ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಉಪ್ಪುಂದದಲ್ಲಿ ಮೊಬೈಲ್ ಕಳ್ಳತನ ಮುರುಡೇಶ್ವರದ ನಾಲ್ವರು ಪೊಲೀಸ್ ವಶಕ್ಕೆ

ಉಪ್ಪುಂದದಲ್ಲಿ ಮೊಬೈಲ್ ಕಳ್ಳತನ ಮುರುಡೇಶ್ವರದ ನಾಲ್ವರು ಪೊಲೀಸ್ ವಶಕ್ಕೆ

Tue, 12 Jul 2022 06:10:53  Office Staff   SO NEWS

ಭಟ್ಕಳ: ಪಕ್ಕದ ಬೈಂದೂರು ತಾಲೂಕು ಉಪ್ಪುಂದದಲ್ಲಿ ಮೊಬೈಲ್ ಅಂಗಡಿಗೆ ಕನ್ನ ಹಾಕಿದ ಮುರುಡೇಶ್ವರ ಮೂಲದ ನಾಲ್ವರು ಆರೋಪಿಗಳನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳನ್ನು ಮಹ್ಮದ್ ರಫಿ, ಮಹ್ಮದ್ ರಾಹಿಕ್,  ಮಹ್ಮದ್ ಇಟ್ಬಾಲ್, ಮಹ್ಮದ್ ಆಸೀಫ್ ಎಂದು ಗುರುತಿಸಲಾಗಿದೆ.

ಈ ಸಂಬಂಧ ಉಪ್ಪುಂದದ ಪ್ರಶಾಂತ ಎನ್ನುವವರು ಪೊಲೀಸರಿಗೆ ದೂರು ನೀಡಿದ್ದರು. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

 


Share: