ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಎಂಟು ಗ್ರಾಮ ಪಂಚಾಯತ್ ಸದಸ್ಯ ಸ್ಥಾನಕ್ಕೆ ಉಪಚುನಾವಣೆ ಪ್ರಕಟ

ಎಂಟು ಗ್ರಾಮ ಪಂಚಾಯತ್ ಸದಸ್ಯ ಸ್ಥಾನಕ್ಕೆ ಉಪಚುನಾವಣೆ ಪ್ರಕಟ

Thu, 05 May 2022 03:38:26  Office Staff   SO News

ಕಾರವಾರ: ಜಿಲ್ಲೆಯಲ್ಲಿ ಆಯ್ಕೆಯಾಗದೇ ಇರುವ ಎಂಟು ಗ್ರಾಮ ಪಂಚಾಯತ ಸದಸ್ಯ ಸ್ಥಾನಗಳಿಗೆ ಚುನಾವಣೆ ಮೇ 20ರಂದು ನಡೆಸಲು ಜಿಲ್ಲಾಧಿಕಾರಿ ಮುಲೈ ಮುಗಿಲನ್ ಘೋಷಣೆ ಮಾಡಿದ್ದಾರೆ.

ಜಿಲ್ಲೆಯ ಹೊನ್ನಾವರ, ಶಿರಸಿ, ಸಿದ್ದಾಪುರ, ಮುಂಡಗೋಡ, ಹಳಿಯಾಳ, ಜೋಯಿಡಾ ಮತ್ತು ದಾಂಡೇಲಿ ತಾಲೂಕಿನ ಎಂಟು ಗ್ರಾಮ ಪಂಚಾಯತ್ ಸದಸ್ಯ ಸ್ಥಾನಕ್ಕೆ ಆಯ್ಕೆಯಾಗಿರಲಿಲ್ಲ. ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಆಯ್ಕೆಯಾಗದೇ ಇರುವ ಸ್ಥಾನಗಳಿಗೆ ಮೇ 20ರಂದು ನಡೆಯಲಿದೆ.

ಮೇ 5 ರಿಂದ 10ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದ್ದು, ಮೇ 11 ರಂದು ನಾಮಪತ್ರ ಪರಿಶೀಲನೆ, 13 ರಂದು ನಾಮಪತ್ರ ಹಿಂಪಡೆಯುವ ದಿನಾಂಕ, ನಿಗದಿ ಮಾಡಲಾಗಿದೆ. ಇನ್ನು ಮೇ 20 ರಂದು ಚುನಾವಣೆ, ಮರು ಮತದಾನಕ್ಕೆ ಅವಶ್ಯಕತೆ ಇದ್ದರೇ ಮೇ 21ರಂದು ಮರು ಮತದಾನ ನಡೆಯಲಿದ್ದು ಮೇ 22 ರಂದು ಮತ ಎಣಿಕೆ  ತಾಲೂಕು ಕೇಂದ್ರದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share: