ಬೆಂಗಳೂರು: ರಾಜ್ಯದಲ್ಲಿ ಒಮಿಕ್ರಾನ್ನ ಹೊಸ ಎಕ್ಸ್ಇ ರೂಪಾಂತರದ ಯಾವುದೇ ಪ್ರಕರಣ ಪತ್ತೆಯಾಗಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಿ ರಂದೀಪ್ ತಿಳಿಸಿದ್ದಾರೆ.
ಒಂದು ತಿಂಗಳ ಹಿಂದೆ ಕೋವಿಡ್ ಪರೀಕ್ಷೆ ನಡೆಸಿದ 50 ವರ್ಷದ ದಕ್ಷಿಣ ಆಫ್ರಿಕಾದ ವಸ್ತ್ರ ವಿನ್ಯಾಸಕರ ವಿದೇಶದಿಂದ ಬಂದಿರುವ ವ್ಯಕ್ತಿಯ ಮಾದರಿಯಲ್ಲಿ ಕೋವಿಡ್ನ XE ರೂಪಾಂತರಿ ಕಂಡುಬಂದಿದೆ ಎಂದು ಮುಂಬೈ ಮಹಾ ನಗರ ಪಾಲಿಕೆ ಸಂಸ್ಥೆ ವರದಿ ಮಾಡಿದ ನಂತರ ಬೆಂಗಳೂರಿನ ನಾಗರಿಕರಲ್ಲಿ ಆತಂಕ ಮನೆಮಾಡಿದೆ. ಕೋವಿಡ್ ಮೂರನೇ ಅಲೆ ಕಡಿಮೆಯಾಗುತ್ತಿದ್ದಂತೆ ಇದೀಗ ಗುಜರಾತ್ ನಲ್ಲಿ ಕೂಡ ರೂಪಾಂತರಿ ಪತ್ತೆಯಾಗಿದ್ದು ಜನರಲ್ಲಿ ಹೆಚ್ಚಿನ ಭೀತಿ ಹುಟ್ಟಿಸಿದೆ.
ಮುಂಬೈಯಲ್ಲಿ ರೋಗಿಯ ಮಾದರಿಯ ಜಿನೋಮ್ ಅನುಕ್ರಮವು XE ಇರುವಿಕೆಯನ್ನು ಕೇಂದ್ರ ಆರೋಗ್ಯ ಸಚಿವಾಲಯ ಖಚಿತಪಡಿಸಿಲ್ಲ, ಇಲ್ಲಿಯವರೆಗೆ, ಕರ್ನಾಟಕ ರಾಜ್ಯದಲ್ಲಿ XE ರೂಪಾಂತರದ ಯಾವುದೇ ಶಂಕಿತ ಪ್ರಕರಣ ವರದಿಯಾಗಿಲ್ಲ. ಜೀನೋಮ್ ಅನುಕ್ರಮಕ್ಕಾಗಿ XE ಯ ಯಾವುದೇ ಶಂಕಿತ ಮಾದರಿಗಳನ್ನು ಕಳುಹಿಸಿಲ್ಲ ಎಂದು ರಂದೀಪ್ ಹೇಳಿದ್ದಾರೆ.
ಮುಂಬೈ, ಗುಜರಾತ್ ನಲ್ಲಿ XE ಮಾದರಿ ಪತ್ತೆ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಪ್ರಯಾಣಿಕರನ್ನು ಪರೀಕ್ಷಿಸುವಲ್ಲಿ ರಾಜ್ಯವು ಹೆಚ್ಚುವರಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದೆಯೇ ಎಂದು ಕೇಳಿದಾಗ, ಇದು ಹೊಸ ರೂಪಾಂತರವಲ್ಲ. ಇದು ಕೇವಲ ಮರುಸಂಯೋಜಕವಾಗಿದೆ, ಆದ್ದರಿಂದ ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದರು.
XE ರೂಪಾಂತರವು ಒಮಿಕ್ರಾನ್ನ BA.1 ಮತ್ತು BA.2 ತಳಿಗಳ ಸಂಯೋಜನೆಯಾಗಿದೆ ಶೇಕಡಾ 10ರಷ್ಟು ಹೆಚ್ಚು ಹರಡುತ್ತದೆ. XE ರೂಪಾಂತರವನ್ನು ಇಂಗ್ಲೆಂಡ್ ನಲ್ಲಿ ಮೊದಲು ಕಂಡುಹಿಡಿಯಲಾಯಿತು. ನ್ಯೂಜಿಲೆಂಡ್ ಮತ್ತು ಥೈಲ್ಯಾಂಡ್ನಲ್ಲಿಯೂ ಪತ್ತೆಯಾಗಿದೆ ಎಂದು ಹೇಳಲಾಗುತ್ತದೆ.
ಇಲ್ಲಿಯವರೆಗೆ, ಕರ್ನಾಟಕದಲ್ಲಿ, ಆಯ್ದ ಪ್ರಾತಿನಿಧಿಕ ಮಾದರಿಗಳ ಜೀನೋಮ್ ಅನುಕ್ರಮವು ಒಮಿಕ್ರಾನ್ಗೆ ಪರೀಕ್ಷೆ ಮಾಡಿದ 3,775 ಮಾದರಿಗಳಲ್ಲಿ, 947 ಮಾದರಿಗಳು ಒಮಿಕ್ರಾನ್ನ BA1.1.529 ರೂಪಾಂತರಕ್ಕೆ ಮತ್ತು 99 ಮಾದರಿಗಳು ಒಮಿಕ್ರಾನ್ನ BA.1 ರೂಪಾಂತರಿಗೆ ಕೋವಿಡ್ ಪರೀಕ್ಷೆಯನ್ನು ದೃಢಪಡಿಸಿದೆ. ಈ ವರ್ಷವೊಂದರಲ್ಲೇ, 2,729 ಮಾದರಿಗಳು ಒಮಿಕ್ರಾನ್ನ BA.2 ರೂಪಾಂತರಿ ಪರೀಕ್ಷೆ ಮಾಡಲಾಗಿದೆ