ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕರ್ನಾಟಕದಾದ್ಯಂತ ಗ್ಯಾರಂಟಿ ಅಲೆ- ರವೀಂದ್ರ ನಾಯ್ಕ.

ಕರ್ನಾಟಕದಾದ್ಯಂತ ಗ್ಯಾರಂಟಿ ಅಲೆ- ರವೀಂದ್ರ ನಾಯ್ಕ.

Sat, 27 Apr 2024 23:22:30  Office Staff   SO News

ಅಂಕೋಲಾ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯ ಸರಕಾರದ ಜನಪರ ಗ್ಯಾರಂಟಿ ಯೋಜನೆ ರಾಜ್ಯಾದ್ಯಂತ ಅಲೆಯಾಗಿ ಹೊರಹೊಮ್ಮಿದ್ದು, ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಕಾಂಗ್ರೇಸ್ ಪಕ್ಷಕ್ಕೆ ದೊರಕುವುದೆಂದು ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

ಅವರು ಇಂದು ಕಾಂಗ್ರೇಸ್ ಪಕ್ಷದ ಲೋಕಸಭಾ ಅಭ್ಯರ್ಥೀ ಅಂಜಲಿ  ನಿಂಬಾಳ್ಕರ್ ಅವರ ಪರ ಪ್ರಚಾರಾರ್ಥವಾಗಿ ಅಂಕೋಲಾ ತಾಲೂಕಿನ ಅಚಿವೆ ಗ್ರಾಮಕ್ಕೆ ಬಂದAತಹ ಸಂದರ್ಭದಲ್ಲಿ ಮೇಲಿನಂತೆ ಹೇಳಿದರು.

 ಗ್ಯಾರಂಟಿ ಯೋಜನೆಯಿಂದ ಕರ್ನಾಟಕ ರಾಜ್ಯದಲ್ಲಿ ಒಂದು ಕೋಟಿ ಏಳು ಲಕ್ಷ ಕುಟುಂಬಗಳು ಬಡತನ ರೇಖೆಕ್ಕಿಂತ ಮೇಲಕ್ಕೆ ಬಂದಿದ್ದಾರೆ ಎಂದು ಅವರು ಹೇಳಿದರು. ರಾಜ್ಯ ಸರಕಾರದ ಗ್ಯಾರಂಟಿ ಯೋಜನೆ ದೇಶಕ್ಕೆ ಮಾದರಿಯಾಗಿದ್ದು, ಬಡತನದ ಹಸಿವನ್ನ ನಿವಾರಿಸಲು ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಮತ ಚಲಾಯಿಸಬೇಕೆಂದು ಅವರು ಹೇಳಿದರು.

 ಇಂದು ಧರ್ಮ ಮತ್ತು ದೆವರು ಚುನಾವಣೆ ಪ್ರಚಾರದ ಸಲಕರಣೆಗಳಾಗುತ್ತಿರುವುದು ವಿಷಾದಕರ. ಧರ್ಮದ ಆಧಾರಿತವಾಗಿ ಮತ ಚಲಾಯಿಸುವವರನ್ನ ತೀರಸ್ಕರಿಸಿ ಎಂದು ಅವರು ಹೇಳಿದರು.

 ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ ಎಮ್ ಶೆಟ್ಟಿ ಮಾತನಾಡುತ್ತಾ ಕಾಂಗ್ರೇಸ್ ಪಕ್ಷಕ್ಕೆ ಮತ ನೀಡಬೇಕೆಂದು ಹೇಳಿದರು. ಗ್ರಾಮ ಪಂಚಾಯತ ಅಧ್ಯಕ್ಷ ಬಾಲಚಂದ್ರ ಶೆಟ್ಟಿ, ಗ್ರಾಮ ಪಂಚಾಯತ ಉಪಾಧ್ಯಕ್ಷರು ಶ್ರೀದೇವಿ ಪಟಗಾರ, ಉದಯ ಗುನಗ ಮಾತನಾಡಿದರು. ರಾಮದಾಸ ನಾಯ್ಕ ನರ‍್ಕುಳಿ, ಶಾಂತಾರಾಮ ನಾಯ್ಕ ಕುಂಟಗಣಿ, ನರಸಿಂಹ ಸಿದ್ಧಿ ಅಂಗಡಿಬೈಲ್, ಮಂಕಾಳಿ ಸಿದ್ಧಿ, ವಾಸುದೇವ ಹಳ್ಳೇರ್, ಬೊಮ್ಮಯ್ಯ ಗುನಗ, ಹರಿಹರ ಸಿದ್ಧಿ, ತಿಮ್ಮಣ್ಣ ನಾಯ್ಕ, ನಾರಾಯಣ ಗೌಡ ಮುಂತಾದವರು ಉಪಸ್ಥಿತರಿದ್ದರು.


Share: