ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಒಬಿಸಿಗಳಿಗೆ ಒಳ ಮೀಸಲಾತಿ ಅಗತ್ಯ: ಸೋನಿಯಾ ಆಗ್ರಹ

ಒಬಿಸಿಗಳಿಗೆ ಒಳ ಮೀಸಲಾತಿ ಅಗತ್ಯ: ಸೋನಿಯಾ ಆಗ್ರಹ

Thu, 21 Sep 2023 21:59:19  Office Staff   Vb

ಹೊಸದಿಲ್ಲಿ: ಮಹಿಳಾ ಮೀಸಲಾತಿ ಮಸೂದೆಯನ್ನು ತನ್ನ ಪಕ್ಷ ಬೆಂಬಲಿಸುತ್ತದೆ ಎಂದು ಹೇಳಿದ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಆದರೆ ಈ 33 ಶೇ. ಮೀಸಲಾತಿಯಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ) ಗಳು, ಪರಿಶಿಷ್ಟ ಪಂಗಡ (ಎಸ್‌)ಗಳು ಮತ್ತು ಇತರ ಹಿಂದುಳಿದ ವರ್ಗ (ಒಬಿಸಿ)ಗಳಿಗೆ ಒಳ ಮೀಸಲಾತಿ ಇರಬೇಕು ಎಂದು ಒತ್ತಾಯಿಸಿದರು.

ಲೋಕಸಭೆಯಲ್ಲಿ ಮಂಗಳವಾರ ಮಂಡನೆಯಾಗಿರುವ ನಾರಿಶಕ್ತಿ ವಂದನಾ ಅಧಿನಿಯಮ ಮಸೂದೆಯಲ್ಲಿ, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಮಹಿಳೆಯರಿಗೆ, ಈ ಎರಡು ಸಮುದಾಯಗಳಿಗೆ ಈಗಾಗಲೇ ಮೀಸಲಾಗಿರುವ ಕ್ಷೇತ್ರಗಳಲ್ಲಿ ಒಳ ಮೀಸಲಾತಿಯನ್ನು ಒದಗಿಸಲಾಗಿದೆ. ಆದರೆ, ಇತರ ಹಿಂದುಳಿದ ವರ್ಗಗಳಿಗೆ ಇಂತಹ ಒಳ ಮೀಸಲಾತಿಯಿಲ್ಲ.

ಬುಧವಾರ ಲೋಕಸಭೆಯು ಈ ಮಸೂದೆಯನ್ನು ಚರ್ಚೆಗೆ ಎತ್ತಿಕೊಂಡಾಗ, ಸದನದಲ್ಲಿ ಮೊದಲು ಮಾತನಾಡಿದ್ದು ಸೋನಿಯಾ ಗಾಂಧಿ, ತಕ್ಷಣ ಜಾತಿ ಗಣತಿಯನ್ನು ಮಾಡಬೇಕು ಎಂಬುದಾಗಿ ಯೂ ಅವರು ಸರಕಾರವನ್ನು ಒತ್ತಾಯಿಸಿದರು. ಮಸೂದೆ ಈಗ ಅಂಗೀಕಾರಗೊಂಡರೂ ಜಾರಿಯಾಗುವುದು 2029ರ ಲೋಕಸಭಾ ಚುನಾವಣೆಯ ವೇಳೆಗೆ ಎಂದು ಹೇಳಲಾಗಿದೆ.

ಮಸೂದೆಯನ್ನು ತಕ್ಷಣ ಜಾರಿಗೊಳಿಸಬೇಕು ಎಂದು ಅವರು ತನ್ನ ಭಾಷಣದಲ್ಲಿ ಒತ್ತಾಯಿಸಿದರು. “ಭಾರತೀಯ ಮಹಿಳೆಯರು ರಾಜಕೀಯ ಜವಾಬ್ದಾರಿಗಳನ್ನು ಹೊರಲು 13 ವರ್ಷಗಳಿಂದ ಕಾಯುತ್ತಿದ್ದಾರೆ. ಈಗ ಇನ್ನಷ್ಟು ವರ್ಷ ಕಾಯಿರಿ ಎಂದು ಅವರಿಗೆ ಹೇಳಲಾಗುತ್ತಿದೆ. ಇನ್ನೆಷ್ಟು ವರ್ಷಗಳು? ಭಾರತೀಯ ಮಹಿಳೆಯರ ಜೊತೆಗಿನ ಈ ವರ್ತನೆ ಸಾಧುವೇ?” ಎಂದು ಅವರು ಪ್ರಶ್ನಿಸಿದರು.


Share: