ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಉತ್ತರಕನ್ನಡ : ಪಿಯು ಪರೀಕ್ಷೆಯಲ್ಲಿ ಐದನೇ ಸ್ಥಾನ.

ಉತ್ತರಕನ್ನಡ : ಪಿಯು ಪರೀಕ್ಷೆಯಲ್ಲಿ ಐದನೇ ಸ್ಥಾನ.

Mon, 20 Jun 2022 20:53:08  Office Staff   SO News

ಕಾರವಾರ : ಪ್ರಸ್ತುತ ಸಾಲಿನ ದ್ವೀತಿಯ ಪಿಯುಸಿ  ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು,  ಉತ್ತರಕನ್ನಡ ಜಿಲ್ಲೆ ಈ ಬಾರಿ ಶೇ.74.33 ಫಲಿತಾಂಶದೊಂದಿಗೆ ಐದನೇ ಸ್ಥಾನ ಪಡೆದುಕೊಂಡಿದೆ.

ಜಿಲ್ಲೆಯಲ್ಲಿ ಈ ಬಾರೀ ಒಟ್ಟು 15,317 ವಿದ್ಯಾರ್ಥಿಗಳು ಪರೀಕ್ಷೆಗೆ  ಹಾಜರಾಗಿದ್ದರು. ಅದರಲ್ಲಿ 10,353 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅದರಲ್ಲಿ  ಯುವತಿಯರೇ ಮೇಲುಗೈ  ಸಾಧಿಸಿದ್ದಾರೆ. 

ಸರಕಾರಿ ವಾಣಿಜ್ಯ ಮತ್ತು ಕಲಾ ವಿಭಾಗದಲ್ಲಿಯೇ ಉತ್ತಮ ಫಲಿತಾಂಶ ಬಂದಿದೆ. ಗ್ರಾಮೀಣ ಭಾಗದವರಿಗಿಂತ ನಗರ ಪ್ರದೇಶದ ವಿದ್ಯಾರ್ಥಿಗಳು ಉತ್ತಮ  ಫಲಿತಾಂಶ ಪಡೆದುಕೊಂಡಿದ್ದಾರೆ.

 


Share: