ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಉತ್ತರ ಕನ್ನಡ ಜಿಲ್ಲಾ ನೌಕರ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಉತ್ತರ ಕನ್ನಡ ಜಿಲ್ಲಾ ನೌಕರ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮನವಿ

Thu, 20 Jul 2023 01:57:36  Office Staff   SO News

ಕಾರವಾರ  : ಸರಕಾರಿ ನೌಕರರಿಗೆ ಜೀವನ ನಿರ್ವಹಣೆಗೆ ಅವಶ್ಯಕವಿರುವ 7 ನೇ ವೇತನ ಆಯೋಗವನ್ನು ತಕ್ಷಣ ಜಾರಿ ಮಾಡುವಂತೆ  ಉತ್ತರ ಕನ್ನಡ  ಜಿಲ್ಲಾ ನೌಕರ ಸಂಘ ಒತ್ತಾಯಿಸಿದೆ.

ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರಿಗೆ ಮನವಿ ಸಲ್ಲಿಸಿದ ಸಂಘದ ಪದಾಧಿಕಾರಿಗಳು,   ಸರ್ಕಾರವು ಆಯೋಗದ ಅವಧಿಯನ್ನು 6 ತಿಂಗಳ ಕಾಲ ಮುಂದುಡಿದ್ದು, ಆದಷ್ಟು ಬೇಗ ಆಯೋಗದ ವರದಿಯನ್ನು ಜಾರಿಗೊಳಿಸುವಂತೆ  ಹಾಗೂ ಸರ್ಕಾರಿ ನೌಕರರಿಗೆ ಈಗಿರುವ ಏನ್ ಪಿ ಎಸ್ ವ್ಯವಸ್ಥೆಯನ್ನು ರದ್ದುಪಡಿಸಿ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸಲು ಸರ್ಕಾರ ಈಗಾಗಲೆ  ಸಮಿತಿ ರಚಿಸಲು ಆದೇಶಿಸಿದ್ದು, ಕೂಡಲೇ ಸಮಿತಿಯನ್ನು ರಚಿಸಿ  ವರದಿ ಸಲ್ಲಿಸಿ  ಏನ್ ಪಿ ಎಸ್  ವ್ಯವಸ್ಥೆಯನ್ನು ರದ್ದು ಪಡಿಸಿ ಹಳೆಯ ಪಿಂಚಣಿ ವ್ಯವಸ್ಥೆಯನ್ನು  ಜಾರಿಗೊಳಿಸಿ ಸರಕಾರಿ ನೌಕರರಿಗೆ ಅನುಕೂಲ ಮಾಡಿಕೊಡುವಂತೆ  ಉತ್ತರ ಕನ್ನಡ ಜಿಲ್ಲಾ ನೌಕರ ಸಂಘದ ಜಿಲ್ಲಾಧ್ಯಕ್ಷ ಸಂಜೀವ ಕುಮಾರ ನಾಯ್ಕ  ಜಿಲ್ಲಾ ನೌಕರರ ಪರವಾಗಿ  ಆಗ್ರಹಿಸಿದರು.


Share: