ಭಟ್ಕಳ: ಇತ್ತೀಚೆಗೆ ತಾಲ್ಲೂಕಿನ ಪುರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ಅದೇರೀತಿ ಒಂದೂವರೆ ವರ್ಷದ ಮಗುವೊಂದರ ಮೇಲೆ ಬೀದಿ ನಾಯಿ ದಾಳಿ ನಡೆಸಿದ್ದು ಮಗುವಿನ ಮೂಗಿನ ಮೇಲೆ ಮತ್ತು ಮುಖಕ್ಕೆ ಕಚ್ಚಿ ಗಾಯಗೊಳಿಸಿದೆ.
ಗಾಯಗೊಂಡಿರುವ ಮಗು ಇಸ್ಮಾಯಿಲ್ ತೈಮೂರ್ ತಂದೆ ಜಾಕಿರ್ ಸಿದ್ದಿ ಬಾಪಾ, ಡೊಂಗರಪಲ್ಲಿ ನಿವಾಸಿ ಎಂದು ತಿಳಿದು ಬಂದಿದೆ. ಮಗುವನ್ನು ತಕ್ಷಣ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ.
ಮನೆಯ ಹೊರಗಡೆ ಆಟವಾಡುವ ಸಮಯದಲ್ಲಿ ನಾಯಿ ದಾಳಿ ನಡೆದಿದ್ದು ಕೂಡಲೇ ಮನೆಯವರು ಹೊರಗೆ ಬಂದು ನಾಯಿಯಿಂದ ಬಾಲಕನನ್ನು ರಕ್ಷಿಸಿದ್ದಾರೆ ಎನ್ನಲಾಗಿದೆ.