ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಎನ್‌ಡಬ್ಲುಕೆಎಸ್ಆರ್ಟಿಸಿಯಲ್ಲಿ ಮೊದಲ ದಿನ 1 ಲಕ್ಷ 22ಸಾವಿರ ಮಹಿಳೆಯರಿಂದ ಉಚಿತ ಪ್ರಯಾಣ: ಭರತ್ ಎಸ್.

ಎನ್‌ಡಬ್ಲುಕೆಎಸ್ಆರ್ಟಿಸಿಯಲ್ಲಿ ಮೊದಲ ದಿನ 1 ಲಕ್ಷ 22ಸಾವಿರ ಮಹಿಳೆಯರಿಂದ ಉಚಿತ ಪ್ರಯಾಣ: ಭರತ್ ಎಸ್.

Tue, 13 Jun 2023 13:43:56  Office Staff   SO News

ಹುಬ್ಬಳ್ಳಿ: ರಾಜ್ಯಾದ್ಯಂತ ಆರಂಭವಾಗಿರುವ ಸರ್ಕಾರಿ ಬಸ್ಸಿನಲ್ಲಿ ಮಹಿಳೆಯರ ಉಚಿತ ಪ್ರಯಾಣದ "ಶಕ್ತಿ ಯೋಜನೆ"ಯ ಮೊದಲ ದಿನ  ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ  ವ್ಯಾಪ್ತಿಯ ಬಸ್ಸುಗಳಲ್ಲಿ 1.22 ಲಕ್ಷ ಮಹಿಳೆಯರು ಪ್ರಯಾಣ ಮಾಡಿದ್ದಾರೆ ಎಂದು ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ತಿಳಿಸಿದ್ದಾರೆ.

ಸ್ತ್ರೀ ಸಬಲೀಕರಣದ ನಿಟ್ಟಿನಲ್ಲಿ ರವಿವಾರ ಜೂನ್ 11ರಂದು  ಆರಂಭಿಸಲಾಗಿರುವ  ಸರ್ಕಾರಿ ಬಸ್ಸಿನಲ್ಲಿ ಮಹಿಳೆಯರಿಗೆ ಉಚಿತ  ಪ್ರಯಾಣದ ಶಕ್ತಿ ಯೋಜನೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿರುತ್ತದೆ.  ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಸಂಸ್ಥೆಯ ವ್ಯಾಪ್ತಿಯ ಧಾರವಾಡ ಬೆಳಗಾವಿ ಬಾಗಲಕೋಟೆ ಗದಗ ಹಾವೇರಿ ಮತ್ತು ಉತ್ತರಕನ್ನಡ ಆರು ಜಿಲ್ಲೆಗಳಲ್ಲಿ ಜೂನ್ 11ರಂದು ಮಧ್ಯಾಹ್ನ 1:00 ಯಿಂದ ರಾತ್ರಿ 12 ಗಂಟೆವರೆಗೆ  ಒಟ್ಟು 1,22,354 ಮಹಿಳೆಯರು ಪ್ರಯಾಣಮಾಡಿದ್ದಾರೆ. ಪ್ರಯಾಣ ಮಾಡಿದ ಬಸ್ ಟಿಕೆಟ್ ದರದ ಮೊತ್ತ ರೂ. 36,17,096 ಗಳಾಗಿದೆ.

ಜಿಲ್ಲಾವಾರು ಮಾಹಿತಿ : 
ಧಾರವಾಡ ನಗರ ಸಾರಿಗೆ 12354,
ಧಾರವಾಡ ಗ್ರಾಮಾಂತರ 11,780,
ಬೆಳಗಾವಿ ಜಿಲ್ಲೆಯಲ್ಲಿ 34,797,
ಬಾಗಲಕೋಟೆ 11,687, 
ಗದಗ ಜಿಲ್ಲೆಯಲ್ಲಿ 13,630,
ಹಾವೇರಿ 16,656 ಮತ್ತು 
ಉತ್ತರ ಕನ್ನಡ ಜಿಲ್ಲೆಯಲ್ಲಿ 8,497 ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ.

ಸೋಮವಾರದಿಂದ ಮಹಿಳಾ ಪ್ರಯಾಣಿಕರ ಸಂಖ್ಯೆ ಬಹಳಷ್ಟು ಹೆಚ್ಚಳವಾಗಿದೆ. ಬಸ್‌ಗಳ ಸುಗಮ ಕಾರ್ಯಾಚರಣೆ ಮೇಲ್ವಿಚಾರಣೆಗಾಗಿ ಪ್ರಮುಖ ಬಸ್ ನಿಲ್ದಾಣಗಳಿಗೆ ಅದಿಕಾರಿಗಳನ್ನು ನಿಯೋಜಿಸಲಾಗಿದೆ  ಎಂದು ಅವರು ತಿಳಿಸಿದ್ದಾರೆ.

ಉಚಿತ ಪ್ರಯಾಣ ಇನ್ನೂ ಸುಲಭ: 
ಮಹಿಳೆಯರ ಉಚಿತ ಪ್ರಯಾಣವನ್ನು ಮತ್ತಷ್ಟು ಸುಲಭವಾಗಿಸುವ ದೃಷ್ಟಿಯಿಂದ ರಾಜ್ಯದ ವಿಳಾಸವಿರುವ ಭಾವಚಿತ್ರ ಸಹಿತ ಅಧಿಕೃತ ದಾಖಲೆಗಳ ಮೂಲ ಪ್ರತಿ, ನಕಲು, ಡಿಜಿಲಾಕರ್ ( ಹಾರ್ಡ್ ಮತ್ತು ಸಾಫ್ಟ್ ಪ್ರತಿ) ಮಾದರಿಯ ಗುರುತಿನ ದಾಖಲೆಗಳನ್ನು ಸಹ ಮಾನ್ಯ ಮಾಡಲು ನಿರ್ಧರಿಸಲಾಗಿದೆ. ಮಹಿಳೆಯರಿಗೆ  ಪ್ರಯಾಣ ಉಚಿತ ಆದರೆ ಟಿಕೆಟ್ ಪಡೆಯುವುದು ಕಡ್ಡಾಯ ಎಂದು ಅವರು ಮಾಹಿತಿ ನೀಡಿದ್ದಾರೆ.


Share: