ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಬೆಳಗಾವಿ ಖಾಸಗಿ ಟ್ಯೂಶನ್‌ದಾರರಿಗೆ ಸೂಚನೆ

ಬೆಳಗಾವಿ ಖಾಸಗಿ ಟ್ಯೂಶನ್‌ದಾರರಿಗೆ ಸೂಚನೆ

Fri, 30 Apr 2010 13:51:00  Office Staff   S.O. News Service
 
ಬೆಳಗಾವಿ:ಏಪ್ರಿಲ್:೩೦, ಖಾಸಗಿಯಾಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಟ್ಯೂಶನ್‌ವನ್ನು ತೆರೆಯಲು ಕರ್ನಾಟಕ ಶಿಕ್ಷಣ ಕಾಯಿದೆ ೧೯೮೩ ರನ್ವಯ ಶಿಕ್ಷಣ ಇಲಾಖೆಯಿಂದ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಕಾರಣ ಖಾಸಗಿಯಾಗಿ ಟ್ಯೂಶನ್ ತೆರೆಯಲು ಇಚ್ಛಿಸುವವರು ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕೆಂದು ಬೆಳಗಾವಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.  
       ಖಾಸಗಿಯಾಗಿ ಟ್ಯೂಶನ್ ತೆರೆಯಲು ಇಚ್ಛಿಸುವವರು ಈ ಕೆಳಕಂಡಂತೆ ನೋಂದಣಿ ಶುಲ್ಕವನ್ನು ಭರಣಾ ಮಾಡಿ ಟುಟೋರಿಯಲ್ಸ್ ಸಂಸ್ಥೆಗಳನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ೧ ರಿಂದ ೭ ತರಗತಿಗಾಗಿ ನೊಂದಣಿ ಶುಲ್ಕ ರೂ. ೫,೦೦೦/- ಹಾಗೂ ೮ ರಿಂದ ೧೦ ತರಗತಿಯವರೆಗೆ ನೋಂದಣಿ ಶುಲ್ಕ ರೂ. ೧೦,೦೦೦/- ಇರುತ್ತದೆ. ನೊಂದಣಿ ಶುಲ್ಕವನ್ನು ಡಿ.ಡಿ. ರೂಪದಲ್ಲಿ ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳಗಾವಿ ಹೆಸರಿನಲ್ಲಿ ಪಡೆದು ನಮೂನೆ (೨) (ನಿಯಮ ೩ ಮತ್ತು ೪) ರಲ್ಲಿ ಅರ್ಜಿಯನ್ನು ಸಲ್ಲಿಸಿ ನೊಂದಾಯಿಸಿಕೊಳ್ಳಬೇಕು. 
     ಅರ್ಜಿ ನಮೂನೆಯನ್ನು ನೋಂದಣಿ ಪ್ರಾಧಿಕಾರಕ್ಕೆ ಖುದ್ದಾಗಿ ಇಲ್ಲವೇ ರಜಿಸ್ಟರ್ ಪೋಸ್ಟ್ ಮೂಲಕ ಸಲ್ಲಿಸಬೇಕು. ನೊಂದಣಿ ಇಲ್ಲದ ಟ್ಯೂಶನ್ ಕ್ಲಾಸ್‌ಗಳನ್ನು ನಡೆಸಿದಲ್ಲಿ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳಗಾವಿ (ದ) ಉಪನಿರ್ದೇಶಕ ಶ್ರೀ. ವಿ.ಎಮ್. ಪಾಟೀಲ ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಅವರನ್ನೇ ಸಂಪರ್ಕಿಸಲು ಕೋರಲಾಗಿದೆ.  


Share: