

Thu, 04 May 2023 16:21:23  Office Staff   SOnews

ಅಂಕೋಲಾ:  ಕಾಂಗ್ರೇಸ್ ಪಕ್ಷ ತನ್ನ ಆಡಳಿತಾವಧಿಯಲ್ಲಿ ನಕಲಿ ಹೆಸರಿನಲ್ಲಿ ಸಾಕಷ್ಟು ಭ್ರಷ್ಟಚಾರ ಮಾಡಿದ್ದು, 4.2 ಕೋಟಿ ನಕಲಿ ಜನರಿಗೆ ರೇಷನ್ ಕೊಟ್ಟಿದ್ದರು. 4 ಕೋಟಿ ನಕಲಿ ಹೆಸರಿನಲ್ಲಿ ಗ್ಯಾಸ್ ಸಬ್ಸಿಡಿ ನೀಡಿದ್ದರು. 1 ಕೋಟಿ ನಕಲಿ ಹೆಸರಿನಲ್ಲಿ ಮಹಿಳಾ ಮಕ್ಕಳ ಕಲ್ಯಾಣ ಯೋಜನೆಯ ಹಣ ನೀಡಿದ್ದರು. 30 ಲಕ್ಷ ನಕಲಿ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನೀಡುತ್ತಿದ್ದರು. ಭಾರತದ ಮೂಲೆ ಮೂಲೆಯಿಂದ 10 ಕೋಟಿ ಜನರ ನಕಲಿ ಹೆಸರಗಳನ್ನ ಕಾಂಗ್ರೆಸ್ ಸರ್ಕಾರಿ ದಾಖಲೆಗ ಪತ್ರಗಳಿಗೆ ಸೇರಿಸಿತ್ತು ಎಂದು ಪ್ರಧಾನಿ ಮೋದಿ ಆರೋಪಿಸಿದರು.

ಅವರು ಬುಧವಾರ ಅಂಕೋಲಾ -ಕಾರವಾರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹಟ್ಟಿಕೇರಿ ಟೋಲ್ ಬಳಿಯ ಗೌರಿಕೆರೆ ಪ್ರದೇಶದಲ್ಲಿ ಜಿಲ್ಲಾ ಬಿಜೆಪಿ ಆಯೋಜಿಸಿದ್ದ ನವ ಕರ್ನಾಟಕ ಸಂಕಲ್ಪ ಬೃಹತ್ಸಮಾವೇಶದಲ್ಲಿ ಮಾತನಾಡಿದರು.

ಕರ್ನಾಟಕವನ್ನು ನಂ.1 ರಾಜ್ಯವನ್ನಾಗಿ ಮಾಡಲು ಬಿ ಜೆ ಪಿ  ಮತ ಯಾಚನೆ ಮಾಡುತ್ತಿದೆ. ಆದರೆ, ಕಾಂಗ್ರೆಸ್ ಹೇಗೆ ಮತ ಕೇಳುತ್ತಿದೆ ಗೊತ್ತಾ? ನಮ್ಮ ನಾಯಕ (ಸಿದ್ದರಾಮಯ್ಯ) ಚುನಾವಣೆಯಿಂದ ನಿವೃತ್ತಿಯಾಗುತ್ತಿದ್ದಾನೆ, ಮತ ನೀಡಿ ಎನ್ನುತ್ತಿದೆ. ಅಲ್ಲದೇ, ಮೋದಿಯನ್ನು ಬೈಯುವುದರ ಮೂಲಕ ವೋಟ್ ಮಾಡಿ ಎನ್ನುತ್ತಿದೆ. ಯಾರನ್ನಾದರೂ ಬೈದರೆ ಕರ್ನಾಟಕದವರು ಸಹಿಸಿಕೊಳ್ಳುತ್ತಾರೆಯೇ? ಇಲ್ಲ ಅಲ್ಲವೇ, ಅಂಥವರಿಗೆ ಶಿಕ್ಷೆ ಕೊಡಬೇಕಲ್ಲವೇ? ಎಂದು ಕೇಳಿದರು.

ಕಾಂಗ್ರೆಸ್ ಆಡಳಿತದಲ್ಲಿ ನಕಲಿ ಹೆಸರುಗಳಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿತ್ತು. ಸರ್ಕಾರಿ ಯೋಜನೆಗಳ ಹಣವನ್ನು ಲೂಟಿ ಮಾಡಲಾಗುತ್ತಿತ್ತು. ಕಾಂಗ್ರೆಸ್ನವರು 4.2 ಕೋಟಿ ನಕಲಿ ಜನರಿಗೆ ರೇಷನ್ ಕೊಟ್ಟಿದ್ದರು. 4 ಕೋಟಿ ನಕಲಿ ಹೆಸರಿನಲ್ಲಿ ಗ್ಯಾಸ್ ಸಬ್ಸಿಡಿ ನೀಡಿದ್ದರು. 1 ಕೋಟಿ ನಕಲಿ ಹೆಸರಿನಲ್ಲಿ ಮಹಿಳಾ ಮಕ್ಕಳ ಕಲ್ಯಾಣ ಯೋಜನೆಯ ಹಣ ನೀಡಿದ್ದರು. 30 ಲಕ್ಷ ನಕಲಿ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನೀಡುತ್ತಿದ್ದರು. ಭಾರತದ ಮೂಲೆ ಮೂಲೆಯಿಂದ 10 ಕೋಟಿ ಜನರ ನಕಲಿ ಹೆಸರಗಳನ್ನ ಕಾಂಗ್ರೆಸ್ ಸರ್ಕಾರಿ ದಾಖಲೆಗ ಪತ್ರಗಳಿಗೆ ಸೇರಿಸಿತ್ತು. ಹೀಗೆ ನಕಲಿ ಹೆಸರಿನಲ್ಲಿ ಬರುತ್ತಿದ್ದ ಹಣ ಎಲ್ಲಿ ಹೋಗುತ್ತಿತ್ತು? ಖ೦ಡಿತವಾಗಿಯು ಕಾಂಗ್ರೆಸ್ ಮೇಲಸ್ತರದ ನಾಯಕರಿಂದ ಕಳ ಹಂತದ ನಾಯಕರ ಜೇಬಿಗೆ ಹೋಗುತ್ತಿತ್ತು ಎಂದು ಮೋದಿ ಆರೋಪಿಸಿದರು.

ಕಾಂಗ್ರೆಸ್ನವರು ಮೋದಿಗೆ ಯಾಕೆ ಬೈಯುತ್ತಾರೆ ಗೊತ್ತಾ? ಕಾಂಗ್ರೆಸ್ ಸೃಷ್ಟಿಸಿದ ಭ್ರಷ್ಟ ವ್ಯವಸ್ಥೆಯನ್ನು ನಾನು ನಾಶ ಮಾಡಿದೆ. ಅದಕ್ಕೆ ಕಾಂಗ್ರೆಸ್ನವರು ಮೋದಿಯನ್ನು ಬೈಯುತ್ತಾರೆ. ನಾನು 9 ವರ್ಷಗಳಲ್ಲಿ ನಕಲಿ ಹೆಸರಿನಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ತಡೆದಿದ್ದೇನೆ. ಇದ ರಿಂದ 3.75 ಲಕ್ಷ ಕೋಟಿ ರೂ. ಉಳಿತಾಯ ಮಾಡಿದ್ದೇನೆ. ಎಂದರು.

ಆದಿವಾಸಿಗಳನ್ನು ಕಂಡರೆ ಆಗದು: ಕಾಂಗ್ರೆಸ್ ಪಕ್ಷವೂ ಎಂದಿಗೂ ಆದಿವಾಸಿಗಳ ಪರವಾಗಿ ಇರಲಿಲ್ಲ. ಬಿಜೆಪಿಯು ದೇಶದ ಮೊದಲ ಆದಿವಾಸಿ ಮಹಿಳೆಯನ್ನು ದೇಶದ ಉನ್ನತ ಸ್ಥಾನಕ್ಕೆ ಆಯ್ಕೆ ಮಾಡಿತು. ಕಾಂಗ್ರೆಸ್ ಇದಕ್ಕೂ ವಿರೋಧ ವ್ಯಕ್ತಪಡಿಸಿತು. ಬಿಜೆಪಿ ಅಭ್ಯರ್ಥಿ ಎಂಬ ಕಾರಣಕ್ಕೆ ಆದಿವಾಸಿ ಮಹಿಳೆಯನ್ನು ವಿರೋಧಿಸಲಿಲ್ಲ. ಬದಲಾಗಿ ಅದರ ನೀತಿಯೇ ಆದಿವಾಸಿಗಳನ್ನು ಉದ್ಧರಿಸುವುದಾಗಿಲ್ಲ ಎಂದರು.


Share: