ಭಟ್ಕಳ: ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪಟ್ಟಣದ ಹೃದಯಭಾಗವಾದ ಶಂಸುದ್ದೀನ್ ವೃತ್ತ ಹಳದಿ, ಕೆಂಪು ಬಣ್ಣದ ಪತಾಕೆಗಳಿಂದ ರಾರಾಜಿಸುತ್ತಿದೆ.
ಆಸರಕೇರಿಯ ಭುವನೇಶ್ವರಿ ಕನ್ನಡ ಸಂಘದ ರಜತ ಮಹೋತ್ಸವದ ಹಿನ್ನೆಲೆಯಲ್ಲಿ ಸಂಘದ ಸದಸ್ಯರು ಪಟ್ಟಣದ ಶಂಸುದ್ದೀನ್ ವೃತ್ತವನ್ನು ರಾಜ್ಯೋತ್ಸವ ಆಚರಣೆಯ ಅಂಗವಾಗಿ ಹಳದಿ, ಕೆಂಪು ಬಂಟಿಂಗ್ಸ್ಗಳಿಂದ ರಾರಾಜಿಸುವಂತೆ ಮತ್ತು ವೃತ್ತದ
ಗೋಪುರವನ್ನೂ ಹಳದಿ, ಕೆಂಪು ಬಣ್ಣದ ಬಂಟಿಂಗ್ಸ್ ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಿ ಕಂಗೊಳಿಸುವಂತೆ ಮಾಡಿದ್ದಾರೆ.
ಭುವನೇಶ್ವರಿ ಕನ್ನಡ ಸಂಘದ ಸದಸ್ಯರು ಸುಮಾರು ಮೂಾಲ್ಕು ತಾಸುಗಳ ಕಾಲ ಶ್ರಮಪಟ್ಟು ಕನ್ನಡ ರಾಜ್ಯೋತ್ಸವಕ್ಕೆ ಶಂಸುದ್ದೀನ್ ವೃತ್ತ ರಾರಾಜಿಸುವಂತೆ ಮಾಡಿದ್ದು,
ಇವರ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.
ರಾಷ್ಟ್ರೀಯ ಹೆದ್ದಾರಿಯೂ ವೃತ್ತದಲ್ಲೇ ಹಾದು ಹೋಗಿದ್ದರಿ೦ದ ಹಳದಿ, ಕೆಂಪು ಬಣ್ಣದ ಬಂಟಿಂಗ್ಸ್ಗಳಿಂದ ಕ೦ಗೊಳಿಸುತ್ತಿರುವ ವೃತ್ತವನ್ನು ಹೆದ್ದಾರಿಯಲ್ಲಿ ಸಂಚರಿಸುವ ವಿವಿಧ ಪ್ರದೇಶದ ಜನರು ಹಾಗೂ ಸ್ಥಳೀಯರು ವೀಕ್ಷಿಸಿ ಸಂತಸ ಪಡುತ್ತಿದ್ದಾರೆ. ರಾತ್ರಿ ಸಂದರ್ಭದಲ್ಲಿ ಶಂಸುದ್ದೀನ್ ವೃತ್ತ ಸು೦ದರವಾಗಿ ಕಾಣಿಸುವಂತಾಗಿದೆ.
ಕಳೆದ ಎರಡು ವರ್ಷಗಳಿಂದ ಕೊರೋನಾ ಹಿನ್ನೆಲೆಯಲ್ಲಿ ಕನ್ನಡ ರಾಜ್ಯೋತ್ಸವ ಈ ಬಾರಿ ಸರಳವಾಗಿ ಆಚರಿಸಲಾಗಿದ್ದ ಎಲ್ಲೆಡೆ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಭಟ್ಕಳದಲ್ಲೂ ಸಂಭ್ರಮದ ರಾಜ್ಯೋತ್ಸವ ನಡೆಸಲಾಗಿದೆ.