ಮೂಡಬಿದ್ರೆ, ನ.೬: ‘ಕನ್ನಡ ಮನಸ್ಸು- ಸಮನ್ವಯದೆಡೆಗೆ’ ಎಂಬ ಪರಿಕಲ್ಪನೆಯೊಂದಿಗೆ ಮೂರು ದಿನಗಳ ಕಾಲ ನಡೆಯಲಿರುವ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿಗೆ ಕರಾವಳಿಯ ಸಾಂಸ್ಕೃತಿಕ ಮತ್ತು ಜನಪದ ಹಿನ್ನೆಲೆಯ ಮೆರುಗಿನೊಂದಿಗೆ ವರ್ಣರಂಜಿತ ಚಾಲನೆ ದೊರೆಯಿತು.
ಸಮ್ಮೇಳನದ ಪ್ರವೇಶದ್ವಾರದಿಂದ ಗಂಗೂಬಾಯಿ ಹಾನಗಲ್ ಸಭಾಂಗಣದವರೆಗೆ ಸಮ್ಮೇಳನಾಧ್ಯಕ್ಷ ಡಾ.ಹಂಪ ನಾಗರಾಜಯ್ಯ ಮತ್ತು ಉದ್ಘಾಟಕ ಡಾ.ಎಂ. ಎಸ್.ಲಕ್ಷ್ಮೀ ನಾರಾಯಣ ಭಟ್ಟರನ್ನು ಪಲ್ಲಕಿಯಲ್ಲಿ ಮೆರವಣಿಗೆಯೊಂದಿಗೆ ಕರೆತರಲಾಯಿತು. ತುಳು ನಾಡಿನಲ್ಲಿ ಭತ್ತ ಅಳೆಯಲು ಬಳಸುವ ಕಳಸೆಗೆ ಭತ್ತದ ತೆನೆಯನ್ನು ನೆಟ್ಟು ಅದಕ್ಕೆ ಹಾಲೆರೆದು ತುಳುನಾಡ ಶೈಲಿ ಯಲ್ಲಿ ಉದ್ಘಾಟಕರು ಸಮ್ಮೇಳನಕ್ಕೆ ಚಾಲನೆ ನೀಡಿದರು.
ಗೊಂಬೆಕುಣಿತ, ಕೀಲುಕುದುರೆ, ಕೊಂಬು, ಚೆಂಡೆ, ಡೊಳ್ಳುಕುಣಿತ, ಪೂಜಾನೃತ್ಯ, ಕೇರಳದ ಸಾಂಪ್ರದಾಯಿಕ ಚೆಂಡೆವಾದಕರ ತಂಡ, ನಂದಿಕೋಲು, ಬಣ್ಣದ ಕೊಡೆಗಳ ಸಾಲು, ಕಳಸ ಪಲ್ಲಕಿ, ಕನ್ನಡ ನಾಡುನುಡಿಗೆ ಸಂಬಂಧಪಟ್ಟ ಫಲಕಗಳು ಮೆರವಣಿಗೆಗೆ ಆಕರ್ಷಣೆ ನೀಡಿತ್ತು.
ಆಕರ್ಷಕವಾಗಿ ನಿರ್ಮಿಸಲಾಗಿದ್ದ ವೇದಿಕೆಯಲ್ಲಿ ಕನ್ನಡ ನಾಡುನುಡಿಗೆ ಸೇವೆ ಸಲ್ಲಿಸಿದ ಮಹಾನ್ ಕವಿಗಳ ಪ್ರತಿಕೃತಿಗಳನ್ನು ಪ್ರದರ್ಶಿಸಲಾಗಿತ್ತು.
ವಿದ್ಯಾಗಿರಿಯಲ್ಲಿರುವ ವಿಸ್ತೃತವಾದ ಆಳ್ವಾಸ್ ವಿದ್ಯಾಸಂಸ್ಥೆಯ ಆವರಣದಲ್ಲಿ ಆಕರ್ಷಕವಾದ ರೀತಿಯಲ್ಲಿ ಸಭಾಂಗಣವನ್ನು ನಿರ್ಮಿಸಲಾಗಿತ್ತು. ಇಡೀ ಆವರಣದ ಬೇರೆ ಬೇರೆ ಕಡೆ ಸ್ಥಳೀಯ ಜನಪದ ಹಾಡುಗಾರರಿಗೆ ಮತ್ತು ಭಜನೆ ಹಾಡುವವರಿಗೂ ಅವಕಾಶ ಕಲ್ಪಿಸಲಾಗಿತ್ತು. ಪುಸ್ತಕ ಪ್ರದರ್ಶನವನ್ನೂ ಅಚ್ಚುಕಟ್ಟಾಗಿ ಆಯೋಜಿಸಲಾಗಿದೆ.
ಮೂಡಬಿದ್ರೆ: ಅಕ್ಷರ ಜ್ಞಾನವಿಲ್ಲ ದಿದ್ದರೂ ದೇಶೀ ಸಂಸ್ಕೃತಿ ಯೊಂದಿಗೆ ಮೌಖಿಕ ಸಾಹಿತ್ಯದ ಮೂಲಕ ಜನಪದರು ಕನ್ನಡ ಸಾಹಿತ್ಯ ಲೋಕಕ್ಕೆ ಅದ್ಭುತವಾದ ಕೊಡುಗೆ ನೀಡಿ ಸಮೃದ್ಧಗೊಳ್ಳಿಸಿದ್ದಾರೆ ಎಂದು ಕವಿ ಡಾ.ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ ತಿಳಿಸಿದ್ದಾರೆ.
ಅವರು ಶುಕ್ರವಾರ ವಿದ್ಯಾಗಿರಿಯಲ್ಲಿ ಕನ್ನಡ ನಾಡುನುಡಿಯ ‘ಆಳ್ವಾಸ್ ನುಡಿಸಿರಿ-೨೦೦೯’ ರಾಷ್ಟ್ರೀಯ ಸಮ್ಮೇಳ ನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಯೂರೋಪಿನಲ್ಲಿರುವ ಬೆರಳೆಣಿ ಕೆಯ ಭಾಷೆಗಳನ್ನು ಹೊರತು ಪಡಿಸಿದರೆ ಕನ್ನಡ ಭಾಷೆ ಭಾರತದಲ್ಲಿ ರುವ ಪ್ರಾಚೀನ ಭಾಷೆಯಾಗಿದೆ. ಅಶೋಕನ ಶಾಸನದಲ್ಲಿ ಕ್ರಿ.ಪೂ. ೩ನೆ ಶತಮಾನದಲ್ಲಿ ‘ಇಸಿಲ’ ಎನ್ನುವ ಕನ್ನಡದ ಪದ ಇದೆ. ಇಸಿಲ ಎಂದರೆ ಕೋಟೆ ಎಂದರ್ಥ. ಕನ್ನಡ ನಾಡು ಕೋಟೆಗಳನ್ನು ಒಳಗೊಂಡ ಪ್ರದೇಶವಾ ಗಿತ್ತು ಎನ್ನುವುದು ಈ ಶಾಸನದ ಮೂಲಕ ತಿಳಿದುಬರುತ್ತದೆ. ಭಾರತ ದಲ್ಲಿ ತಮಿಳು, ಸಂಸ್ಕೃತ ಭಾಷೆಗಳ ನಂತರದ ಪ್ರಾಚೀನ ಭಾಷೆಯೆಂಬ ಸ್ಥಾನ ಕನ್ನಡಕ್ಕಿದೆ ಎಂದು ಭಟ್ಟ ಹೇಳಿದರು.
ಈ ನಾಡಿನಲ್ಲಿ ಪುರಾತನ ಕಾಲ ದಿಂದಲೂ ಧರ್ಮ ಸಮನ್ವಯ ನೆಲೆಗೊಂಡಿತ್ತು. ಎಲ್ಲ ಧರ್ಮಗಳ ಜನರು ಇಲ್ಲಿ ಒಂದಾಗಿ ಬದುಕಿದ್ದರು ಎನ್ನುವುದಕ್ಕೆ ಹಲವು ನಿದರ್ಶನಗಳಿವೆ.
ನಮ್ಮ ನಾಡಿನ ಇತಿಹಾಸವನ್ನು ಕೆದಕಿ ನೋಡಿದಾಗಲೂ ಅದಕ್ಕೆ ಪುರಾವೆಗಳು ದೊರೆಯುತ್ತವೆ. ಜನಪದರು ತಮ್ಮ ಬದುಕಿನೊಂದಿಗೆ ಸಾಹಿತ್ಯವನ್ನು ಬೆಳೆಸಿದ್ದಾರೆ. ಅದರೊಂದಿಗೆ ಸಮನ್ವಯದ ಹಾದಿಯನ್ನು ಕಂಡುಕೊಂಡಿದ್ದರು. ಅವರು ಸಹಜವಾಗಿ ತಮ್ಮ ದೈನಂದಿನ ಚಟುವಟಿಕೆಗಳ ನಡುವೆ ಮೌಖಿಕ ಸಾಹಿತ್ಯವನ್ನು ಸೃಷ್ಟಿಸಿದ್ದಾರೆ. ಕನ್ನಡ ಸಾಹಿತ್ಯದ ದೃಷ್ಟಿಯಿಂದ ಇಂದು ಅವುಗಳು ಪ್ರಮುಖ ಸ್ಥಾನ ಪಡೆದಿವೆ.
ಕರಾವಳಿಯ ಗಂಡುಕಲೆ ಯಕ್ಷಗಾನ ಪ್ರಾಚೀನ ಇತಿಹಾಸವನ್ನು ಹೊಂದಿದೆ. ಹಾಗೆಯೇ ಕರಾವಳಿ ಯನ್ನು ವಿವಿಧ ಸಾಂಸ್ಕೃತಿಕ ಕಲೆಗಳು ಇಲ್ಲಿನ ಜನರ ಬದುಕಿನೊಂದಿಗೆ ಹಾಸುಹೊಕ್ಕಾಗಿ ಬೆಳೆದು ಬಂದಿವೆ ಎಂದು ಲಕ್ಷ್ಮಿನಾರಾಯಣ ಭಟ್ಟ ವಿಶ್ಲೇಷಿಸಿದರು.
‘ಕನ್ನಡ ಮನಸ್ಸು ಸಮನ್ವಯದೆಡೆಗೆ’ ಪರಿಕಲ್ಪನೆಯಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಸಮ್ಮೇಳನವನ್ನು ಇಂದು ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ಗಂಗೂ ಬಾಯಿ ಹಾನಗಲ್ ಸಭಾಂಗಣದ ರತ್ನಾಕರ ವೇದಿಕೆಯಲ್ಲಿ ಕವಿ ಲಕ್ಷ್ಮಿ ನಾರಾಯಣ ಭಟ್ಟರು ಭತ್ತದ ಕಳಸೆ ಮೇಲಿನ ತೆನೆಗೆ ಹಾಲನ್ನೆರೆ ಯುವ ಮೂಲಕ ಚಾಲನೆ ನೀಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಸಮ್ಮೇಳನಾಧ್ಯಕ್ಷ ಡಾ. ಹಂಪ ನಾಗರಾಜಯ್ಯ, ಮಿಜಾರುಗುತ್ತು ಆನಂದ ಆಳ್ವ, ಶಾಸಕ ಕೆ. ಅಭಯಚಂದ್ರ ಜೈನ್, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಜಯಶ್ರೀ ಅಮರನಾಥ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬರಹವೆಂದರೆ ಬದುಕು... ಬದುಕೆಂದರೆ ಬರಹ....
ಮೂಡಬಿದ್ರೆ: ಬರವೆಂದರೆ ಬದುಕು, ಬದುಕೆಂದರೆ ಬರಹ ಜೊತೆಗೆ ಬದುಕಿನ ಸತ್ಯದ ಅನ್ವೇಷಣೆ ಎಂದು ಕವಿಸಮಯ- ಕವಿನಮನದಲ್ಲಿ ಡಾ.ಕೆ. ಷರೀಫಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಬರದ ನಾಡಿನಲ್ಲಿ ಸುರಿದ ಸಾವಿನ ಮಳೆಗೆ ಬಡವರ ಬದುಕು ಅಸ್ತವ್ಯಸ್ತ ಎಂದು ರಾಜ್ಯವನ್ನು ಕಾಡಿದ ನೆರೆಯ ಬಗ್ಗೆ ಷರೀಫಾ ತಮ್ಮ ಕವಿತೆ ವಾಚಿಸಿದರು.
ಕಿತ್ತುಹೋದ ಸಂಪರ್ಕ ಸೇತುವೆಗಳು
ಸರಕಾರದ ಪರಿಹಾರ
ಕನ್ನಡಿಯೊಳಗಿನ ಗಂಟು....
ಎನ್ನುವ ಮೂಲಕ ಪರಿಹಾರ ಕಾರ್ಯಕ್ರಮಗಳಲ್ಲಿ ಜನಸಾಮಾನ್ಯ ಸಂತ್ರಸ್ತರು ಪಡುವ ಬವಣೆಯ ಬಗ್ಗೆಯೂ ಸೂಚ್ಯವಾಗಿ ವಿವರಿಸಿದರು.
ಸೌಹಾರ್ದದ ಎಳೆ ಎಲ್ಲಾಕಡೆ ಇದೆ
ಹಲವು ಸಂದರ್ಭದಲ್ಲಿ ಕೋಮುವಾದಿಗಳು ಸಮಾಜವನ್ನು ಕಲುಷಿತಗೊಳಿಸಲು ಯತ್ನಿಸಿದರೂ ಸೌಹಾರ್ದ ವಾತಾವರಣ ಸಷ್ಟಿಸುವ ಲಕ್ಷಾಂತರ ಮಂದಿಗಳು ಎಲ್ಲಾ ಕಡೆ ಇದ್ದಾರೆ. ಆ ಕಾರಣದಿಂದಾಗಿ ಸಮನ್ವಯತೆ ನಮ್ಮ ನಡುವೆ ನಾಶವಾಗಿಲ್ಲ. ‘ನಾನು ಸಮಾಜದ ತುಡಿತಕ್ಕೆ ತವಕ ತಲ್ಲಣಗಳಿಗೆ ಧ್ವನಿಯಾಗಿ ಚಲವಳಿಯ ಮೂಲಕ ಕವಿತೆ ಬರೆದಿದ್ದೇನೆ’. ಕವಿತೆ ನನ್ನ ಬದುಕು. ಇನ್ನೊಬ್ಬರನ್ನು ನೋಯಿಸಿ, ಸಾಯಿಸಿ ಖುಷಿ ಪಡುವ ವಿಕತಿ ನಮಗೆ ಬೇಕಾಗಿಲ್ಲ. ನನ್ನ ಕವಿತೆಯ ಮೂಲಕ ಸಾಮಾಜಿಕ ನ್ಯಾಯ ಕೇಳುತ್ತೇನೆ. ಬದುಕಿನ ಸತ್ಯ ಅರಸುತ್ತೇನೆ. ನಾನು ಹೆಣ್ಣಾಗಿ ಹುಟ್ಟಿರುವುದು ನನ್ನ ಬೆಳವಣಿಗೆಗೆ ತೊಡಕಾಗಬಾರದು. ಆ ಕಾರಣದಿಂದ ನಾನು ಮಹಿಳಾ ಪರವಾಗಿ ಕವಿತೆ ಬರೆದಿದ್ದೇನೆ ಎಂದು ಷರೀಫಾ ಕವಿತಾ ಸಮಯದಲ್ಲಿ ವಿವರಿಸಿದರು.
ಕಥೆ ಹೇಳುತ್ತಾ ಭಾವುಕರಾದರಾಕೆ....
ಮೂಡಬಿದ್ರೆ (ರತ್ನಾಕರ ವರ್ಣಿ ವೇದಿಕೆಯಿಂದ), ನ.೬: ಆಳ್ವಾಸ್ ನುಡಿಸಿರಿಋ-೨೦೦೯ರ ಪ್ರಥಮ ಕಥಾ ಸಮಯದಲ್ಲಿ ತಮ್ಮ ‘ಸುಭದ್ರಕ್ಕ’ ಕತೆಯನ್ನು ಹೇಳುತ್ತಾ ಸ್ವತ: ತಾವೇ ಭಾವುಕರಾಗುತ್ತಾ.. ನೀರವ ಮೌನದಲ್ಲಿ ಕತೆ ಆಲಿಸುವುದರಲ್ಲಿ ತಲ್ಲೀನರಾಗಿದ್ದ ಸಭಿಕರ ಕಣ್ಣುಗಳನ್ನೂ ಮೆತ್ತಗೆ ತೇವಗೊಳಿಸಿದರು ಕತೆಗಾರ್ತಿ ಸುನಂದ ಪ್ರಕಾಶ್ ಕಡಮೆ.
ಹೊರಗಣ ಬಿಸಿಲಿನ ಬೇಗೆಯ ಉರಿಯು ತಣಿಯುತ್ತಿರುವಂತೆಯೇ ಇತ್ತ ವೇದಿಕೆಯಲ್ಲಿ ಆರಂಭಗೊಂಡ ಕಥಾಸಮಯದಲ್ಲಿ ತಮ್ಮ ಸಾಹಿತ್ಯ ಕಷಿಯ ಪ್ರೇರಣೆ ಬಗ್ಗೆ ವಿಶ್ಲೇಷಣೆ ಆರಂಭಿಸಿದ ಸುನಂದ ಪ್ರಕಾಶ್, ಕೌಟುಂಬಿಕವಾಗಿ ಇಂದು ಪತಿ-ಪತ್ನಿಯ ನಡುವಿನ ಅವ್ಯಕ್ಕ ಕೊಂಡಿ, ಅತ್ತೆ ಸೊಸೆಯರ ನಡುವಿನ ವಿರಸ, ಅಜ್ಜ, ಅಜ್ಜಿ- ಮೊಮ್ಮಕ್ಕಳ ನಡುವಿನ ಸಂಬಂಧಗಳ ನಡುವಿನ ಅಂತರ ಹೆಚುತ್ತಿರುವುದನ್ನು ಪ್ರಸ್ತಾಪಿಸಿದರು.
ಕಥೆಗಳಲ್ಲಿ ವ್ಯಕ್ತವಾಗುವ ವಿಷಯಗಳು ಮಾನಯ ಬದುಕು, ವಾಸ್ತವಕ್ಕೆ ಹತ್ತಿರವಾದವುಗಳು ಎಂದ ಹೇಳಿದ ಸುನಂದಾ, ತನ್ನ ಬದುಕಿನ ಪ್ರತಿಯೊಂದು ಹಂದರಗಳು ತಮ್ಮ ಬರವಣಿಗೆ ಸ್ಫೂರ್ತಿಯಾಗಿವೆ ಎಂದರು.
ಸುಭದ್ರಕ್ಕ ಎಂಬ ತನ್ನ ಕಥೆಯ ಮೂಲಕ ಇಂದು ಪಟ್ಟಣದ ವ್ಯಾಮೋಹದಲ್ಲಿ, ಸಂಬಂಧಗಳ ನಡುವೆ ಹೆಚ್ಚುತ್ತಿರುವ ಅಂತರವನ್ನು ಅತ್ಯಂತ ಭಾವನಾತ್ಮಕವಾಗಿ ಅವರು ವಿಶ್ಲೇಷಿಸಿದರು.
ತನ್ನ ೭೫ನೆ ವಯಸ್ಸಿನಲ್ಲಿ ಸುಭದ್ರಕ್ಕ ತನ್ನ ಮಗ ವೆಂಕಟೇಶನ, ಸೊಸೆ ಮೆ’ತ್ರಿ ಹಾಗೂ ಮೊಮ್ಮಗಳು ನವಮಿ ಜೊತೆ ಬಾಳುವೆ ನಡೆಸುವ ಹುಮ್ಮಸ್ಸಿನೊಂದಿಗೆ ಪಟ್ಟಣ ಸೇರುತ್ತಾಳಾದರೂ ಅಲ್ಲಿ ತಾನೊಂದು ದಿನ ಮೆ’ ಹುಷಾರಿಲ್ಲದೆ ಹೊಲಸು ಮಾಡುವ ಪ್ರಸಂಗ. ಆ ಸಂದರ್ಭ ತಾನು ಪಡುವ ಮನೋವೇದನೆಯ ಜೊತೆಗೆ ಆಕೆಗೆ ತನ್ನ ಇತರ ಗೆಳತಿಯರು, ಓರಗೆಯವರು ತಾನು ಹಳ್ಳಿಯಲ್ಲಿದ್ದಾಗ ಅತ್ತೆ- ಸೊಸೊಯರ ನಡುವಿನ ವೆ’ಷಮ್ಯದ ಘಟನೆಗಳನ್ನು ನೆನಪಿಸುತ್ತಾ ಮಾನಸಿಕವಾಗಿ ಸುಭದ್ರಕ್ಕ ಕುಬ್ಜಳಾಗುತ್ತಾಳಾದರೂ, ಆಕೆಯ ಸೊಸೆ ಆಕೆಯನ್ನು ಅಂಥ ಪರಿಸ್ಥಿತಿಯಲ್ಲೂ ತಾಯಿಯ ಪ್ರೀತಿ ತೋರಿ ಆದರಿಸುವ ಮೂಲಕ ಅತ್ತೆ ಸೊಸೆಯರ ನವಿರಾದ ಸಂಬಂಧವನ್ನು ಎತ್ತಿ ಹಿಡಿಯುವ ಕಥೆಯನ್ನು ಹೇಳುತ್ತಾ ಕತೆಗಾರ್ತಿಯೇ ಭಾವುಕರಾದರು. ಇತ್ತ ಸಭಿಕರೂ ಸದ್ದಿಲ್ಲತೆ ತೇವವಾದ ಕಣ್ಣುಗಳನ್ನು ಒರೆಸಿಕೊಳ್ಳುತ್ತಿದ್ದ ದಶ್ಯ ಕಂಡುಬಂತು.
ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷ ಡಾ. ಹಂಪಾ ನಾಗರಾಜಯ್ಯ, ಸಮ್ಮೇಳನದ ಸ್ವಾಗತ ಸಮಿತಿಯ ಉಪಾಧ್ಯಕ್ಷ ಡಾ.ನಾ. ದಾಮೋದರ ಶೆಟ್ಟಿ ಉಪಸ್ಥಿತರಿದ್ದರು. ವಸುಂಧರಾ ಕಾರ್ಯಕ್ರಮ ನಿರ್ವಹಿಸಿದರು.
ಆಳ್ವಾಸ್ ನುಡಿಸಿರಿಯಲ್ಲಿ ಇಂದು....
ಮೂಡಬಿದ್ರೆ: ಆಳ್ವಾಸ್ ನುಡಿಸಿರಿ ೨೦೦೯ರ ಎರಡನೆ ದಿನವಾದ ನ. ೭ರಂದು ಬೆಳಗ್ಗೆ ೫ ಗಂಟೆಗೆ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ನಡೆಯಲಿದೆ.
ಬೆಳಗ್ಗೆ ೮-೩೦ರಿಂದ ಸರ್ವೇಶ್ ಜೆ’ನ್ ಮತ್ತು ಬಳಗದಿಂದ ಭಾವಲಹರಿ, ೯-೩೦ಕ್ಕೆ ಸತ್ಯಾನಂದ ಪಾತ್ರೋಟ ಅವರಿಂದ ಕವಿಸಮಯ- ಕವಿನಮನ ಕಾರ್ಯಕ್ರಮ.
೯-೫೦ರಿಂದ ಸಂಸ್ಕೃತಿ- ಸಮನ್ವಯದೆಡೆಗೆ ವಿಷಯದಲ್ಲಿ ಡಾ. ಮಲ್ಲೇಪುರಂ ಜಿ. ವೆಂಕಟೇಶ್, ಡಾ.ಹಿ.ಶಿ. ರಾಮಚಂದ್ರೇಗೌಡ ಅವರಿಂದ ವಿಚಾರಗೋಷ್ಠಿ.
೧೧-೩೦ರಿಂದ ಕಥಾಸಮಯ, ೧೨ ಗಂಟೆಗೆ ಕೆರೆಮನೆ ಶಂಭುಹೆಗಡೆ ನೆನಪು, ೧೨-೩೦ಕ್ಕೆ ಕವಿಸಮಯ- ಕವಿನಮನ.
೨ ಗಂಟೆಗೆ ಕವಿಸಮಯ- ಕವಿನಮನ. ೨-೨೦ಕ್ಕೆ ಡಾ. ಶ್ರೀರಾಮ ಭಟ್ಟ ಮತ್ತು ಡಾ.ಎಚ್.ಎನ್. ಮುರಳೀಧರ ಅವರಿಂದ ಧರ್ಮ- ಸಮನ್ವಯದೆಡೆಗೆ ವಿಚಾರಗೋಷ್ಠಿ ನಡೆಯಲಿದೆ. ೪ ಗಂಟೆಗೆ ಕಥಾ ಸಮಯ, ೪-೨೫ಕ್ಕೆ ಎಂ. ವ್ಯಾಸ ನೆನಪು, ೪-೫೫ಕ್ಕೆ ಕವಿಸಮಯ- ಕವಿನಮನ. ೫-೧೫ರಿಂದ ಮೆ’ಸೂರು ಆನಂದ್ ಮತ್ತು ರಿಚರ್ಡ್ ಲೂಯಿಸ್ರಿಂದ ಮಾತಿನ ಮಂಟಪ.
ಸಂಜೆ ೬-೧೫ರಿಂದ ರತ್ನಾಕರವರ್ಣಿ ವೇದಿಕೆ, ಕು.ಶಿ. ಹರಿದಾಸ ಭಟ್ಟ ವೇದಿಕೆ, ಆಯುರ್ವೇದ ಮಹಾವಿದ್ಯಾಲಯ ಯಕ್ಷಮಂಟಪ ಹಾಗೂ ಕೆ.ವಿ. ಸುಬ್ಬಣ್ಣ ಬಯಲು ರಂಗ ಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಸಾಂಸ್ಕೃತಿಕ ಪತನದಿಂದ ರೈತರ ಆತ್ಮಹತ್ಯೆ: ಮುಕುಂದ ರಾಜ್
ಮೂಡಬಿದ್ರೆ: ಸಾಂಸ್ಕೃತಿಕ ಪತನದಿಂದ ರೈತರ ಆತ್ಮಹತ್ಯೆ ಹೆಚ್ಚಾಗುತ್ತಿದೆ ಎಂದು ಕವಿ ಎಲ್.ಎನ್. ಮುಕುಂದರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.
ಆಳ್ವಾಸ್ ನುಡಿಸಿರಿಯ ಕವಿ ಸಮಯ ಕವಿನಮನ ಕಾರ್ಯಕ್ರಮದಲ್ಲಿ ಎಲ್.ಎನ್. ಮುಕುಂದ ರಾಜ್ ರೈತರ ಆತ್ಮಹತ್ಯೆಯ ಬಗ್ಗೆ ವಿಶ್ಲೇಷಣೆ ನಡೆಸಿದರು.
ರಾಜ್ಯದಲ್ಲಿ ಲಕ್ಷಾಂತರ ರೈತರು ಆತ್ಮಹತ್ಯೆ ಮಾಡುತ್ತಿದ್ದಾರೆ. ಆದರೆ ಅವರು ಸಾಲ ಮಾಡಿರುವ ಕಾರಣ ಅಂದರೆ ಆರ್ಥಿಕ ಕಾರಣದಿಂದ ಆತ್ಮಹತ್ಯೆ ಮಾಡುತ್ತಿದಾದರೆ ಎಂದು ಸರಳವಾಗಿ ಹೇಳಿಬಿಡಲಾಗುತ್ತಿದೆ. ಈ ನಾಡಿನಲ್ಲಿ ಸಾವಿರಾರು ವರ್ಷಗಳಿಂದಲೂ ರೈತರು ಸಾಲ ಮಾಡಿ ಬದುಕಿದ್ದಾರೆ. ಆದರೆ ಅವರು ಸಾಯಲು ಮುಂದಾಗಲಿಲ್ಲ. ಇದಕ್ಕೆ ಕಾರಣ ವರೊಂದಿಗಿದ್ದ ಸಾಂಸ್ಕೃತಿಕ ಹಾಗೂ ಸಜನಾತ್ಮಕವಾದ ಸಾಹಿತ್ಯದ ಬದುಕು. ಆದರೆ ಪ್ರಸಕ್ತ ನಾವು ಆ ಕಾಲಘಟ್ಟವನ್ನು ಮೀರಿ ಸಾಂಸ್ಕೃತಿಕ ಅಧ:ಪತನದತ್ತ ಸಾಗಿದ್ದೇವೆ. ಇದರಿಂದ ನಮ್ಮೊಳಗಿನ ಆತ್ಮಶಕ್ತಿ ಕುಸಿಯುತ್ತಿದೆ. ಇದರ ಪರಿಣಾಮವಾಗಿ ಸಾವಿನ ಮುಖಾಮುಖಿಯಾಗಲು ಪಲಾಯನಗೈಯ್ಯುತ್ತಿರುವ ರೈತರು ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ ಎಂದು ಮುಕುಂದರಾಜ್ ವಿವರಿಸಿದರು.
ಬಂಡಾಯದ ಕಹಳೆ ಊದಿದ ಮುಕುಂದರಾಜ್
ಕವಿತೆ ನನಗೆ ಬದುಕಿನಲ್ಲಿ ಸ್ಪೂರ್ತಿ ನೀಡಿದೆ. ಆತ್ಮಶಕ್ತಿಯನ್ನು ನೀಡಿದೆ ಎಂದ ಮುಕುಂದ ರಾಜ್ ಎರಡು ಕವನ ವಾಚಿಸಿ ಬಂಡಾಯದ ಕಹಳೆ ಊದಿದರು. ೧೨ನೆ ಶತಮಾನದಲ್ಲಿ ಕಲ್ಯಾಣದಲ್ಲಿ ಕ್ರಾಂತಿ ಕಹಳೆ ಮೊಳಗಿಸಿದ ಅಣ್ಣ ಬಸವಣ್ಣನ ದಾರಿಯಲ್ಲಿ ಸಾಗಿದ ಮಠ ಮಂದಿರಗಳಲ್ಲಿ ಸ್ಥಾಪಿತ ಹಿತಾಸಕ್ತಿಗಳು ನಡೆಸುತ್ತಿರುವ ಮೇಲಾಟದ ಬಗ್ಗೆ, ಕೇಸರೀಕರಣದ ಪ್ರಭಾವದ ಬಗ್ಗೆ ದಲಿತರ, ಶೂದ್ರರ ಮೇಲೆ ಮೇಲ್ವರ್ಗದವರು ಮತ್ತೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿರುವ ಬಗ್ಗೆ ಮುಕುಂದರಾಜ್ ವಿವರಿಸಿದರು. ಈ ಬಗ್ಗೆ ಬಸವಣ್ಣನವರ ದಾರಿ ತುಳಿದ ಮಠ ಮಂದಿರಗಳ ಗುರುಗಳು ಗಮನ ಹರಿಸಬೇಕೆಂದು ಮುಕುಂದರಾಜ್ ಸೂಚ್ಯವಾಗಿ ತಿಳಿಸಿದರು.
ಅನ್ಯಭಾಷೆ ಸಂಸ್ಕೃತಿಯನ್ನು ಗೌರವಿಸುವುದರಿಂದ ಸಮನ್ವಯತೆ ಸಾಧ್ಯ: ಡಾ.ಸಿ.ಎನ್. ರಾಮಚಂದ್ರನ್
ಮೂಡಬಿದ್ರೆ: ಅನ್ಯರ ಭಾಷೆ, ಸಂಸ್ಕೃತಿಯನ್ನು ಅರಿತುಕೊಳ್ಳುವುದು ಅದನನು ಗೌರವಿಸುವುದರ ಮೂಲಕ ಸ್ವಲ್ಪ ಮಟ್ಟಿಗಾದರೂ ಸಮನ್ವಯತೆ ಸಾದಿಸಲು ಸಾಧ್ಯ. ಭಾಷೆ ಎಸಾಹಿತ್ಯ ಮೂಲಕ ಸಮನ್ವಯತೆ ಅಷ್ಟೊಂದು ಸುಲಭವಾಗಿ ಮೂಡಿಬಂದಿಲ್ಲ ಎಂದು ಡಾ.ಸಿ.ಎನ್. ರಾಮಚಂದ್ರನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರ ಇಂದು ಆಳ್ವಾಸ್ ನುಡಿಸಿರಿ ಸಮ್ಮೇಳನದ ಭಾಷೆ ಮತ್ತು ಸಾಹಿತ್ಯ ಸಮನ್ವಯದೆಡೆಗೆ ವಿಚಾರ ಗೋಷ್ಠಿಯಲ್ಲಿ ‘ಸಾಹಿತ್ಯ’ ವಿಷಯದಲ್ಲಿ ತಮ್ಮ ವಿಚಾರ ಮಂಡಿಸಿದರು.
ಕನ್ನಡ ಕವಿಗಳ ಸಾಹಿತ್ಯವನ್ನು ಗಮನಿಸಿದಾಗಲೂ ಸಮನ್ವಯತೆ ಸುಲಭವಾಗಿ ಮೂಡಿಬಂದಿಲ್ಲ ಎನ್ನುವುದು ತಿಳಿದು ಬರುತ್ತದೆ. ಜೆ’ನ, ಶೆ’ವ, ಪಂಥದ ಕವಿಗಳು ಇನ್ನೊಂದು ಧರ್ಮ ತಾವು ಪ್ರತಿಪಾದಿಸದೇ ಇರುವ ವಿಚಾರಗಳನ್ನು ಖಂಡಿಸಲು ಕತಿಗಲನ್ನು ಬಳಸಿಕೊಂಡಿದ್ದಾರೆ. ಭಿನ್ನತೆ ಸಹಜ ಅದರೊಂದಿಗೆ ಇತರರೊಡನೆ ಸಮನ್ವಯತೆ ಹೇಗೆ ಸಾಧಿಸುವುದು ಎನ್ನುವುದೇ ಜಟಿಲ ಪ್ರಶ್ನೆಯಾಗಿದೆ. ಇಂದು ಎಲ್ಲವನ್ನು ಸಾಹಿತಿಗಳಿಂದ ನಿರೀಕ್ಷಿಸುವ ಪ್ರವತ್ತಿ ಬೆಳೆಯುತ್ತಿದೆ. ಇದು ಒಳ್ಳೆಯ ಲಕ್ಷಣವಲ್ಲ. ಸಾಹಿತಿಗಳಿಗೆ ಗೌರವ ನೀಡಬೇಕು. ಆದರೆ ಎಲ್ಲವನ್ನು ಸಾಹಿತಿಗಳಿಂದ ನಿರೀಕ್ಷಿಸುವುದು ಸಮಂಜವಲ್ಲ ಎಂದು ಸಿ.ಎನ್. ರಾಮಚಂದ್ರನ್ ತಿಳಿಸಿದರು.
ಭಾಷಿಕ ಅಹಂ ತೊರೆಯದೆ ಭಾ,ಇಕ ಸಮನ್ವಯ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಸಿ.ಎನ್. ರಾಮಚಂದ್ರನ್ ಈ ಸಮಸ್ಯೆ ಕನ್ನಡ, ಇಂಗ್ಲಿಷ್, ಜರ್ಮನ್ ಸಾಹಿತ್ಯಕ್ಕೂ ಹೊರತಾಗಿಲ್ಲ. ಧರ್ಮ, ಸಂಸ್ಕೃತಿ ಮೊದಲಾದ ವಿಚಾರಗಳಿಂದ ಹೊರಬರಲಾಗದ ಸಾಹಿತ್ಯ ಹೆಚ್ಚಿರುವ ಕಾರಣ ಸಮನ್ವಯ ಒಂದು ಸವಾಲಾಗಿದೆ. ತಾನು ಎತ್ತಿ ಹಿಡಿಯುವ, ಸಮರ್ಥಿಸುವ ತತ್ವಕ್ಕಿಂತ ವಿರುದ್ದವಾದ ವಿಚಾರಧಾರೆಗಳನ್ನು ಸಂಯಮದಿಂದ ಕಾಣುವ, ಅದನ್ನು ಒಳಗೊಳ್ಳುವ ಕತಿಗಳಲ್ಲಿ ಸಮನ್ವಯತೆ ಕಾಣಬಹುದು. ಅವುಗಳು ಕತಿಯ ಶ್ರೇಷ್ಠತೆಯನ್ನು ಸಾರುತ್ತವೆ. ಉದಾಹರಣೆಗೆ ರನ್ನನ ಗಧಾಯುದ್ಧದಲ್ಲಿ ದುರ್ಯೋಧನನ ಪುತ್ರಶೋಕ, ಜನ್ನನ ಯಶೋದರ ಚರಿತ್ರೆಯಲ್ಲಿ ಅಮತಮತಿಯ ಜೊತೆ ವಿಧಿವಾದದ ಮಂಡನೆ, ಪಂಪನ ಆದಿಪುರಾಣ ವಿರುದ್ಧ ಧ್ವನಿಗಳನ್ನು ಒಳಗೊಂಡ ಕತಿಗಳಾಗಿರುವ ಕಾರಣ ಸಮನ್ವಯತೆಯನ್ನು ಸಾಧಿಸಿದ್ದಾರೆ. ಸಾಹಿತ್ಯದಲ್ಲಿ ಸಮನ್ವಯತೆ ಸಾಧಿಸಬೇಕಾದರೆ ಕುವೆಂಪು ಹೇಳಿದಂತೆ ಅನಿಕೇತನದೆಡೆಗೆ ಸಾಗಬೇಕಾಗಿದೆ ಎಂದು ಡಾ.ಸಿ.ಎನ್. ರಾಮಚಂದ್ರನ್ ತಿಳಿಸಿದರು.
ಆಡು ಭಾಷೆಗಳ ಜೊತೆ ಸಮನ್ವಯತೆ ಬೇಕು
ಆಡು ಭಾಷೆಗಳ ಜೊತೆ ಸಮನ್ವಯತೆಯನ್ನು ಭಾಷಾ ಸಾಹಿತ್ಯ ಕತಿಗಳು ಸಾಧಿಸಬೇಕು. ಸಮನ್ವಯ ಎಂದರೆ ಎಲ್ಲಾ ವಿಚಾರದಲ್ಲೂ ಪರಸ್ಪರ ಸಮಾನತೆ ಎಂದು ತಿಳಿದುಕೊಳ್ಳಬಾರದು ಎಂದು ಡಾ. ಬಿ.ಎನ್. ಸುಮಿತ್ರಬಾಯಿ ತಿಳಿಸಿದರು.
ಅವರು ಭಾಷಾ ಸಮನ್ವಯದ ಬಗ್ಗೆ ವಿಚಾರ ಮಂಡಿಸಿದರು. ಕನ್ನಡದ ಸೂಫಿ ಸಂತರು ತಮ್ಮ ಲಾವಣಿಗಲಲ್ಲಿ ಇತರ ಧರ್ಮದ ದೇವರು, ಧಾರ್ಮಿಕ ವಿಚಾರಗಳ ಬಗೆಗ ಪ್ರಸ್ತಾಪಿಸಿದ್ದಾರೆ. ಇದಕ್ಕೆ ಕಾರಣ ಆ ಕಾಲದ ಸಮನ್ವಯತೆ ಎಂದು ಬಿ.ಎನ್. ಸುಮಿತ್ರಾ ಬಾಯಿ ತಿಳಿಸಿದರು.