ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕನ್ನಯ್ಯ ಹತ್ಯೆ ಖಂಡಿಸಿ ಕಾರವಾರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ಕನ್ನಯ್ಯ ಹತ್ಯೆ ಖಂಡಿಸಿ ಕಾರವಾರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

Sun, 03 Jul 2022 02:09:18  Office Staff   SO News

ಕಾರವಾರ : ರಾಜಸ್ಥಾನದ ಉದಯಪುರಲ್ಲಿ ಟೈಲರ್ ಕನ್ನಯ್ಯ ಹತ್ಯೆ ಖಂಡಿಸಿ ಕಾರವಾರದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. 

ಶನಿವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು  ಸೇರಿದ ಬಿಜೆಪಿ ಕಾರ್ಯಕರ್ತರು ರಾಜಸ್ಥಾನ ಕಾಂಗ್ರೆಸ್  ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. 

ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಕಾಂಗ್ರೆಸ್ ಸರ್ಕಾರ ಇರುವ ರಾಜ್ಯಗಳಲ್ಲಿ ಹಿಂದುಗಳ ಮೇಲೆ ಈ ಕುಕೃತ್ಯ ನಡೆಯುತ್ತಿದ್ದು,  ತಡೆಯುವಲ್ಲಿ  ಅಲ್ಲಿನ ಸರ್ಕಾರ ವಿಫಲವಾಗುತ್ತಿದೆ.  ಕನ್ನಯ್ಯ ಹತ್ಯೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಮನವಿ ನೀಡಿದ್ದಾರೆ.


Share: