ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಉತ್ತರಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 77.75 ಶೇ. ಮತದಾನ.

ಉತ್ತರಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 77.75 ಶೇ. ಮತದಾನ.

Thu, 11 May 2023 16:52:47  Office Staff   SO News

ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ಮೇ 10ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು ಶೇ. 77.75 ಮತದಾನವಾಗಿದೆ.

ಹಳಿಯಾಳದಲ್ಲಿ ಒಟ್ಟು 141403 ಮತದಾರರು ಹಕ್ಕು ಚಲಾಯಿಸಿದ್ದು ಶೇ. 78.11 ಮತದಾನವಾಗಿದೆ. ಕಾರವಾರದಲ್ಲಿ ಒಟ್ಟು 162483 ಮತದಾರರು ಓಟ್ ಮಾಡಿದ್ದು 74.10ಶೇ. ಹಕ್ಕು ಚಲಾವಣೆಯಾಗಿದೆ.

ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ 146193ಮತದಾರರು ಮತ ಚಲಾಯಿಸಿದ್ದು ಶೇಕಡಾ 77.46 ಮತ ದಾಖಲಾಗಿದೆ.

ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಪುರುಷ ಮತ್ತು ಮಹಿಳೆಯರು ಸೇರಿ ಒಟ್ಟು 171589 ಮತದಾರರು ತಮ್ಮ ಮತ  ಹಾಕಿದ್ದಾರೆ. ಇಲ್ಲಿ ಶೇ.77.05 ಮತದಾನವಾಗಿದೆ.

ಶಿರಸಿಯಲ್ಲಿ 158192 ಮತ ಚಲಾವಣೆಯಾಗಿದ್ದು, ಶೇ. 78.85 ಮತದಾನವಾಗಿದೆ. ಇನ್ನೂ ಬಹು ತುರುಸಿನ ಯಲ್ಲಾಪುರ ಕ್ಷೇತ್ರದಲ್ಲಿ ಒಟ್ಟು 149000 ಮತದಾನಾವಿದ್ದು ಶೇ. 81.71 ಮತ ಚಲಾವಣೆಯಾಗಿದೆ.


Share: