ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಪಡುಬಿದ್ರಿ:ಕನ್ನಂಗಾರ್‌ನಲ್ಲಿ ಸಮಸ್ತದ ಶರೀಯತ್ ಕಾಲೇಜು

ಪಡುಬಿದ್ರಿ:ಕನ್ನಂಗಾರ್‌ನಲ್ಲಿ ಸಮಸ್ತದ ಶರೀಯತ್ ಕಾಲೇಜು

Thu, 24 Dec 2009 03:25:00  Office Staff   S.O. News Service
ಪಡುಬಿದ್ರಿ, ಡಿಸೆಂಬರ್ 23: ಕನ್ನಂಗಾರ್ ಪ್ರದೇಶವು ಸಮಸ್ತದ ಪ್ರಭಲ ಕೇಂದ್ರವಾಗಿದ್ದು, ಈ ಭಾಗದಲ್ಲಿ ಸಮಸ್ತದ ಅಧೀನದಲ್ಲಿ ಅರೆಬಿಕ್ ಶರೀಯತ್ ಕಾಲೇಜು ಸ್ಥಾಪಿಸುವ ಗುರಿಹೊಂದಿದೆ ಎಂದು ಬೊಳ್ಳೂರು ಮುದರ್ರಿಸ್ ಅಲ್‌ಹಾಜ್ ಮೊಹಮ್ಮದ್ ಅಝ್‌ಹರ್ ಫೈಝಿ ಹೇಳಿದರು.
 
ಅವರು ಭಾನುವಾರ ಬೆಳಿಗ್ಗೆ ಕನ್ನಂಗಾರ್ ಬೈಪಾಸ್ ಬಳಿಯ ಶಂಸುಲ್ ಉಲಮಾ ನಗರದಲ್ಲಿ ನಡೆಯಲಿರುವ ಸಮಸ್ತ ಮಹಾ ಸಮ್ಮೇಳನದ ಕಚೇರಿ ಉದ್ಘಾಟಿಸಿ ಮಾತನಾಡುತ್ತಿದ್ದರು.
 
ಯುವ ಸಮುದಾಯವು ರಾಷ್ಟ್ರದ ಮುಖ್ಯವಾಹಿನಿಯಲ್ಲಿ ಸೇರಿ ಸಾಮಾಜಿಕ ಕಳಕಳಿಯನ್ನು ಹೋಗಲಾಡಿಸಬೇಕು. ಕನ್ನಂಗಾರ್‌ನಲ್ಲಿ ಸ್ಥಾಪನೆಗೊಳ್ಳುವ ವಿದ್ಯಾಕೇಂದ್ರಕ್ಕೆ ಯುವಕರು ಕಾರ್ಯಪ್ರವೃತ್ತರಾಗಬೇಕು. ಜ.೨ರಂದು ನಡೆಯುವ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಕರೆ ನೀಡಿದರು.
ಸ್ವಾಗತ ಸಮಿತಿ ಅಧ್ಯಕ್ಷ ಕೆ.ಅಬ್ದುರ್ರಹ್ಮಾನ್, ಕಾರ್ಯದರ್ಶಿ ಎಂ.ಪಿ.ಮೊದಿನಬ್ಬ, ಮನ್ಸೂರ್ ಹೆಜಮಾಡಿ, ಯು.ಕೆ.ಅಬ್ದುಲ್ ಹಮೀದ್, ಎಚ್.ಹುಸೈನ್ ಮಾಸ್ತಿಕಟ್ಟೆ, ಬಶೀರ್, ಕೆ.ಮೊಹಮ್ಮದ್ ಹಾಜಿ, ಸಿದ್ಧೀಕ್ ಕನ್ನಂಗಾರ್, ಸಾಧಿಕ್, ದಾವೂದ್ ಮತ್ತಿತರರು ಹಾಜರಿದ್ದರು.

ವರದಿ: ಹಮೀದ್, ಪಡುಬಿದ್ರಿ.


Share: