ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಉ.ಪ್ರ: ಪ್ರತಿಭಟನೆಯಲ್ಲಿ ಪಾಲ್ಗೊಂಡ ಮೂವರ ಮನೆ ಧ್ವಂಸ

ಉ.ಪ್ರ: ಪ್ರತಿಭಟನೆಯಲ್ಲಿ ಪಾಲ್ಗೊಂಡ ಮೂವರ ಮನೆ ಧ್ವಂಸ

Sun, 12 Jun 2022 15:16:41  Office Staff   Vb

ಲಕ್ನೋ: ಪ್ರವಾದಿ ಮುಹಮ್ಮದ್ ಅವರನ್ನು ನಿಂದಿಸಿದ ಕಾರಣಕ್ಕೆ ಬಿಜೆಪಿಯಿಂದ ಅಮಾನತುಗೊಂಡಿರುವ ನೂಪುರ್ ಶರ್ಮಾ ಹಾಗೂ ಪಕ್ಷದಿಂದ ವಜಾಗೊಂಡಿರುವ ನವೀನ್ ಜಿಂದಾಲ್ ವಿರುದ್ಧ ನಡೆದ ಪ್ರತಿಭಟನೆ ಯಲ್ಲಿ ಪಾಲ್ಗೊಂಡ ಮೂವರು ಆರೋಪಿಗಳ ಮನೆಯನ್ನು ಉತ್ತರಪ್ರದೇಶದ ಕಾನ್ದುರ ಹಾಗೂ ಸಹಾರನಪುರದ ಆಡಳಿತ ಶನಿವಾರ ನೆಲಸಮಗೊಳಿಸಿದೆ.

ನೂಪುರ್ ಶರ್ಮಾ ಅವರ ಹೇಳಿಕೆ ವಿರೋಧಿಸಿ ಕಾನ್ಪುರದಲ್ಲಿ ಜೂನ್ 3ರಂದು ಶುಕ್ರವಾರದ ಪ್ರಾರ್ಥನೆ ಬಳಿಕ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. 20 ಮಂದಿ ಪೊಲೀಸರು ಸೇರಿದಂತೆ 49 ಮಂದಿ ಗಾಯಗೊಂಡ ಈ ಹಿಂಸಾಚಾರಕ್ಕೆ ಸಂಬಂಧಿಸಿ 50ಕ್ಕೂ ಅಧಿಕ ಮಂದಿ ಆರೋಪಿಗಳನ್ನು ಬಂಧಿಸ ಲಾಗಿದೆ. ಶುಕ್ರವಾರ ಉತ್ತರಪ್ರದೇಶದ ಸಹಾರನಪುರ, ಮೊರಾದಾಬಾದ್, ಪ್ರಯಾಗ್‌ರಾಜ್‌ ಹಾಗೂ ಇತರ ನಗರಗಳಲ್ಲಿ ಪ್ರತಿಭಟನೆ ಭುಗಿಲೆದ್ದಿತ್ತು.

ಕಳೆದ ವಾರ ಭುಗಿಲೆದ್ದ ಹಿಂಸಾಚಾರದ ಪ್ರಧಾನ ಆರೋಪಿಯ ನಿಕಟ ವರ್ತಿಗೆ ಸೇರಿದ ಎತ್ತರದ ಕಟ್ಟಡವನ್ನು ಕಾನ್ಸರ ಅಭಿವೃದ್ಧಿ ಪ್ರಾಧಿಕಾರ ಶನಿವಾರ ನೆಲಸಮಗೊಳಿಸಿದೆ. ಧ್ವಂಸಗೊಳಿಸಲಾದ ಕಟ್ಟಡ ಪ್ರಕರಣದ ಪ್ರಧಾನ ಆರೋ ಪಿಯಾಗಿರುವ ಝಫರ್ ಹಯಾತ್ ಹು ಅವರ ನಿಕಟವರ್ತಿ ಮುಹಮ್ಮದ್ ಇಸ್ತಿಯಾಕ್ ಅವರಿಗೆ ಸೇರಿದ್ದು ಎಂದು ಪೊಲೀಸ್‌ ಜಂಟಿ ಆಯುಕ್ತ (ಕಾನೂನು ಹಾಗೂ ಸುವ್ಯವಸ್ಥೆ) ಆನಂದ್ ಪ್ರಕಾಶ್ ತಿವಾರಿ ಹೇಳಿದ್ದಾರೆ. ಮೌಲಾನಾ ಅಲಿ ಚೌಹರ್ ಫ್ಯಾನ್ಸ್ ಅಸೋಸಿಯೇಶನ್ ಸಮೂಹಕ್ಕೆ ಹ ಸೇರಿದ್ದಾರೆ. ಕಾನ್ಸರದ ಸ್ವರೂಪ್‌ನಗರದಲ್ಲಿ ಈ ಕಟ್ಟಡ ಇದೆ.

ಇತ್ತೀಚೆಗಿನ ಹಿಂಸಾಚಾರಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳ ಶಹರಣಪುರದಲ್ಲಿರುವ ಮನೆಗಳನ್ನು ಧ್ವಂಸಗೊಳಿಸಲಾಗಿದೆ. ಪೊಲೀಸ್ ಬಿಗಿ ಭದ್ರತೆ ನಡುವೆ ಕಾರ್ಯಾಚರಣೆ ನಡೆಸಲಾಗಿದೆ. ಶಹರಣಪುರದಲ್ಲಿ ಒಟ್ಟು 64 ಮಂದಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ತಿಳಿಸಿದ್ದಾರೆ.


Share: