ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕವಿವಿ 72ನೇ ಘಟಿಕೋತ್ಸವ. ಪತ್ರಿಕೋದ್ಯಮ ವಿಭಾಗದ ಸುಜಾತಾ ಜೋಡಳ್ಳಿ ಚಿನ್ನದ ಹುಡುಗಿ

ಕವಿವಿ 72ನೇ ಘಟಿಕೋತ್ಸವ. ಪತ್ರಿಕೋದ್ಯಮ ವಿಭಾಗದ ಸುಜಾತಾ ಜೋಡಳ್ಳಿ ಚಿನ್ನದ ಹುಡುಗಿ

Thu, 09 Jun 2022 03:48:12  Office Staff   SO News

ಧಾರವಾಡ :  ಕರ್ನಾಟಕ ವಿಶ್ವವಿದ್ಯಾಲಯದ ಎಂ.ಎ ಪತ್ರಿಕೋದ್ಯಮ ಪದವಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿ, ಒಂಬತ್ತು ಚಿನ್ನದ ಪದಕಗಳೊಂದಿಗೆ ಕಲಘಟಗಿ ತಾಲೂಕಿನ ಸೂಳಿಕಟ್ಟಿಯ ಸುಜಾತ ಜೋಡಳ್ಳಿ ಚಿನ್ನದ ಹುಡುಗಿಯಾಗಿ ಹೊರಹೊಮ್ಮಿದ್ದಾಳೆ.

ಸುಜಾತ ಸೂಳಿಕಟ್ಟೆ ಗ್ರಾಮ ಪಂಚಾಯತ ಡಿ ದರ್ಜೆ ನೌಕರರಾಗಿರುವ ನಾಗೇಶ ಜೋಡಳ್ಳಿ  ಮತ್ತು ಗೃಹಿಣಿ ಮಹಾದೇವಿ ಅವರ ಪುತ್ರಿಯಾಗಿದ್ದಾಳೆ.

ಕವಿವಿ 72 ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸುವ ವಿದ್ಯಾರ್ಥಿಗಳಿಗೆ ಕೊಡಮಾಡುವ, ಕುಮಾರ  ಮಹಾದೇವ  ಸ್ವರ್ಣಪದಕ, ಡಾ.ಮಾಸ್ತಿ ವೆಂಕಟೇಶ್ ಅಯ್ಯಂಗಾರ ಸ್ವರ್ಣಪದಕ, ಕೆ.ಎಂ.ರಾಜಶೇಖರಪ್ಪ ಹಿರೇಮಠ ಸ್ವರ್ಣಪದಕ,  ಮೋಹರೆ ಹನುಮಂತರಾಯ್ ಸ್ವರ್ಣಪದಕ, ಕೆ.ಶಾಮರಾವ ಸ್ವರ್ಣಪದಕ, ಲಕ್ಷ್ಮಣ ಶ್ರೀಪಾದ ಭಟ್ ಜೋಶಿ ಸ್ಮಾರಕ ಸ್ವರ್ಣಪದಕ, ಎಸ್. ವೀರೇಶ್ ನೀಲಕಂಠಶಾಸ್ತ್ರಿ ಸಂಗನಹಾಲ ಸ್ವರ್ಣಪದಕ, ಆರ್.ಎಸ್.ಚಕ್ರವರ್ತಿ ಸ್ವರ್ಣಪದಕ, ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸ್ವರ್ಣಪದಕ ಸೇರಿದಂತೆ ಇಂದುಮತಿ ಡಾ.ಪಾಟೀಲಪುಟ್ಟಪ್ಪ, ಡೆಕ್ಕನ್ ಹೆರಾಲ್ಡ್/ಪ್ರಜಾವಾಣಿ ನಗದು ಪುರಸ್ಕಾರಗಳನ್ನು ಕುಮಾರಿ ಸುಜಾತಾ ಜೋಡಳ್ಳಿಯವರು ಪಡೆದಿದ್ದಾರೆ. 

ಪ್ರಸ್ತುತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರಾವಾರ ಕಚೇರಿಯಲ್ಲಿ ಅಪ್ರೇಂಟಿಸ್ ಆಗಿ  ತರಬೇತಿ ಪಡೆಯುತ್ತಿದ್ದಾರೆ. ಚಿನ್ನದ ಹುಡುಗಿ ಸುಜಾತಾ ಮಾತನಾಡಿ, ತಂದೆ, ತಾಯಿ ಹಾಗೂ ಸ್ನೇಹಿತೆ ವಿದ್ಯಾಳ ಸಹಾಯ, ಸಹಕಾರದಿಂದ ಈ ಸಾಧನೆ ಸಾಧ್ಯವಾಯಿತು. ಮಾಧ್ಯಮದಲ್ಲಿಯೇ ವೃತ್ತಿ ಆರಂಭಿಸುವುದು ನನ್ನ ಆಶಯವಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದಳು.


Share: