ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಸ್ಟಮ್ ಅಧಿಕಾರಿ ಎಂದು ನಂಬಿಸಿ ಮೋಸ ಮಾಡುತ್ತಿದ್ದವ ಪೊಲೀಸರ ಬಲೆಗೆ

ಕಸ್ಟಮ್ ಅಧಿಕಾರಿ ಎಂದು ನಂಬಿಸಿ ಮೋಸ ಮಾಡುತ್ತಿದ್ದವ ಪೊಲೀಸರ ಬಲೆಗೆ

Wed, 06 Jul 2022 03:44:57  Office Staff   SO News

ಶಿರಸಿ :  ಕಸ್ಟಮ್ ಅಧಿಕಾರಿ ಎಂದು ಸುಳ್ಳು ಹೇಳಿ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ಸಾರ್ವಜನಿಕರಿಗೆ ವಂಚಿಸುತ್ತಿದ್ದ ಆರೋಪಿತನೋರ್ವನನ್ನ  ಶಿರಸಿ  ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.

ಸೊರಬದ ಮನೋಜ್ ನರಸಿಂಹ ಪೂಜಾರಿ (30) ಬಂಧಿತ.  ಈತ ತಾನು ಕಸ್ಟಮ ಅಧಿಕಾರಿ ಎಂದು ಹಾಲಿ ಹುಬ್ಬಳ್ಳಿ ಕಸ್ಟಮ ವಿಭಾಗದಲ್ಲಿ ಕರ್ತವ್ಯದಲ್ಲಿ ಇರುವುದಾಗಿ ಸುಳ್ಳು ಹೇಳಿ  ಅರೆಕೊಪ್ಪದ ವಿನಾಯಕ ಮಂಜುನಾಥ ಹೆಗಡೆ  ಹಾಗೂ ಅವರ  ಗೆಳೆಯರಿಗೆ ಸರಕಾರಿ ಉದ್ಯೋಗ ಗೊಳಿಸುವುದಾಗಿ ನಂಬಿಸಿ ಸುಮಾರು 7,70000 /-ರೂಪಾಯಿ ಹಣವನ್ನು ಪಡೆದು ಮೋಸ ಮಾಡಿದ ಬಗ್ಗೆ ಸಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

 ಎಸ್ಪಿ  ಡಾ ಸುಮನ್. ಡಿ ಪೆನ್ನೇಕರ್ . ಮಾರ್ಗದರ್ಶನದಲ್ಲಿ ಶಿರಸಿ ಡಿವೈಎಸ್ಪಿ   ರವಿ.ಡಿ.ನಾಯ್ಕ‌ ನೇತೃತ್ವದಲ್ಲಿ ಸಿಪಿಐ ರಾಮಚಂದ್ರ ನಾಯಕ  ಪಿ.ಎಸ್.ಐ  ಈರಯ್ಯ. ಡಿ. ಎನ್., ಪ್ರೊ. ಪಿ.ಎಸ್. ಐ ದೇವೇಂದ್ರ ನಾಯ್ಕ  ಸಿಬ್ಬಂದಿಗಳಾದ ಚೇತನ್.ಎಚ್.ಮಹದೇವ ನಾಯಕ, ಗಣಪತಿ ನಾಯ್ಕ, ಕುಬೇರಪ್ಪ, ಪ್ರದೀಪ್ ರೇವಣಕರ್,  ಶ್ರೀಧರ. ಅರುಣ , ಲಕ್ಷ್ಮಪ್ಪ , ಚೇತನ ಆರೋಪಿತನನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.


Share: