ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ವಿದ್ಯಾಭಾರತಿ ವಿದ್ಯಾರ್ಥಿಗಳ ಸಾಧನೆ

ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ವಿದ್ಯಾಭಾರತಿ ವಿದ್ಯಾರ್ಥಿಗಳ ಸಾಧನೆ

Fri, 20 May 2022 04:39:31  Office Staff   SO NEWS

ಭಟ್ಕಳ: 2021-22 ನೇ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ವಿದ್ಯಾಭಾರತಿ ಶಾಲೆಯ 41 ವಿದ್ಯಾರ್ಥಿಗಳು ಹಾಜರಾಗಿದ್ದು, ನೂರಕ್ಕೆ ನೂರು ಫಲಿತಾಂಶ ಹೊಂದುವಲ್ಲಿ ಯಶಸ್ವಿಯಾಗಿದೆ.
26 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ, 13 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 2 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ನಯನಾ ಶ್ರೀಧರ ಪೈ 621 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ, ರಶ್ಮಿ ರಾಜಾರಾಮ್ ಪ್ರಭು 619 ಅಂಕ ಪಡೆದು ದ್ವಿತೀಯ ಸ್ಥಾನ, ಕಾರ್ತಿಕ್ ಕಿರಣ ಶಾನಭಾಗ್ 614 ಅಂಕ ಪಡೆದು ಶಾಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ. ನಯನಾ ಶ್ರೀಧರ ಪೈ ರಾಜ್ಯಕ್ಕೆ 4 ನೇ ರ‍್ಯಾಂಕ್, ಮತ್ತು ರಶ್ಮಿ ರಾಜಾರಾಮ್ ಪ್ರಭು ರಾಜ್ಯಕ್ಕೆ 6 ನೇ ರ‍್ಯಾಂಕ್ ಪಡೆದಿರುತ್ತಾರೆ


Share: